ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ಇಬ್ಬರು ಲಷ್ಕರ್-ಎ-ತೊಯ್ಬಾ (LET) ಭಯೋತ್ಪಾದಕರು (Terrorists) ಸೆರೆಸಿಕ್ಕಿದ್ದಾರೆ. ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಇಬ್ಬರು ಉಗ್ರರನ್ನು ಗ್ರಾಮಸ್ಥರೇ ಸದೆಬಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರಿಗೆ ಸೆರೆಸಿಗದ ಭಯೋತ್ಪಾದಕರನ್ನು ಗ್ರಾಮದ ಜನರೇ ಸ್ವತಃ ಭಂದಿಸಿ ಪೊಲೀಸರಿಗೆ ಒಪ್ಪಿಸಿದ್ದು, ಬಹಳ ವಿಶೇಷವಾಗಿದೆ. ಅಲ್ಲದೇ ಈ ವಿಚಾರವನ್ನು ಸ್ವತಃ ಅಧಿಕಾರಿಗಳೇ ಟ್ವಿಟರ್ ಮೂಲಕ ತೀಳಿಸಿದ್ದಾರೆ. ರಜೌರಿ ಜಿಲ್ಲೆಯ ನಿವಾಸಿಯಾಗಿರುವ ಎಲ್‌ಇಟಿ ಕಮಾಂಡರ್ ತಾಲಿಬ್ ಹುಸೇನ್ ಮತ್ತು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಐಇಡಿ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವರ್ಗೀಕೃತ ಭಯೋತ್ಪಾದಕ ಫೈಝಲ್ ಅಹ್ಮದ್ ದಾರ್ ಅವರನ್ನು ತುಕ್ಸಾನ್ (Tukson Dhok) ಗ್ರಾಮದಲ್ಲಿ ಸೆರೆಹಿಡಿಯಲಾಗಿದೆ ಎಂದು ಅಧಿಕಾರಿ ಒಬ್ಬರು ಹೇಳಿದ್ದಾರೆ.
ಭಯೋತ್ಪಾದಕರನ್ನು ಸೆರೆ ಹಿಡಿದ ಗ್ರಾಮಸ್ಥರು:
ಇನ್ನು, ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ಇಬ್ಬರು ಲಷ್ಕರ್-ಎ-ತೊಯ್ಬಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಇಬ್ಬರು ಉಗ್ರರನ್ನು ಗ್ರಾಮಸ್ಥರೇ ಸದೆಬಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಜೌರಿ ಜಿಲ್ಲೆಯ ನಿವಾಸಿಯಾಗಿರುವ ಎಲ್‌ಇಟಿ ಕಮಾಂಡರ್ ತಾಲಿಬ್ ಹುಸೇನ್ ಮತ್ತು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಐಇಡಿ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವರ್ಗೀಕೃತ ಭಯೋತ್ಪಾದಕ ಫೈಝಲ್ ಅಹ್ಮದ್ ದಾರ್ ಅವರನ್ನು ತುಕ್ಸಾನ್ ಗ್ರಾಮದಲ್ಲಿ ಸೆರೆಹಿಡಿಯಲಾಗಿದೆ.
I salute the bravery of villagers of Tukson Dhok, Reasi, who apprehended two most-wanted terrorists. Such determination by common man shows end of terrorism is not far away. UT Govt to extend Rs. 5 Lakh cash reward to villagers for gallant act against terrorists and terrorism.
— Office of LG J&K (@OfficeOfLGJandK) July 3, 2022
ಇದನ್ನೂ ಓದಿ: Amazon Boy: ಬಾಲಕಿ ಕೆನ್ನೆ ಸೀಳಿದ ರಾಡ್, ಡೆಲಿವರಿ ಬಾಯ್ ಸಹಾಯದಿಂದ ಬಾಲಕಿ ಬಚಾವ್
ಬದಲಾಗಿದೆ ಜಮ್ಮು:
ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ ವಾತಾವರಣ ಬದಲಾಗುತ್ತಿದೆ. ಇಷ್ಟು ದಿನಗಳ ಕಾಲ ಸೈನಿಕರಷ್ಟೇ ಉಗ್ರರನ್ನು ಬಂಧಿಸುವಲ್ಲಿ ನಿರತರಾಗುತ್ತಿದ್ದರು. ಇದೀಗ ಗ್ರಾಮಸ್ಥರೇ ಸ್ವತಃ ಭಯೋತ್ಪಾದಕರನ್ನು ಬಂಧಿಸಿ ಸೈನಿಕರಿಗೆ ಒಪ್ಪಿಸಿದ್ದಾರೆ. ರಿಯಾಸಿ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Rebel MLAಗಳ ಜೊತೆಗೆ ಗೋವಾದ ಹೋಟೆಲ್‌ನಲ್ಲಿದ್ದರು ಅವರಿಬ್ಬರು! ಶಾಸಕರಲ್ಲ, ಹಾಗಿದ್ರೆ ಆ ಮಹಿಳೆ-ಪುರುಷ ಯಾರು?
ಎಲ್‍ಇಟಿಯ ಇಬ್ಬರು ಭಯೋತ್ಪಾದಕರು ರಿಯಾಸಿ ಜಿಲ್ಲೆಯ ಟುಕ್ಸಾನ್‍ದಲ್ಲಿ ಅಡಗಿದ್ದರು. ಇದನ್ನು ತಿಳಿದ ಸ್ಥಳಿಯರು ಶಸ್ತ್ರಾಸ್ತ್ರಗಳೊಂದಿಗೆ ಈ ಇಬ್ಬರು ಉಗ್ರರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಉಗ್ರರ ಬಳಿ 2 ಎಕೆ -47 ರೈಫಲ್‍ಗಳು, 7 ಗ್ರೆನೇಡ್‍ಗಳು ಹಾಗೂ ಪಿಸ್ತೂಲ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ