ಮಗು ಹೆರುವ ಕೆಲವು ಗಂಟೆಗಳ ಮುನ್ನವೂ ಕೆಲಸ ಮಾಡುವ ಮೂಲಕ ಮಾದರಿಯಾದ ಜೈಪುರ ಮೇಯರ್

ತಡರಾತ್ರಿಯವರೆಗೆ ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.  ಹೆರಿಗೆ ನೋವಿನಿಂದ ಮಧ್ಯರಾತ್ರಿ 12.30 ಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 

ಜೈಪುರ ಮೇಯರ್ ಸೌಮ್ಯಾ

ಜೈಪುರ ಮೇಯರ್ ಸೌಮ್ಯಾ

 • Share this:
  ವೈಯಕ್ತಿಕ ಸೌಕರ್ಯಕ್ಕಿಂತ ಸಾರ್ವಜನಿಕ ಸೇವೆಯೇ ಮೇಲು ಎನ್ನುವ ಮೂಲಕ ರಾಜಸ್ಥಾನದ ಜೈಪುರ ನಗರ ನಿಗಮ (ಗ್ರೇಟರ್) ಮೇಯರ್ ಡಾ.ಸೌಮ್ಯಾ ಗುರ್ಜರ್ ಮಾದರಿಯಾಗಿದ್ದಾರೆ. ಗುರುವಾರ ಬೆಳಿಗ್ಗೆ 5.14 ಕ್ಕೆ ಗಂಡು ಮಗುವನ್ನು ಹೆರಿಗೆ ಮಾಡುವ ಮೊದಲು ತಡರಾತ್ರಿಯವರೆಗೆ ಅವರು ಕೆಲಸ ಮಾಡುತ್ತಿದ್ದರು. ''ಕಾಯಕವೇ ಕೈಲಾಸ! ಎಂದು ತಡರಾತ್ರಿಯವರೆಗೆ ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.  ಹೆರಿಗೆ ನೋವಿನಿಂದ ಮಧ್ಯರಾತ್ರಿ 12.30 ಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.  ದೇವರ ಆಶೀರ್ವಾದದೊಂದಿಗೆ ಗುರುವಾರ ಬೆಳಗ್ಗೆ ಗಂಡು ಮಗುವಿಗೆ ಹೆರಿಗೆಯಾಯಿತು ಎಂದು ಸೌಮ್ಯಾ ಹೇಳಿದರು. ರಾಜಸ್ಥಾನದಲ್ಲಿ ಕಚೇರಿಯಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಿದ ಮೊದಲ ಚುನಾಯಿತ ಮೇಯರ್ ಎನಿಸಿಕೊಂಡಿದ್ದಾರೆ ಇವರು.

  ಫೆಬ್ರವರಿ 7 ರಂದು ರಾಜಸ್ಥಾನದ ರಾಜ್ಯ ಬಿಜೆಪಿ ಕಚೇರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭೇಟಿ ನೀಡಿದ ಸಂದರ್ಭದಲ್ಲಿ "ಪೂರ್ಣಾವಧಿಯ ಗರ್ಭಧಾರಣೆಯ ಸಮಯದಲ್ಲಿ ಕೆಲಸ ಮಾಡುವುದು ಅತ್ಯಾಕರ್ಷಕ ಮತ್ತು ಸವಾಲಿನ ಸಂಗತಿಯಾಗಿದೆ. ಹೊಸ ಕಾರ್ಯಗಳನ್ನು ಕೈಗೊಳ್ಳುವುದರಿಂದ ನನ್ನ ಎಲ್ಲಾ ನೋವುಗಳನ್ನು ಮರೆತುಬಿಡುತ್ತೇನೆ'' ಎಂದು ಮೇಯರ್ ಐಎಎನ್ಎಸ್ಗೆ ಹೇಳಿದರು.

  ಇದನ್ನು ಓದಿ: ಗ್ರಾಮ ಪಂಚಾಯತ್​ ಚುನಾವಣೆ: ಸಿಪಿ ಯೋಗೇಶ್ವರ್​ ಹುಟ್ಟೂರಿನಲ್ಲಿ ಜಯಭೇರಿ ಬಾರಿಸಿದ ಜೆಡಿಎಸ್

  ಆಕೆಯ ಗರ್ಭಧಾರಣೆಯ ಅವಧಿ ಮುಗಿಯುತ್ತಿದ್ದಾಗಲೂ, ಜನವರಿ 30 ರಂದು ಆಯುಷ್ಮಾನ್ ಭಾರತ್ ಮಹಾತ್ಮ ಗಾಂಧಿ ರಾಜಸ್ಥಾನ ಆರೋಗ್ಯ ವಿಮಾ ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ಅವರು ಹಾಜರಿದ್ದರು. ಅಲ್ಲದೆ, ಎಂಸಿ ಬಜೆಟ್ ಅನ್ನು ಸಹ ಮಂಡಿಸಿದರು ಮತ್ತು ಕಳೆದ ಒಂದು ತಿಂಗಳಲ್ಲಿ ನಿಗದಿತ ಕಾರ್ಯಗಳನ್ನು ಪೂರ್ಣಗೊಳಿಸಲು ಅವರು ಫೀಲ್ಡ್​ನಲ್ಲಿ ಕೆಲಸ ಮಾಡಿದ್ದರು ಎಂದೂ ತಿಳಿದುಬಂದಿದೆ.

  ಜೈಪುರ ಎಂಸಿ ಚುನಾವಣೆಗಳಲ್ಲಿ ಪ್ರಚಾರ ನಡೆಸಿ ಗರ್ಭಿಣಿಯಾಗಿದ್ದಾಗ ಗೆದ್ದ ಸೌಮ್ಯಾ, ತಮ್ಮ ಈ 'ಹೊಸ ಯುಗದ ಮಹಿಳೆ'ಯ ಮನೋಭಾವಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಹಿತೈಷಿಗಳಿಂದ ಅಭಿನಂದನಾ ಸಂದೇಶಗಳನ್ನು ಸ್ವೀಕರಿಸಿದ್ದಾರೆ.
  Published by:Seema R
  First published: