ಜಾತಕದಲ್ಲಿ ಜೈಲು ಯೋಗ...! ದೋಷ ನಿವಾರಣೆಗೆ ಜನರು ಏನು ಮಾಡುತ್ತಿದ್ದಾರೆ ಗೊತ್ತಾ?


Updated:September 3, 2018, 1:19 PM IST
ಜಾತಕದಲ್ಲಿ ಜೈಲು ಯೋಗ...! ದೋಷ ನಿವಾರಣೆಗೆ ಜನರು ಏನು ಮಾಡುತ್ತಿದ್ದಾರೆ ಗೊತ್ತಾ?

Updated: September 3, 2018, 1:19 PM IST
ನ್ಯೂಸ್​ 18 ಕನ್ನಡ

ಲಕ್ನೋ(ಸೆ.03): ಜಾತಕದಲ್ಲಿ ಯಾವುದೇ ದೋಷ ಕಂಡು ಬಂದರೂ ಅದನ್ನು ನಿವಾರಿಸಲು ಜನರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಆದರೆ ಯಾರಾದರೂ ಜಾತಕವನ್ನು ದೋಷಮುಕ್ತಗೊಳಿಸಲು ಜೈಲಿಗೆ ಹೋಗಿ ಕುಳಿತ ಬಗ್ಗೆ ನೀವೆಂದಾದರೂ ಕೆಳಿದ್ದೀರಾ? ದೊಡ್ಡ ಅಪರಾಧಗಳನ್ನೇ ಎಸಗಿದವರೂ ಜೈಲಿಗೆ ಹೋಗಲು ಹೆದರುತ್ತಿರುವಾಗ, ಉತ್ತರ ಪ್ರದೇಶದ ಜನರು ಮಾತ್ರ ಯಾವುದೇ ಅಪರಾಧ ಮಾಡದೇ, ತಾವೇ ಇಷ್ಟಪಟ್ಟು ಜೈಲು ಕಂಬಿಯ ಹಿಂದೆ ಹೋಗುತ್ತಿದ್ದಾರೆ. ಆಂಗ್ಲ ಪತ್ರಿಕೆಯಲ್ಲಿ ಬಂದ ವರದಿಯನ್ವಯ ಜೈಲಿಗೆ ಹೋಗುತ್ತಿರುವವರೆಲ್ಲಾ ತಮ್ಮ ಜಾತಕದಲ್ಲಿರುವ ದೋಷ ನಿವಾರಿಸಲು ಹೀಗೆ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.

ಜಾತಕದಲ್ಲಿ 'ಜೈಲು ಯೋಗ' ಇದೆ ಎಂದ ಜ್ಯೋತಿಷಿ

ಲಕ್ನೋವಿನ ಗೋಮತಿ ನಗರದ 38 ವರ್ಷದ ರಮೇಶ್​ ಸಿಂಗ್​ ಎಂಬುವವರು 24 ಗಂಟೆಯನ್ನು ಜೈಲಿನಲ್ಲಿ ಕಳೆದಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯಿಸಿದ ಅವರು "ನನ್ನ ಜಾತಕ ನೋಡಿದ ಜ್ಯೋತಿಷಿಯೊಬ್ಬರು ನನ್ನ ಜಾತಕದಲ್ಲಿ 'ಜೈಲು ಯೋಗ' ಇದೆ. ಇದರಿಂದಾಗಿ ಮುಂದೆ ನಾನು ಬಹುದೊಡ್ಡ ಸಂಕಷ್ಟಕ್ಕೀಡಾಗಬೇಕಾಗುತ್ತದೆ ಎಂದಿದ್ದರು. ಇದನ್ನು ಕೇಳಿದ ನನ್ನ ಕುಟುಂಬದ ಸದಸ್ಯರು ಹೆದರಿದ್ದರು. ಜೈಲು ಯೋಗದ ದೋಷ ನಿವಾರಿಸಲು ಜ್ಯೋತಿಷಿಗಳು ನನಗೆ ಯಾವುದೇ ಅಪರಾಧವಿಲ್ಲದೇ ಕೆಲ ಸಮಯ ಜೈಲಿನಲ್ಲಿ ಕಳೆಯಲು ಸೂಚಿಸಿದ್ದರು" ಎಂದಿದ್ದಾರೆ. ರಮೇಶ್​ ಸಿಂಗ್​ ಹೊರತುಪಡಿಸಿ ಅಂಕಿತ್​ ಚತುರ್ವೇದಿ ಹೆಸರಿನ ಮತ್ತೊಬ್ಬ ವ್ಯಕ್ತಿಯೂ ಜನವರಿಯಲ್ಲಿ ಅಪರಾಧವಿಲ್ಲದೇ ಜೈಲಿಗೆ ಹೋಗಿದ್ದರೆನ್ನಲಾಗಿದೆ.

ಜಿಲ್ಲಾಡಳಿತಕ್ಕೆ ಜಾತಕದ ಪ್ರತಿ ಸಲ್ಲಿಸಿದ್ರು

ರಮೇಶ್​ ಸಿಂಗ್​ ಏಪ್ರಿಲ್​ ತಿಂಗಳ ಕೊನೆಯಲ್ಲಿ ಜಿಲ್ಲಾಡಳಿತಕ್ಕೆ ತನ್ನ ಜಾತಕದ ಒಂದು ಪ್ರತಿಯೊಂದಿಗೆ ಒಂದು ಅರ್ಜಿಯನ್ನು ಸಲ್ಲಿಸಿದ್ದರು. ರಮೇಶ್​ ನೀಡಿದ್ದ ಅರ್ಜಿಯನ್ನು ಪರಿಶೀಲಿಸಿದ ಅಧಿಕಾರಿಗಳು, ಪೊಲೀಸ್​ ಠಾಣೆಯ ಲಾಕಪ್​ನಲ್ಲಿ 24 ಗಂಟೆ ಉಳಿದುಕೊಳ್ಳಲು ಅನುಮತಿ ನೀಡಿದ್ದಾರೆ. 'ನಾನು ದೇವರ ಬಳಿ ನನ್ನೆಲ್ಲಾ ಪಾಪಗಳನ್ನು ಕ್ಷಮಿಸುವಂತೆ ಬೇಡಿಕೊಂಡಿದ್ದೇನೆ. ಹಾಗೂ ನನ್ನನ್ನು ಒಳ್ಳೆ ಮಾರ್ಗದಲ್ಲಿ ನಡೆಯಲು ಸಹಾಯ ಮಾಡಿ ಎಂದು ಬೇಡಿಕೊಂಡಿದ್ದೇನೆ. ಈ ಮೂಲಕ ನಾನು ಯಾವತ್ತೂ ತಪ್ಪು ಕೆಲಸ ಮಾಡಬಾರದು" ಎಂದಿದ್ದಾರೆ ರಮೇಶ್​ ಸಿಂಗ್​.
Loading...

ಡಿಎಂ ಹೇಳುವುದೇನು?

ಲಕ್ನೋವಿನ ಜಿಲ್ಲಾ ಮ್ಯಾಜಿಸ್ಟ್ರೇಟ್​ ಕೌಶಲ್​ ರಾಜ್​ ಶರ್ಮಾ ಈ ವಿಚಾರವಾಗಿ ಮಾತನಾಡಿ "ಈವರೆಗೂ ಇಂತಹ 24 ಅರ್ಜಿಗಳು ಸಿಕ್ಕಿವೆ ಎಂದಿದ್ದಾರೆ. ಜನರು 24 ರಿಂದ 48 ಗಂಟೆ ಜೈಲಿನಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಆದರೆ ವ್ಯಕ್ತಿಯೊಬ್ಬನನ್ನು ಅಪರಾಧವಿಲ್ಲದೇ ಜೈಲಿಗೆ ಕಳುಹಿಸುವ ನಿಯಮ ಇಲ್ಲಿ ಇಲ್ಲ. ಸದ್ಯ ಧಾರ್ಮಿಕ ಆಧಾರದಲ್ಲಿ ಇದಕ್ಕೆ ಮನವಿ ಮಾಡಿಕೊಳ್ಳುವವರಿಗೆ ಜೈಲಿಗೆ ಹೋಗಲು ಅನುಮತಿ ನೀಡುತ್ತಿದ್ದೇವೆ" ಎಂದಿದ್ದಾರೆ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...