News18 India World Cup 2019

ಜೈನ ಮುನಿ ತರುಣ್ ಸಾಗರ್ ನಿಧನ; ಪ್ರಧಾನಿ ಮೋದಿ, ದೇವೇಗೌಡ ಸೇರಿ ಹಲವರಿಂದ ಸಂತಾಪ ಸೂಚನೆ

news18
Updated:September 1, 2018, 11:35 AM IST
ಜೈನ ಮುನಿ ತರುಣ್ ಸಾಗರ್ ನಿಧನ; ಪ್ರಧಾನಿ ಮೋದಿ, ದೇವೇಗೌಡ ಸೇರಿ ಹಲವರಿಂದ ಸಂತಾಪ ಸೂಚನೆ
news18
Updated: September 1, 2018, 11:35 AM IST
ನ್ಯೂಸ್ 18 ಕನ್ನಡ

ನವದೆಹಲಿ (ಸೆ.1): ಸಲ್ಲೇಖನ ವ್ರತ ಕೈಗೊಂಡಿದ್ದ ಜೈನ ಮುನಿ ತರುಣ್ ಸಾಗರ್ (51) ಶನಿವಾರ ಮುಂಜಾನೆ ದೆಹಲಿಯ ಕೃಷ್ಣ ಸಾಗರ್ ಪ್ರದೇಶದಲ್ಲಿರುವ ರಾಧಾಪುರಿ ಜೈನ ಮಂದಿರದಲ್ಲಿ ವಿಧಿವಶರಾದರು.

ಮುನಿಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹಾಗೂ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಸೇರಿ ಹಲವು ಮಂದಿ ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ.


Loading...ಮಧ್ಯಪ್ರದೇಶದ ದಹೋಹ್ ಜಿಲ್ಲೆಯಲ್ಲಿ1967 ಜೂನ್ 26ರಂದು ಜನಿಸಿದ್ದ ಇವರ ಮೊದಲ ಹೆಸರು ಪವನ್ ಕುಮಾರ್ ಜೈನ್. ಜೈನ ಮುನಿಗಳು ಜೀವನದ ಅಂತಿಮ ಕ್ಷಣದಲ್ಲಿ ಕೈಗೊಳ್ಳುವ ಸಲ್ಲೇಖನ ವ್ರತವನ್ನು ಕೈಗೊಂಡಿದ್ದ ತರುಣ್ ಸಾಗರ್ ಅವರು ಆಹಾರ ಸೇವನೆಯನ್ನು ತ್ಯಜಿಸಿದ್ದರು.

ಕಡವೆ ಪ್ರವಚನಗಳ ಮೂಲಕ ರಾಷ್ಟ್ರದ ಗಮನ ಸೆಳೆದು ಜೈನ ಮತ್ತು ಜೈನೇತರ ಸಮಾಜದಲ್ಲಿ ವಿಶೇಷ ಸ್ಥಾನ ಮಾನ ಹೊಂದಿದ್ದರು. ಮಧ್ಯಪ್ರದೇಶ, ರಾಜಸ್ಥಾನ ,ಗುಜರಾತ್ ರಾಜ್ಯಗಳ ವಿಧಾನಸಭೆ ಅಧಿವೇಶನದಲ್ಲೂ ಪ್ರವಚನ ನೀಡಿದ್ದರು.

2006 ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭೀಷೇಕ‌ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. 2006ರಲ್ಲಿ ಬೆಂಗಳೂರಿನಲ್ಲಿ ಚಾತುರ್ಮಾಸ ಆಚರಿಸಿದ್ದರು.

ಜೈನ ಸಮುದಾಯದ ಅಪಾರ ಸಂಖ್ಯೆಯ ಅನುಯಾಯಿಗಳನ್ನು ತರುಣ್ ಸಾಗರ್ ಅಗಲಿದ್ದಾರೆ. ಜಾಂಡೀಸ್‌ನಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಹಿಂದೆಯಷ್ಟೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ತರುಣ್ ಸಾಗರ್ ಅಂತಿಮ ಸಂಸ್ಕಾರವಿಧಿ‌‌ ಇಂದು ಮಧ್ಯಾಹ್ನ ದೆಹಲಿ-ಮೆರಟ ರಾಷ್ಟ್ರೀಯ ಹೆದ್ದಾರಿ ಬಳಿ ತರುಣ =ಸಾಗರ ತೀರ್ಥದ ಬಳಿ ನಡೆಯಲಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...