International Beggar: ಪಾಕ್​ ಪ್ರಧಾನಿ `ಇಂಟರ್​ನ್ಯಾಷನಲ್​ ಭಿಕ್ಷುಕ’ ಅಂತೆ.. ಇಮ್ರಾನ್​ ಖಾನ್​ಗೆ ಹೀಗ್​ ಅಂದಿದ್ಯಾಕೆ ಜಮಾಯತ್​ ಮುಖ್ಯಸ್ಥ?

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (International Monetary Fund -IMF) ತುರ್ತಾಗಿ ಒಂದು ಶತಕೋಟಿ ಡಾಲರ್ ಸಾಲ ಪಡೆಯುತ್ತಿರುವುದನ್ನು ನೋಡಿದರೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ ನಿಜಕ್ಕೂ ಅಂತಾರಾಷ್ಟ್ರೀಯ ಭಿಕ್ಷುಕನೇ ಸರಿ ಎಂದು ಜಮಾಯತ್ ವ್ಯಾಖ್ಯಾನಿಸಿದೆ.

ಇಮ್ರಾನ್​ ಖಾನ್​

ಇಮ್ರಾನ್​ ಖಾನ್​

  • Share this:
 ಏನೋ ಮಾಡಲು ಹೋಗಿ ಮತ್ತಿನ್ನೆನೋ ಮಾಡಿದರು ಅನ್ನೋಕೆ ಉತ್ತಮ ಉದಾಹರಣೆ ಅಂದರೆ, ಅದು ಪಾಕಿಸ್ತಾನ(Pakistan)ದ ಪ್ರಧಾನಿ ಇಮ್ರಾನ್​ ಖಾನ್(Imran Khan)​. ಸುಮ್ಮನೆ ಇರದೇ ಯಾವಗಲೂ ಭಾರತದ ಬಗ್ಗೆ ಹೇಳಿಕೆ ನೀಡಿ, ತಾನೆ ವಿವಾದಕ್ಕೆ ಗುರಿಯಾಗುತ್ತಾರೆ. ಇಲ್ಲ ಸಲ್ಲದ ಹೇಳಿಕೆ ನೀಡಿ ಬಿಲ್ಡಪ್​(Buildup) ತೆಗೆದುಕೊಳ್ಳಲು ಹೋಗಿ ನಗೆಪಾಟಿಲಿಗೆ ಈಡಾಗುತ್ತಾರೆ. ಮೊನ್ನೆಯೂ ಹಾಗೇ ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ (Pakistan Prime Minister) ಜನಾಬ್ ಇಮ್ರಾನ್​ ಖಾನ್ ಫರ್ಮಾನು ಹೊರಡಿಸಿ, ನಗೆಪಾಟಲಿಗೀಡಾದ್ದರು. ಅವರ ಜನರಿಂದಲೇ ಟೀಕೆಗೆ ಗುರಿಯಾಗಿದ್ದರು. ಸದಾ ಹೀಗೆ ಒಂದಲ್ಲ ಒಂದು ಹೇಳಿಕೆ ನೀಡಿ ಸುದ್ದಿಯಲ್ಲಿರುವುದು ಅಂದರೆ, ಪಾಕ್​ ಪ್ರಧಾನಿ ಇಮ್ರಾನ್ ಖಾನ್​ಗೆ ಬಲು ಇಷ್ಟವಂತೆ. ಇದೀಗ ಜಮಾತ್​ ಎ ಇಸ್ಲಾಮಿ ಪಾಕಿಸ್ತಾನದ ನೂತನ ‘ಅರ್ಥಶಾಸ್ತ್ರಜ್ಞ’ ಜನಾಬ್ ಇಮ್ರಾನ್​ ಖಾನ್​ರಿಗೆ ಕ್ಲಾಸ್(Class)​ ತೆಗೆದುಕೊಂಡಿದ್ದಾರೆ. ಇಮ್ರಾನ್​ ಖಾನ್​ ಅವರಿಗೆ ಈ ಹಿಂದೆ ಯಾರೂ ಬಳಸಿರದ ದ ಬಳಸಿದ್ದಾರೆ. . ಪಾಕಿಸ್ತಾನದ ಹಣಕಾಸು ಸಂಕಷ್ಟಗಳು ಬೆಟ್ಟದಷ್ಟು ಮಿತಿಮೀರಿದ್ದು ಪ್ರಧಾನಿ ಇಮ್ರಾನ್​ ಖಾನ್ ’ಅಂತಾರಾಷ್ಟ್ರೀಯ ಭಿಕ್ಷುಕ’(International Begger) ಎಂದು ಕರೆದಿದ್ದಾರೆ. ಇಮ್ರಾನ್​ ಖಾನ್​ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರೆ, ಪಾಕಿಸ್ತಾನದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಅಂತ ವ್ಯಂಗ್ಯವಾಡಿದ್ದಾರೆ.

ಪಾಕ್​ ಪ್ರಧಾನಿಗೆ ಮಾತಿನಲ್ಲೇ ತಿವಿದ ಜಮಯಾತ್​!

ಲಾಹೋರ್​​ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತಾ ಕಾರ್ಯದಲ್ಲಿ ತೊಡಗಿರುವ ಜಮಾಯತ್ (Jamat-e-Islami)​ ಮುಖ್ಯಸ್ಥ ಸಿರಾಜುಲ್ ಹಕ್ (Sirajul-Haq) ಪಾಕಿಸ್ತಾನದ ಸಮಸ್ಯೆಗಳೆಲ್ಲ ಪರಿಹಾರವಾಗಬೇಕೆಂದರೆ ಇಮ್ರಾನ್​ ಖಾನ್ ನಿರ್ಗಮನವೊಂದೇ ದಾರಿ ಎಂದಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (International Monetary Fund -IMF) ತುರ್ತಾಗಿ ಒಂದು ಶತಕೋಟಿ ಡಾಲರ್ ಸಾಲ ಪಡೆಯುತ್ತಿರುವುದನ್ನು ನೋಡಿದರೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ ನಿಜಕ್ಕೂ ಅಂತಾರಾಷ್ಟ್ರೀಯ ಭಿಕ್ಷುಕನೇ ಸರಿ ಎಂದು ಜಮಾಯತ್ ವ್ಯಾಖ್ಯಾನಿಸಿದೆ.

ಇದನ್ನು ಓದಿ: ಇಬ್ರೂ ಸೇರಿ ತಪ್ಪು ಮಾಡಿದ್ರು, ಆದ್ರೆ ಶಿಕ್ಷೆ ಮಾತ್ರ ಮಹಿಳೆಗೇ ಹೆಚ್ಚು... ಇದ್ಯಾವ ನ್ಯಾಯ?

‘ಕಿಚಡಿ ಸರ್ಕಾರದಿಂದಲೂ ಸಾಧ್ಯವಾಗಿರಲಿಲ್ಲ’

ಪಾಕಿಸ್ತಾನದ ಆರ್ಥಿಕತೆ ಹದಗೆಟ್ಟಿದೆ. ಬೆಲೆ ಏರಿಕೆಯಿಂದ ಅಲ್ಲಿನ ಜನರು ಕಂಗಾಲಾಗಿದ್ದಾರೆ. ಒಂದು ಹೊತ್ತಿನ ಊಟಕ್ಕೂ ದುಬಾರಿ ಹಣ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಪಾಕಿಸ್ತಾನದ ಆರ್ಥಿಕತೆ ಸುಸ್ಥಿಗೆ ತರಲು ಹಿಂದಿನ ಕಿಚಡಿ ಸರ್ಕಾರದಿಂದಲೂ ಏನೂ ಮಾಡಲು ಸಾಧ್ಯವಾಗಲಿಲ್ಲ. ಅದಾದ ಮೇಲೆ ತಾನು ಆರ್ಥಿಕತೆಯ ಚಾಂಪಿಯನ್​ ಎಂದು ಇಮ್ರಾನ್​ ಖಾನ್​ ಬಡಾಯಿ ಕೊಚ್ಚಿಕೊಂಡಿದ್ದರು ಆತನ ಕೈಯಲ್ಲೂ ಏನು ಕಿಸಿಯಲು ಆಗಲಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ಅಯ್ಯಪ್ಪನಿಗೆ ವಜ್ರದ ಕಿರೀಟ ಅರ್ಪಿಸಿ ಹರಕೆ ತೀರಿಸಿದ ಭಕ್ತ!

‘ದೇಶದ ವ್ಯಾಪರ ಕೊರತೆ ತಾಳತಪ್ಪಿದೆ’

ಪಾಕಿಸ್ತಾನದಲ್ಲಿ ಆರ್ಥಿಖ ದುಸ್ತಿತಿ ಹೇರಳವಾಗಿದೆ. ದೇಶದ ವ್ಯಾಪಾರಾ ಕೊರತೆ ತಾಳತಪ್ಪಿದೆ. ಬೇರೆ ಯಾವ ದೇಶಗಳು ಪಾಕಿಸ್ತಾನದ ಜೊತೆ ಬ್ಯುಸಿನೆಸ್ ಮಾಡಲು ಮುಂದೆ ಬರುತ್ತಿಲ್ಲ. ಇಲ್ಲಿನ ಪರಿಸ್ಥಿತಿ ಸದ್ಯಕ್ಕೆ ಸರಿಹೋಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಪಾಕಿಸ್ತಾನದ ಮಿತ್ರ ರಾಷ್ಟ್ರ ಚೀನಾ ಕೂಡ ಪಾಕ್ ಸಂಕಷ್ಟಕ್ಕೆ ಸ್ಪಂಧಿಸುತ್ತಿಲ್ಲ. ಇಷ್ಟೆಲ್ಲಾ ಇದ್ದರೂ ಎಲ್ಲವೂ ಸರಿಯಾಗಿದೆ, ಏನೂ ತೊಂದರೆ ಇಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಹೇಳುತ್ತಿದ್ದಾರೆ. ಇದನ್ನು ಖಂಡಿಸಿರುವ ಜಮಾಯತ್ (Jamat-e-Islami)​ ಮುಖ್ಯಸ್ಥ ಸಿರಾಜುಲ್ ಹಕ್ (Sirajul-Haq) ಇಮ್ರಾನ್​ ಖಾನ್​ಗೆ​ ‘ಇಂಟರ್​ನ್ಯಾಷನಲ್​ ಭಿಕ್ಷುಕ’ ಎಂದು ಕರೆದಿದ್ದಾರೆ.
Published by:Vasudeva M
First published: