ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ; ಗೃಹ ಸಚಿವ ಅಮಿತ್​ ಶಾ ಮಂಡನೆ

ಮಂಡನೆ ವೇಳೆ ಜಮ್ಮು-ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಇತಿಹಾಸ ಕೆದಕಿದ ಅಮಿತ್​​ ಶಾ, ಕಾಂಗ್ರೆಸ್ಸಿಗೆ ತರಾಟೆ ತೆಗೆದುಕೊಂಡಿದ್ಧಾರೆ.

Ganesh Nachikethu | news18
Updated:July 1, 2019, 4:40 PM IST
ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ; ಗೃಹ ಸಚಿವ ಅಮಿತ್​ ಶಾ ಮಂಡನೆ
ಅಮಿತ್ ಶಾ.
  • News18
  • Last Updated: July 1, 2019, 4:40 PM IST
  • Share this:
ನವದೆಹಲಿ(ಜುಲೈ.01): ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರು, ಸೋಮವಾರ(ಇಂದು) ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ ಮಂಡಿಸಿದ್ಧಾರೆ. ಮಂಡನೆ ವೇಳೆ ಜಮ್ಮು-ಕಾಶ್ಮೀರದ ಇತಿಹಾಸ ಕೆದಕಿದ ಅಮಿತ್​​ ಶಾ, ಕಾಂಗ್ರೆಸ್ಸಿಗೆ ತೀವ್ರ ತರಾಟೆ ತೆಗೆದುಕೊಂಡಿದ್ಧಾರೆ. ಅಲ್ಲದೇ ರಾಷ್ಟ್ರಪತಿ ಆಡಳಿತವನ್ನು ಇನ್ನೂ ಆರು ತಿಂಗಳವರೆಗೂ ವಿಸ್ತರಿಸಲು ಪ್ರಸ್ತಾವ ಸಲ್ಲಿಸಿದ್ದೇನೆ'' ಎಂದು ರಾಜ್ಯಸಭೆಗೆ ತಿಳಿಸಿದ್ಧಾರೆ.

ಕಳೆದ ಮೂರು ದಿನಗಳ ಹಿಂದೆ ಲೋಕಸಭೆಯಲ್ಲಿ ಕೂಡ ಜಮ್ಮು-ಕಾಶ್ಮೀರ ಮೀಸಲಾತಿ ತಿದ್ದಪಡಿ ಮಸೂದೆಯನ್ನು ಅಮಿತ್​ ಶಾ ಮಂಡಿಸಿದ್ದರು. ಈ ವೇಳೆ ಮಾತಾಡಿದ ಅವರು, 'ಈ ಮೀಸಲಾತಿ ಯಾರನ್ನೂ ಕೂಡ ಮೆಚ್ಚಿಸಲು ಅಲ್ಲ. ಬದಲಿಗೆ ನಿರಂತರ ಉಗ್ರರ ದಾಳಿ ಹಾಗೂ ಬಾಂಬ್ ಸ್ಪೋಟಕ್ಕೆ ತತ್ತರಿಸಿ ಹೋಗುತ್ತಿರುವ ಜನ ಮತ್ತು ವಿದ್ಯಾರ್ಥಿಗಳಿಗೆ ಆಶ್ರಯ ನೀಡಲು ಜಾರಿಗೆ ಮಾಡಬೇಕಿದೆ. ಇಂತಹ ಮಸೂದೆಯಿಂದ ಕಥುವಾ, ಸಾಂಬಾ ಮತ್ತು ಜಮ್ಮುವಿನಲ್ಲಿ ವಾಸಿಸುವ 3.5 ಲಕ್ಷ ಜನರಿಗೆ ಸಹಾಯವಾಗಲಿದೆ ಎಂದರು.

ಸದ್ಯ ಕಾನೂನಿನ ಪ್ರಕಾರ ರಾಜ್ಯದಲ್ಲಿ ಶೇಕಡಾ 43 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಈ ಪೈಕಿ ಶೇ. 3ರಷ್ಟು ನಿಯಂತ್ರಣ ರೇಖೆಯ ಉದ್ದಕ್ಕೂ ವಾಸಿಸುವ ಜನರಿಗೆ ಲಭ್ಯವಾಗುತ್ತಿದೆ. ನಾವು ಜಾರಿಗೆ ಮಾಡಲಿರುವ ನೂತನ ಮಸೂದೆ ರಾಜ್ಯದ ಅಂತರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಜನರಿಗೆ ಶೇಕಡಾ 3 ರಷ್ಟು ಮೀಸಲಾತಿ ವಿಸ್ತರಿಸಲು ಅವಕಾಶ ನೀಡುತ್ತದೆ ಎಂದರು ಗೃಹ ಸಚಿವರು.

ಇದನ್ನೂ ಓದಿ: ಬಿಸಿಲಿನ ಬೇಗೆಗೆ ತತ್ತರಿಸಿ ಹೋದ ದೆಹಲಿ; ಬೇಸಿಗೆ ರಜೆ ವಿಸ್ತರಿಸಿದ ಆಪ್​​ ಸರ್ಕಾರ

ಇದೇ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತದ ಇನ್ನೂ ಆರು ತಿಂಗಳು ವಿಸ್ತರಣೆ ಮಾಡಬೇಕೆಂದು ಪ್ರಸ್ತಾಪಿಸಿದರು. ಇದಕ್ಕೆ ಈಗ ಲೋಕಸಭೆಯೂ ಸಮ್ಮತಿ ನೀಡಿದೆ. ಈ ವರ್ಷದ ಅಂತ್ಯದ ವೇಳೆಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೂ ರಾಷ್ಟ್ರಪತಿ ಆಡಳಿತ ಇರಲಿದೆ ಎಂದು ಹೇಳಿದರು.

"ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಅಸ್ತಿತ್ವದಲ್ಲಿಲ್ಲ. ಹೀಗಾಗಿ ನಾನು ರಾಷ್ಟ್ರಪತಿ ಆಡಳಿತ ಮತ್ತೆ ಆರು ತಿಂಗಳವರೆಗೆ ವಿಸ್ತರಿಸುವ ಮಸೂದೆ ತಂದಿದ್ದೇನೆ. "ಚುನಾವಣಾ ಆಯೋಗವು ಕೇಂದ್ರ ಮತ್ತು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಿದೆ. ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಿದೆ ಎಂದು ನಿರ್ಧರಿಸಿದೆ ಎಂದು ಪ್ರಸ್ತಾಪಿಸಿದರು.
--------------
First published:July 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ