ಪುಲ್ವಾಮಾದಲ್ಲಿ ಮತ್ತೊಂದು ದಾಳಿಗೆ ಉಗ್ರರ ಸಂಚು; ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್​

ಎನ್​ಕೌಂಟರ್​ನಲ್ಲಿ ಮೃತನಾಗಿದ್ದ ಜಾಕೀರ್​ ಮೂಸಾ ಸಾವಿನ ಸೇಡು ತೀರಿಸಿಕೊಳ್ಳಲು ಪುಲ್ವಾಮಾದಲ್ಲಿ ಮತ್ತೊಮ್ಮೆ ಬಾಂಬ್​ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಪಾಕಿಸ್ತಾನ ಭಾರತಕ್ಕೆ ಮಾಹಿತಿ ನೀಡಿತ್ತು.

Sushma Chakre | news18
Updated:June 17, 2019, 10:35 AM IST
ಪುಲ್ವಾಮಾದಲ್ಲಿ ಮತ್ತೊಂದು ದಾಳಿಗೆ ಉಗ್ರರ ಸಂಚು; ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್​
ಆವಂತಿಪುರದಲ್ಲಿ ಗಸ್ತು ತಿರುಗುತ್ತಿರುವ ಭದ್ತತಾ ಪಡೆ
Sushma Chakre | news18
Updated: June 17, 2019, 10:35 AM IST
ಶ್ರೀನಗರ (ಜೂ. 16): ಈ ಹಿಂದೆ ನಡೆದಿದ್ದ ದಾಳಿಯ ಮಾದರಿಯಲ್ಲೇ ಪುಲ್ವಾಮಾದಲ್ಲಿ ಉಗ್ರರು ಮತ್ತೊಂದು ದಾಳಿ ನಡೆಸುವ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

ಪುಲ್ವಾಮಾ ಜಿಲ್ಲೆ ಮೇಲೆ ಮತ್ತೊಮ್ಮೆ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಪಾಕಿಸ್ತಾನ ಭಾರತಕ್ಕೆ ಮಾಹಿತಿ ನೀಡಿದೆ. ಈ ಮಾಹಿತಿಯನ್ನು ಭಾರತೀಯ ಭದ್ರತಾ ಪಡೆ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ರೀತಿಯ ಎಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ವಾಹನಗಳಿಗೆ ಆಧುನಿಕ ರೀತಿಯ ಸ್ಫೋಟಕಗಳನ್ನು ಅಳವಡಿಸಿ ಪುಲ್ವಾಮಾ ಜಿಲ್ಲೆಯ ಆವಂತಿಪುರದ ಸುತ್ತಮುತ್ತ ಮಾರಣಾಂತಿಕ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಭಾರತೀಯ ಭದ್ರತಾ ಪಡೆ ಹೈ ಅಲರ್ಟ್​ ಘೋಷಿಸಿದೆ. ಈ ಬಗ್ಗೆ ಭಾರತೀಯ ಭದ್ರತಾ ಪಡೆಯ ಅಧಿಕಾರಿಗಳು ಅಮೆರಿಕದೊಂದಿಗೂ ಮಾತುಕತೆ ನಡೆಸಿದ್ದಾರೆ.

ನಡುರಸ್ತೆಯಲ್ಲೇ ಬೆಂಕಿ ಹಚ್ಚಿ ಮಹಿಳಾ ಪೊಲೀಸ್​ ಅಧಿಕಾರಿಯ ಹತ್ಯೆ; ಕೇರಳದಲ್ಲೊಂದು ಬೆಚ್ಚಿಬೀಳಿಸುವ ಘಟನೆ

ಕಳೆದ ತಿಂಗಳು ಆಲ್​ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಜಾಕೀರ್​ ಮೂಸಾ ಎಂಬ ಉಗ್ರ ತ್ರಾಲ್​ನಲ್ಲಿ ಭಾರತೀಯ ಭದ್ರತಾ ಪಡೆ ನಡೆಸಿದ್ದ ಎನ್​ಕೌಂಟರ್​ನಲ್ಲಿ ಮೃತಪಟ್ಟಿದ್ದ. ಆತನ ಸಾವಿನ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನಿ ಉಗ್ರರು ಪುಲ್ವಾಮಾ ಮೇಲೆ ಮತ್ತೊಂದು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಭದ್ರತಾ ಪಡೆಯ ಅಧಿಕಾರಿ ಹೇಳಿಕೆ ನೀಡಿದ್ದಾರೆ.

ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್​ಪಿಎಫ್​ ಯೋಧರು ಮೃತರಾಗಿದ್ದರು. ಆ ಘಟನೆ ನಡೆದ ಲೆತ್​ಪುರ ಇದೀಗ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿರುವ ಆವಂತಿಪುರದಿಂದ ಕೇವಲ 7 ಕಿ.ಮೀ. ಅಂತರದಲ್ಲಿದೆ.

ಇಂದು ಆಂಧ್ರಪ್ರದೇಶ, ತೆಲಂಗಾಣಕ್ಕೆ ಮುಂಗಾರು ಪ್ರವೇಶ; ಕರಾವಳಿ ತೀರದಲ್ಲಿ ಹೈ ಅಲರ್ಟ್​​

ಪಾಕಿಸ್ತಾನದಿಂದ ಉಗ್ರರ ದಾಳಿಯ ಮಾಹಿತಿ ಸಿಕ್ಕಿರುವುದು ನಿಜ ಎಂದು ಒಪ್ಪಿಕೊಂಡಿರುವ ಭದ್ರತಾ ಪಡೆಯ ಅಧಿಕಾರಿಗಳು, ದಾಳಿ ನಡೆದಾಗ ತಮ್ಮ ದೇಶದ ಮೇಲೆ ಯಾವುದೇ ಆರೋಪ ಬರಬಾರದೆಂದು ಪಾಕಿಸ್ತಾನ ಈ ರೀತಿಯ ಮಾಹಿತಿ ಹಂಚಿಕೊಂಡಿದೆಯಾ ಅಥವಾ ನಿಜವಾಗಲೂ ಭಾರತೀಯ ಸೇನೆಯನ್ನು ಎಚ್ಚರಿಸುವ ಉದ್ದೇಶದಿಂದ ಮಾಹಿತಿ ನೀಡಿದೆಯಾ ಎಂಬುದು ಗೊತ್ತಾಗಿಲ್ಲ ಎಂದಿದ್ದಾರೆ.
Loading...

First published:June 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...