ನವದೆಹಲಿ: ಭಾರತ ನಮ್ಮ ದೇಶ. (India) ಈ ದೇಶ ನರೇಂದ್ರ ಮೋದಿ (Narendra Modi) ಮತ್ತು ಮೋಹನ್ ಭಾಗವತ್ (Mohan Bhagwat) ಅವರಿಗೆ ಎಷ್ಟು ಸೇರಿದೆಯೋ ಅದರಂತೆ ಈ ದೇಶ ಮಹಮೂದ್ ಅವರಿಗೂ ಸೇರಿದೆ ಎಂದು ಜಮೀಯತ್ ಉಲೇಮಾ-ಎ-ಹಿಂದ್ (jamiat Ulema-e-Hind) ಮುಖ್ಯಸ್ಥ ಮಹಮೂದ್ ಮದನಿ (Mahmood Madani) ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ 34ನೇ ಸಾಮಾನ್ಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮಹಮೂದ್ ಮದನಿ, ಭಾರತವು ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಸೇರಿದ್ದಂತೆ ಮಹಮೂದ್‌ಗೆ ಕೂಡ ಸೇರಿದೆ. ಅವರು ಮಹಮೂದ್‌ಗಿಂತ ಒಂದು ಇಂಚು ಮುಂದಿಲ್ಲ ಎಂದು ಹೇಳಿದ್ದಾರೆ.
ಈ ಭಾರತ ಭೂಮಿ ಮುಸ್ಲಿಮರ ಮೊದಲ ತಾಯ್ನಾಡು ಜಮೀಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮಹಮೂದ್ ಮದನಿ, ಇಸ್ಲಾಂ ಧರ್ಮವು ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು ಮತ್ತು ಆಧಾರ ರಹಿತ ಅಭಿಪ್ರಾಯವಾಗಿದೆ. ಇಸ್ಲಾಂ ಧರ್ಮವು ಎಲ್ಲಾ ಧರ್ಮಗಳಲ್ಲಿ ಅತ್ಯಂತ ಹಳೆಯ ಧರ್ಮವಾಗಿದೆ. ಹಿಂದಿ ಮುಸ್ಲಿಮರಿಗೆ ಭಾರತ ಅತ್ಯುತ್ತಮ ದೇಶ ಎಂದು ಹೇಳಿದರು.
ಇದನ್ನೂ ಓದಿ: FIFA World Cup-2022: ಫುಟ್ಬಾಲ್ ಸ್ಟಾರ್ಸ್ ಬಗ್ಗೆ ಅಭಿಮಾನ ಬೇಡ! ಅದು ಇಸ್ಲಾಂಗೆ ವಿರುದ್ಧ ಎಂದ ಮುಸ್ಲಿಂ ಸಂಘಟನೆ!
ಇಸ್ಲಾಮಾಫೋಬಿಯಾ ಹೆಚ್ಚುತ್ತಿದೆ
ಭಾರತದಲ್ಲಿ ದ್ವೇಷದ ಭಾಷಣಗಳು ಮತ್ತು ಇಸ್ಲಾಫೋಬಿಯಾ ಘಟನೆಗಳು ಹೆಚ್ಚುತ್ತಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ ಜಮೀಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮಹಮೂದ್ ಮದನಿ, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ಜೊತೆಗೆ ನಮ್ಮ ಸಮುದಾಯವನ್ನು ಪ್ರಚೋದಿಸುವ ಪ್ರಕರಣಗಳು ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಸ್ಲಾಮಾಫೋಬಿಯಾ ನಮ್ಮ ದೇಶದಲ್ಲಿ ಆತಂಕಕಾರಿ ಮಟ್ಟಕ್ಕೆ ಬಂದು ನಿಂತಿದೆ. ಈ ದೇಶದ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರತ್ಯೇಕ ಕಾನೂನು ತರಬೇಕು ಎಂದು ಮಹಮೂದ್ ಮದನಿ ಸರ್ಕಾರವನ್ನು ಒತ್ತಾಯಿಸಿದರು.
ಇನ್ನು ದೇಶದ ಸಮಗ್ರತೆಯನ್ನು ಖಾತರಿ ಪಡಿಸುವುದು ಮತ್ತು ದೇಶವನ್ನು ಒಳ್ಳೆಯ ಮಾರ್ಗದಲ್ಲಿ ಹೇಗೆ ನಿರ್ಮಿಸುವುದು ಎಂಬುವುದರ ಕುರಿತು ಸರ್ಕಾರದ ಗಮನವನ್ನು ಸೆಳೆಯಲು ಜಮೀಯತ್ ಉಲೇಮಾ-ಎ-ಹಿಂದ್ ಬಯಸುತ್ತದೆ ಎಂದ ಮಹಮೂದ್ ಮದನಿ, ಜಮಿಯತ್ ಉಲೇಮಾ ಎ ಹಿಂದ್ ಪ್ರಸ್ತಾಪಿಸಿದ ಅಂಶಗಳು ಮತ್ತು ದ್ವೇಷವನ್ನು ಹರಡುವ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: Triple Talaq: ತಲಾಖ್‌ಗೆ ಹೆದರಿ ಹಿಂದೂ ಧರ್ಮಕ್ಕೆ ಮತಾಂತರ, ಹಿಂದೂ ಹುಡುಗನನ್ನೇ ಮದ್ವೆಯಾದ ಮುಸ್ಲಿಂ ಯುವತಿ!
ಅಂಬೇಡ್ಕರ್ ವಿರುದ್ಧ ನಾಲಿಗೆ ಹರಿಬಿಟ್ಟವ ಅಂದರ್
ಹೈದರಾಬಾದ್: ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದ ಮೇಲೆ ತೆಲಂಗಾಣ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕಿಡಿಗೇಡಿಯನ್ನು ಹಮಾರಾ ಪ್ರಸಾದ್ ಎಂದು ಗುರುತಿಸಲಾಗಿದ್ದು, ಈತ ‘ಅಂಬೇಡ್ಕರ್ ಏನಾದರೂ ಬದುಕಿದ್ದರೆ ಗಾಂಧಿಯನ್ನು ಗೋಡ್ಸೆ ಕೊಂದಂತೆ ಕೊಲ್ಲುತ್ತಿದ್ದೆ’ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾನೆ.
ಡಾ.ಬಿ ಆರ್ ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಿ ಹಮಾರಾ ಪ್ರಸಾದ್ ವಿರುದ್ಧ ಬಹುಜನ ಸಮಾಜ ಪಾರ್ಟಿಯ ತೆಲಂಗಾಣ ಘಟಕದ ಮುಖ್ಯಸ್ಥ ಆರ್ ಎಸ್ ಪ್ರವೀಣ್ ಕುಮಾರ್ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದು, ಆಗ ಈ ವಿಡಿಯೋ ಕುರಿತು ಜನರಿಗೆ ತಿಳಿದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ಹಮಾರಾ ಪ್ರಸಾದ್ ತೆಲಂಗಾಣದಲ್ಲಿ ಕಾರ್ಯಾಚರಿಸುತ್ತಿರುವ ಹಿಂದುತ್ವ ಪರ ಸಂಘಟನೆಯೊಂದರ ನಾಯಕ ಎಂದು ತಿಳಿದು ಬಂದಿದೆ.
ಪ್ರಕರಣದ ಗಂಭೀರತೆ ಅರಿತ ಹೈದರಾಬಾದ್ ಪೊಲೀಸರು ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಿ ಹಮಾರಾ ಪ್ರಸಾದ್ ವಿರುದ್ಧ ಸೆಕ್ಷನ್ 153 ಎ ಮತ್ತು 505 (2) ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ