ಕೇಂದ್ರ ಭೂಪಟದಲ್ಲಿ ಜಮ್ಮು- ಕಾಶ್ಮೀರ ಇಲ್ಲಾ?!


Updated:April 12, 2018, 6:28 PM IST
ಕೇಂದ್ರ ಭೂಪಟದಲ್ಲಿ ಜಮ್ಮು- ಕಾಶ್ಮೀರ ಇಲ್ಲಾ?!

Updated: April 12, 2018, 6:28 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ ಪ್ರದೇಶವೇ ? ಹೀಗೊಂದು ಪ್ರಶ್ನೆ ಇತ್ತೀಚಿಗೆ ಕೇಂದ್ರ ಆರೋಗ್ಯ ಸಚಿವಾಲಯ ನಡೆಸಿದ ಕಾರ್ಯಕ್ರಮದಲ್ಲಿ ಮೂಡಿದೆ.

ಹೌದು! ಬುಧವಾರದಂದು ಕೇಂದ್ರ ಆರೋಗ್ಯ ಸಚಿವಾಲಯ ಏರ್ಪಡಿಸಿದ್ದ ಕಾರ್ಯಕ್ರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲಿತ ಸಂಸ್ಥೆಯೊಂದು ಸಿದ್ಧಪಡಿಸಿದ ಭೂಪಟವನ್ನು ನೀಡಲಾಗಿತ್ತು. ಈ ಮ್ಯಾಪ್​ನಲ್ಲಿ ಜಮ್ಮು ಹಾಗೂ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲೇ ಇಲ್ಲ. ಅಲ್ಲದೇ ಚೀನಾ ಗಡಿಯಲ್ಲಿ ಭಾಗದಲ್ಲಿರುವ ಅಕ್ಸಯ್​ನ್ನು ಚೀನಾಗೆ ಸೇರಿಸಲಾಗಿದೆ ಐಎಎನ್​ಎಸ್​ ವರದಿ ಮಾಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಪಿಎಂಎನ್​ಸಿಹೆಚ್​ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಅಚಾತುರ್ಯ ಸಂಭವಿಸಿದ್ದು, ಈ ಕಾರ್ಯಕ್ರಮವನ್ನು ಕೇಂದ್ರ ಸಚಿವ ಜೆಪಿ ನಡ್ಡಾ ಉದ್ಘಾಟನೆ ಮಾಡಿದ್ದು ಪ್ರಧಾನಿ ಮೋದಿ ಕ್ಯಾಬಿನೆಟ್​ನ ಇಬ್ಬರು ರಾಜ್ಯ ಸಚಿವರಾದ ಅಶ್ವಿನಿ ಕುಮಾರ್​ ಹಾಗೂ ಅನುಪ್ರಿಯ ಪಟೇಲ್​ ಕೂಡಾ ಭಾಗವಹಿಸಿದ್ದರು.

ಈ ಭೂಪಟದಲ್ಲಿ ಅಕ್ಸಯ್​ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ಚೀನಾಗೆ ಬಿಟ್ಟುಕೊಡಲಾಗಿದೆ. ಅಕ್ಸಯ್​ ಪ್ರದೇಶ ಲಾಢಾಕ್​ ಬಳಿ ಇದ್ದು, ಈ ಪ್ರದೇಶದ ನಿರ್ವಹಣೆಯನ್ನು ಚೀನಾವೇ ನೊಡಿಕೊಳ್ಳುತ್ತಿದೆ. ಆದರೆ ಭಾರತ ಈ ಪ್ರದೇಶವನ್ನು ಲಾಢಾಕ್​ಗೆ ಸೇರಿದ್ದು ಎಂದು ಹೇಳಿಕೊಂಡಿದೆ.
First published:April 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...