Srinagar: ಜಮ್ಮು ಕಾಶ್ಮೀರದ ವಕೀಲ ಬಾಬರ್ ಖಾದ್ರಿಗೆ ಗುಂಡಿಕ್ಕಿ ಹತ್ಯೆ; ಕೊನೆಗೂ ನಿಜವಾಯ್ತ ಆ ಕೊನೆಯ ಟ್ವೀಟ್?

ಶ್ರೀನಗರದ 40 ವರ್ಷದ ವಕೀಲ ಬಾಬರ್ ಖಾದ್ರಿ ಅವರ ಮೇಲೆ ಉಗ್ರರ ಗುಂಪು ಗುಂಡು ಹಾರಿಸಿದೆ. ಇತ್ತೀಚೆಗೆ ಅವರು ನನ್ನ ಜೀವಕ್ಕೆ ಅಪಾಯವಾಗಬಹುದು ಎಂದು ಟ್ವೀಟ್ ಮಾಡಿದ್ದರು. ಅದಾದ ಮೂರೇ ದಿನಕ್ಕೆ ಅವರನ್ನು ಕೊಲೆ ಮಾಡಲಾಗಿದೆ.

Sushma Chakre | news18-kannada
Updated:September 25, 2020, 8:35 AM IST
Srinagar: ಜಮ್ಮು ಕಾಶ್ಮೀರದ ವಕೀಲ ಬಾಬರ್ ಖಾದ್ರಿಗೆ ಗುಂಡಿಕ್ಕಿ ಹತ್ಯೆ; ಕೊನೆಗೂ ನಿಜವಾಯ್ತ ಆ ಕೊನೆಯ ಟ್ವೀಟ್?
ವಕೀಲ ಬಾಬರಿ ಖಾದ್ರಿ
  • Share this:
ಶ್ರೀನಗರ (ಸೆ. 25): ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ ಹವಾಲ್ ಪ್ರದೇಶದಲ್ಲಿ ಅಪರಿಚಿತ ಉಗ್ರರು ಖ್ಯಾತ ವಕೀಲರೊಬ್ಬರನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ನಿನ್ನೆ ಸಂಜೆ 6.25ರ ವೇಳೆಗೆ ಈ ಘಟನೆ ನಡೆದಿದ್ದು, ಗುಂಡಿನ ದಾಳಿಯಿಂದ ವಕೀಲ ಬಾಬರ್ ಖಾದ್ರಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಪ್ರಾಣ ಹೋಗಿತ್ತು. ಎಸ್​ಕೆಐಎಂಎಸ್​ ಆಸ್ಪತ್ರೆಗೆ ಅವರನ್ನು ಕರೆದೊಯ್ದಾಗ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಬಾಬರ್ ಖಾದ್ರಿ ಹತ್ಯೆಗೆ ಓಮರ್ ಅಬ್ದುಲ್ಲ ಸೇರಿದಂತೆ ಹಲವರು ಟ್ವಿಟ್ಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ.

40 ವರ್ಷದ ವಕೀಲ ಬಾಬರ್ ಖಾದ್ರಿ ಅವರ ಮೇಲೆ ಉಗ್ರರ ಗುಂಪು ಗುಂಡು ಹಾರಿಸಿದೆ. ಬಾಬರ್ ಖಾದ್ರಿ ಹಲವು ಪತ್ರಿಕೆಗಳಲ್ಲಿ ಬರೆಯುತ್ತಿದ್ದರು ಮತ್ತು ಟಿವಿಗಳ ಚರ್ಚೆಯಲ್ಲಿ ಕೂಡ ಭಾಗಿಯಾಗುತ್ತಿದ್ದರು. ಇತ್ತೀಚೆಗೆ ಅವರು 'ನನ್ನ ಜೀವಕ್ಕೆ ಅಪಾಯವಾಗಬಹುದು' ಎಂದು ಟ್ವೀಟ್ ಮಾಡಿದ್ದರು. ಅದಾದ ಮೂರೇ ದಿನಕ್ಕೆ ಅವರನ್ನು ಕೊಲೆ ಮಾಡಲಾಗಿದೆ.
ನಾನು ಏಜೆನ್ಸಿಗಳಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಷಾಹ್ ನಾಜೀರ್ ಎಲ್ಲೆಡೆ ಸುಳ್ಳು ಸುದ್ದಿಗಳನ್ನು ಹರಡಿದ್ದಾರೆ. ಅವರ ವಿರುದ್ಧ ಎಫ್​ಐಆರ್ ದಾಖಲಿಸಿಕೊಳ್ಳಬೇಕೆಂದು ರಾಜ್ಯದ ಪೊಲೀಸ್ ಅಧಿಕಾರಿಗಳ ಬಳಿ ಮನವಿ ಮಾಡುತ್ತೇನೆ. ಷಾಹ್ ನಾಜೀರ್ ಹರಡಿರುವ ಈ ವದಂತಿಗಳಿಂದ ನನ್ನ ಪ್ರಾಣಕ್ಕೆ ಆಪತ್ತು ಬರುವ ಸಾಧ್ಯತೆಯೂ ಇದೆ ಎಂದು ಬಾಬರ್ ಖಾದ್ರಿ ಕೊನೆಯದಾಗಿ ಟ್ವೀಟ್ ಮಾಡಿದ್ದರು.


ಈ ಮೂಲಕ 24 ಗಂಟೆಗಳಲ್ಲಿ ಉಗ್ರರ ಗುಂಡೇಟಿಗೆ ಇಬ್ಬರು ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರು ಬಲಿಯಾದಂತಾಗಿದೆ. ಬುಧವಾರ ರಾತ್ರಿ ಜಮ್ಮುವಿನ ಬುದ್ಗಾಂ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಭೂಪೀಂದರ್ ಸಿಂಗ್ ಕೂಡ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ನಿನ್ನೆ ವಕೀಲ ಬಾಬರ್ ಖಾದ್ರಿ ಭಯೋತ್ಪಾದಕರ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ.
Published by: Sushma Chakre
First published: September 25, 2020, 8:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading