ಕೊನೆಗೂ ಜೈಲಿನಿಂದ ಭೀಮಸೇನೆ ಮುಖ್ಯಸ್ಥ ಬಿಡುಗಡೆ: ‘ಬಿಜೆಪಿಗೆ ಮತ ನೀಡಬೇಡಿ’ ಎಂದು ಚಂದ್ರಶೇಖರ್​​ ಆಜಾದ್​ ಕರೆ

ಬಿಜೆಪಿಗೆ ಮತ ನೀಡುವುದು ಭವಿಷ್ಯದ ಪೀಳಿಗೆಗೆ ಅಪಾಯಕಾರಿ. ನಾನು ಮತ್ತೆ ಹೋರಾಟದ ಕಣಕ್ಕೆ ಹಿಂದಿರುಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಸಲಿದ್ದೇವೆ- ಚಂದ್ರಶೇಖರ್​ ಆಜಾದ್​

Ganesh Nachikethu
Updated:September 14, 2018, 11:13 PM IST
ಕೊನೆಗೂ ಜೈಲಿನಿಂದ ಭೀಮಸೇನೆ ಮುಖ್ಯಸ್ಥ ಬಿಡುಗಡೆ: ‘ಬಿಜೆಪಿಗೆ ಮತ ನೀಡಬೇಡಿ’ ಎಂದು ಚಂದ್ರಶೇಖರ್​​ ಆಜಾದ್​ ಕರೆ
ಬಿಜೆಪಿಗೆ ಮತ ನೀಡುವುದು ಭವಿಷ್ಯದ ಪೀಳಿಗೆಗೆ ಅಪಾಯಕಾರಿ. ನಾನು ಮತ್ತೆ ಹೋರಾಟದ ಕಣಕ್ಕೆ ಹಿಂದಿರುಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಸಲಿದ್ದೇವೆ- ಚಂದ್ರಶೇಖರ್​ ಆಜಾದ್​
Ganesh Nachikethu
Updated: September 14, 2018, 11:13 PM IST
ಗಣೇಶ್​ ನಚಿಕೇತು, ನ್ಯೂಸ್​​-18 ಕನ್ನಡ

ನವದೆಹಲಿ(ಸೆಪ್ಟೆಂಬರ್​​.14): ಒಂದೂವರೆ ವರ್ಷದಿಂದ ಸೆರೆಮನೆ ವಾಸದಲಿದ್ದ ದಲಿತ ಹೋರಾಟಗಾರ, ಭೀಮ​​ಸೇನೆ ಸಂಘಟನೆ ಮುಖ್ಯಸ್ಥ ಚಂದ್ರಶೇಖರ್​ ಆಜಾದ್ ಅವರಿಗೆ ಕೊನೆಗೂ ಶಹರಾನ್​ಪುರ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ. ದಲಿತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಉತ್ತರಪ್ರದೇಶದ ಬಿಜೆಪಿ ಸರ್ಕಾರ ಆಜಾದ್​ರನ್ನು ಬಿಡುಗಡೆ ಮಾಡಿದೆ. ಅಲ್ಲದೇ ಚಂದ್ರಶೇಖರ್​ನನ್ನು ನೂರಾರು ಜನ ಹೋರಾಟಗಾರರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಕೂಡಲೇ ಆಜಾದ್​​, ಬಿಜೆಪಿಗೆ ಮತ ಚಲಾಯಿಸದಂತೇ ಕರೆ ನೀಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಗೆಲ್ಲಿಸಬೇಡಿ ಎಂದು ದೇಶದ ಪ್ರತಿಯೊಬ್ಬರಲ್ಲಿಯೂ ಮನವಿ ಮಾಡುತ್ತೇನೆ. ಬಿಜೆಪಿ ವಿರುದ್ಧದ ಹೋರಾಟ ಈಗ ಶುರುವಾಗಿದೆ ಎಂದು ಆಜಾದ್​ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಗೆ ಮತ ಭವಿಷ್ಯದಲ್ಲಿ ಅಪಾಯ: ಸುದ್ದಿಗಾರರೊಂದಿಗೆ ಮಾತಾಡಿದ ಚಂದ್ರಶೇಖರ್, ​​​​ಬಿಜೆಪಿಗೆ ಮತ ನೀಡುವುದು ಭವಿಷ್ಯದ ಪೀಳಿಗೆಗೆ ಅಪಾಯಕಾರಿ. ನಾನು ಮತ್ತೆ ಹೋರಾಟದ ಕಣಕ್ಕೆ ಹಿಂದಿರುಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಸಲಿದ್ದೇವೆ. ಬಿಜೆಪಿ ಎರಡು ತಲೆ ನಾಗರಹಾವು ಇದ್ದಂತೆ. ಹೀಗಾಗಿ ಕೇಸರಿ ಪಡೆಯಿಂದ ಜನರು ದೂರ ಉಳಿಯಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಶಹರಾನ್​ಪುರ ಗಲಭೆ ನಂತರ ನನ್ನ ಕಾನೂನುಬಾಹಿರವಾಗಿ ಜೈಲಿಗೆ ಹಾಕಲಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ನನಗೆ ಚಿಕಿತ್ಸೆ ನೀಡದೆ, ತಮ್ಮ ಹಗೆಯನ್ನು ಸಾಧಿಸಿದ್ಧಾರೆ. ಕನಿಷ್ಠ ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಜೈಲಿನಲ್ಲಿ ನನ್ನ ಮೇಲೆ ಎಸಗಿರುವ ದೌರ್ಜನ್ಯಕ್ಕೆ 2019 ಲೋಕಸಭಾ ಚುನಾವಣೆಯಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ಬಿಜೆಪಿ ವಿರುದ್ಧ ಶಪಥಗೈದಿದ್ದಾರೆ.

ಶಹರಾನ್​​ಪುರ ಗಲಭೆ, ಆಜಾದ್​ ಬಂಧನ: ಕಳೆದ ವರ್ಷ ಏಪ್ರಿಲ್​​.20ರಂದು ಅಂಬೇಡ್ಕರ್​​ ಜಯಂತಿ ಅಂಗವಾಗಿ ದಲಿತ ಸಮುದಾಯದಿಂದ ಬಹಿರಂಗ ಮೆರವಣಿಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರಜಪೂತರು ಮತ್ತು ದಲಿತರ ನಡುವೆ ಗಲಭೆ ಉಂಟಾಗಿತ್ತು. ಈ ಸಂಘರ್ಷ ಕೇವಲ ಮಾತಿನ ಚಕಾಮಕಿಯಲ್ಲದೆ, ಶಹರಾನ್​ಪುರದಲ್ಲಿ ಮತ್ತೊಂದು ಹಿಂಸಾಚಾರಕ್ಕೆ ಕಾರಣವಾಯ್ತು.
Loading...

ಗಲಭೆಯಲ್ಲಿ ಇಬ್ಬರು ದಲಿತರು ಮೃತಪಟ್ಟಿದ್ದದ್ದು, ನೂರಾರು ಮಂದಿ ಗಾಯಗೊಂಡಿದ್ದರು. ದಲಿತರ ಮನೆಗಳಿಗೆ ಹಾಡುಹಗಲೇ ಬೆಂಕಿ ಹಚ್ಚಲಾಗಿದೆ ಎನ್ನಲಾಗಿತ್ತು. ಹೀಗಾಗಿ, ದಲಿತರ ಮೇಲೆ ದೌರ್ಜನ್ಯ ಎಸಗಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಭೀಮ್​​ಸೇನೆ  ಸಂಘಟನೆ ಮುಖ್ಯಸ್ಥ ಚಂದ್ರಶೇಖರ್​​ ಆಜಾದ್​ ನೇತೃತ್ವದಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಬೀದಿಗಿಳಿದು ಪ್ರತಿಭಟಿಸಿದರು.

ಬಳಿಕ ಗಲಭೆಯಲ್ಲಿ ಚಂದ್ರಶೇಖರ್​ ಆಜಾದ್​ ಪಾತ್ರವಿದೆ ಎಂದು ಆರೋಪಿಸಿ ಸಂಘಪರಿವಾರ ಪ್ರತಿಭಟನೆ ನಡೆಸಿತು. ಬಿಜೆಪಿ ಮುಖಂಡರು ಆಜಾದ್​ ವಿರುದ್ಧ ದೂರು ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿದರು. ಈ ಆರೋಪದ ಅಡಿಯಲ್ಲಿ ಚಂದ್ರಶೇಖರ್​ ಆಜಾದ್​ ಅವರನ್ನು ದೆಹಲಿಯ ಜಂತರ್​​ಮಂತರ್​ನಲ್ಲಿ ಬಂಧಿಸಲಾಯ್ತು.

ಪ್ರಗತಿಪರ ಸಂಘಟನೆಗಳ ಆಕ್ರೋಶ: ಚಂದ್ರಶೇಖರ್​​ ಬಂಧನವನ್ನು ಖಂಡಿಸಿ ದೇಶಾದ್ಯಂತ ದಲಿತಪರ ಹೋರಾಟಗಾರರು ಪ್ರತಿಭಟನೆಗಳು ನಡೆಸಿದರು. ಗುಜರಾತ್​ ಶಾಸಕ ಜಿಗ್ನೇಶ್​ ಮೇವಾನಿ ನೇತೃತದಲ್ಲಿ ಬಿಜೆಪಿ ವಿರುದ್ಧ ಹೋರಾಟಕ್ಕೆ ಎಲ್ಲಾ ದಲಿತಪರ ಸಂಘಟನೆಗಳನ್ನು ಒಂದಾಗಿದ್ದವು. ಹೋರಾಟ ತೀವ್ರಗೊಳ್ಳುವ ಮುನ್ನವೇ ಎಚ್ಚೆತ್ತ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರ, ಚಂದ್ರಶೇಖರ್​ ಆಜಾದ್​ರನ್ನು ಬಿಡುಗಡೆ ಮಾಡಿ ಕೈತೊಳೆದುಕೊಂಡಿದೆ ಎನ್ನುತ್ತಾರೆ ಆಪ್ತರು.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...