ಜಕಾರ್ತಾ(ಜ.08): ಮಾರಕ ಕೊರೋನಾ ಅಬ್ಬರಕ್ಕೆ ಇಡೀ ವಿಶ್ವವೇ ನಲುಗಿದೆ. ಮಹಾಮಾರಿ ಕೊರೋನಾ ಸೋಂಕಿನಿಂದ ತಮ್ಮ ನ್ನು ರಕ್ಷಿಸಿಕೊಳ್ಳಲು ಜನರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಫೇಸ್ ಮಾಸ್ಕ್ ಹಾಕುವುದು, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಹೀಗೆ ನಾನಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ವಿಮಾನಗಳಲ್ಲಿ ಪ್ರಯಾಣಿಸುವವರು ಸಹ ಇದೇ ರೀತಿಯಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಾರೆ. ಪಿಪಿಇ ಕಿಟ್ ಧರಿಸುವುದು, ಫೇಸ್ ಶೀಲ್ಡ್ ಹಾಕಿಕೊಳ್ಳುವುದು, ಮಾಸ್ಕ್ ಧರಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನನ್ನು ಕೋವಿಡ್ನಿಂದ ಕಾಪಾಡಿಕೊಳ್ಳಲು ಒಂದು ವಿಮಾನವನ್ನೇ ಬುಕ್ ಮಾಡಿದ್ದಾನೆ.
ಹೌದು, ಇದು ವಿಚಿತ್ರ ಎನಿಸಿದರೂ ಸತ್ಯ. ಜಕಾರ್ತ ಮೂಲದ ವ್ಯಕ್ತಿಯೊಬ್ಬ ಕೊರೋನಾ ವೈರಸ್ನಿಂದ ರಕ್ಷಿಸಿಕೊಳ್ಳಲು ಇಡೀ ಫ್ಲೈಟ್ನ್ನೇ ಬುಕ್ ಮಾಡಿದ್ದಾನೆ. ರಿಚರ್ಡ್ ಮುಲ್ಜಾದಿ ತನ್ನ ಸಂಗಾತಿಯೊಂದಿಗೆ ಇಂಡೋನೇಷ್ಯಾದ ಬಾಲಿಗೆ ಪ್ರಯಾಣಿಸಲು ನಿರ್ಧರಿಸಿದ್ದ. ಹೀಗಾಗಿ ಕೊರೋನಾ ಸೋಂಕಿನಿಂದ ತಮ್ಮಿಬ್ಬರನ್ನು ರಕ್ಷಿಸಿಕೊಳ್ಳಲು ಆತ ಹುಡುಕಿದ್ದು ಇದೇ ಮಾರ್ಗ.
ವಿಮಾನದಲ್ಲಿ ಬೇರೆ ಜನರು ಬಂದರೆ ತಮಗೆ ಸೋಂಕು ಹರಡಬಹುದೆಂಬ ಭಯದಿಂದ ಆತ ಕೇವಲ ಇಬ್ಬರಿಗೆ ಇಡೀ ವಿಮಾನವನ್ನೇ ಕಾಯ್ದಿರಿಸಿದ್ದಾನೆ. ಒಂದು ವಿಮಾನದಲ್ಲಿ ಪೈಲಟ್ ಬಿಟ್ಟರೆ, ಇವರಿಬ್ಬರೇ ಇದ್ದು, ಬಾಲಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ರಿಚರ್ಡ್ ಜಕಾರ್ತಾದ ವ್ಯಕ್ತಿ. ಈತ ಕೊರೊನಾ ವೈರಸ್ಗೆ ಹೆದರಿ ಕೇವಲ ಇಬ್ಬರಿಗಾಗಿ ಒಂದು ವಿಮಾನವನ್ನೇ ಬುಕ್ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ರಿಚರ್ಡ್ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಜನವರಿ 4ರಂದು ಫೋಟೋವೊಂದನ್ನು ಹಾಕಿದ್ದಾನೆ. ರಿಚರ್ಡ್ ಮತ್ತು ಆತನ ಹೆಂಡತಿ ಶಲ್ವನ್ನೆ ಚಾಂಗ್ ಬಿಟ್ಟರೆ ಇಡೀ ಫ್ಲೈಟ್ನಲ್ಲಿ ಬೇರೆ ಯಾವ ಪ್ರಯಾಣಿಕರು ಇಲ್ಲ(ಪೈಲಟ್ ಹೊರತುಪಡಿಸಿ). ಆ ಫೋಟೋದಲ್ಲಿ ಇಡೀ ವಿಮಾನ ಖಾಲಿಯಾಗಿರುವುದು ಕಂಡುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ