Ram Mandir: ಜೈ ಶ್ರೀರಾಮ ಘೋಷಣೆ ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ; ಪ್ರಧಾನಿ ಮೋದಿ

ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ  ಅವರು ಜೈ ಶ್ರೀರಾಮ ಎಂದು ಘೋಷಣೆ ಕೂಗಿದರು. ಬಳಿಕ ಈ ಘೋಷಣೆ ಕೇವಲ ಅಯೋಧ್ಯೆಯಲ್ಲಷ್ಟೇ ಪ್ರತಿಧ್ವನಿಸುತ್ತಿಲ್ಲ. ಇಡೀ ಜಗತ್ತಿನಲ್ಲಿ ಮೊಳಗುತ್ತಿದೆ ಎಂದು ಹೇಳಿದರು.

news18-kannada
Updated:August 5, 2020, 2:33 PM IST
Ram Mandir: ಜೈ ಶ್ರೀರಾಮ ಘೋಷಣೆ ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ; ಪ್ರಧಾನಿ ಮೋದಿ
ಪ್ರಧಾನಿ ಮೋದಿ
  • Share this:
ಅಯೋಧ್ಯೆ;  ಹಲವು ವರ್ಷಗಳ ಕಾಲ ವಿವಾವದ ಸುಳಿಯಲ್ಲಿ ಸಿಲುಕಿದ್ದ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಕೊನೆಗೂ ಸಮಯ ಕೂಡಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಗೆ ತೆರಳಿ, ರಾಮ ಮಂದಿರ ನಿರ್ಮಾಣ ಮಾಡಲು ಶಿಲಾನ್ಯಸ ನೆರವೇರಿಸಿದ್ದಾರೆ. 

ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ಪ್ರಭು ರಾಮಚಂದ್ರ ಮತ್ತು ಸೀತಾದೇವಿಯನ್ನು ನೆನಪಿಸಿಕೊಂಡು ನನ್ನ ಮಾತು ಆರಂಭಿಸುತ್ತೇನೆ. ದೇಶದ ಎಲ್ಲ ರಾಮಭಕ್ತರಿಗೆ ಕೋಟಿ ಕೋಟಿ ಶುಭಾಶಯಗಳು. ರಾಮಜನ್ಮ ಭೂಮಿ ಇಂದು ಮುಕ್ತವಾಗಿದೆ. ಎಲ್ಲಿ ರಾಮಮಂದಿರ ಕೆಡವಲಾಗಿತ್ತೋ ಅದೇ ಜಾಗದಲ್ಲಿ ಮತ್ತೆ ಮಂದಿರ ನಿರ್ಮಾಣವಾಗಿದೆ ಎಂದ ಅವರು ಜೈ ಶ್ರೀರಾಮ ಎಂದು ಘೋಷಣೆ ಕೂಗಿದರು. ಬಳಿಕ ಈ ಘೋಷಣೆ ಕೇವಲ ಅಯೋಧ್ಯೆಯಲ್ಲಷ್ಟೇ ಪ್ರತಿಧ್ವನಿಸುತ್ತಿಲ್ಲ. ಇಡೀ ಜಗತ್ತಿನಲ್ಲಿ ಮೊಳಗುತ್ತಿದೆ ಎಂದು ಹೇಳಿದರು.

ಭಾರತ ಇಂದು ಸೂರ್ಯನ ಸನ್ನಿಧಿಯಲ್ಲಿ ಸರಯೂ ನದಿ ತೀರದಲ್ಲಿ ಹೊಸ ಬರೆಯುತ್ತಿದೆ. ಪೂರ್ಣ ದೇಶ ಇಂದು ರಾಮಮಯವಾಗಿದೆ. ಇಡೀ ದೇಶ ರೋಮಾಂಚಿತವಾಗಿದೆ. ಪ್ರತಿ ಮನಸ್ಸಿನಲ್ಲಿಯೂ ಜ್ಯೋತಿ ಬೆಳಗುತ್ತಿದೆ. ಭಾರತ ಪೂರ್ತಿ ಭಾವುಕವಾಗಿದೆ. ಈ ಸಂದರ್ಭಕ್ಕಾಗಿ ಹಲವು ವರ್ಷಗಳ ಕಾಲದ ಕಾಯುವಿಕೆಗೆ ಅಂತ್ಯ ಸಿಕ್ಕಿದೆ. ಕೋಟ್ಯಂತರ ಜನರು ಈ ಪವಿತ್ರ ದಿನ ನೋಡಲೆಂದು ಉಸಿರು ಬಿಗಿ ಹಿಡಿದುಕೊಂಡಿದ್ದರು. ಈಗ ಅವರೆಲ್ಲರ ಕನಸು ನನಸಾಗಿದೆ. ನಮ್ಮ ಪ್ರಭು ರಾಮನಿಗೆ ಒಂದು ಭವ್ಯ ಮಂದಿರ ನಿರ್ಮಾಣವಾಗಲಿದೆ ಎಂದು ಹೇಳಿದರು.

ಇದನ್ನು ಓದಿ: Ram Mandir Bhumi Pujan: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಯೋಧ್ಯೆ; ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಮೋದಿ

ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಜನರು ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ್ದರು. ದೇಶದ ಎಲ್ಲ ಭೂಭಾಗಗಳಲ್ಲಿಯೂ ಹೋರಾಟ ನಡೆದಿತ್ತು. ಆಗಸ್ಟ್ 15 ಎನ್ನುವುದು ಇಂತಹ ಲಕ್ಷಾಂತರ ಬಲಿದಾನಗಳ ಪ್ರತೀಕ. ಸ್ವಾತಂತ್ರ್ಯ ಗಳಿಸಬೇಕು ಎನ್ನುವ ಭಾವನೆಗಳ ಪ್ರತೀಕ ಇದೂ ಅಷ್ಟೇ ರಾಮಮಂದಿರಕ್ಕಾಗಿ ಹಲವು ಪೀಳಿಗೆಗಳು ಅಖಂಡವಾಗಿ ಪ್ರಯತ್ನಿಸಿದ್ದವು. ಈ ದಿನವೂ ಅವರ ತ್ಯಾಗ ಮತ್ತು ಸಂಕಲ್ಪದ ಪ್ರತೀಕ ಎಂದು ರಾಮ ಮಂದಿರ ನಿರ್ಮಾಣವನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋಲಿಕೆ ಮಾಡಿದರು.

ರಾಮ ನಮ್ಮೆಲ್ಲರ ಹೃದಯದೊಳಗೆ ವಾಸಿಸುತ್ತಾನೆ. ಭಗವಾನ್ ರಾಮನ ಹೆಸರಿನಂತೆ ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಈ ಭವ್ಯ ರಾಮ ಮಂದಿರವು ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಇದು ಶಾಶ್ವತವಾಗಿ ಇಡೀ ಮನುಕುಲವನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಪ್ರಭು ಶ್ರೀ ರಾಮ ತನ್ನ ಆಳ್ವಿಕೆಯಲ್ಲಿ ಸಾಮಾಜಿಕ ಸಾಮರಸ್ಯರನ್ನು  ಮೂಲ ಆಧಾರವಾಗಿರಿಸಿಕೊಂಡಿದ್ದರು. ಅವರು ಗುರು ವಸಿಷ್ಠರಿಂದ ಕಲಿತರು, ಶಬರಿಯಿಂದ ಮಾತೃತ್ವ, ಭಗವಾನ್ ಹನುಮಾನ್ ಮತ್ತು ವನವಾಸಿ ಸಹೋದರರ ಸಹಕಾರ, ಮತ್ತು ವಿಷಯಗಳಿಂದ ವಿಶ್ವಾಸ ಗಳಿಸಿದರು. ಅಳಿಲಿನ ಮಹತ್ವವನ್ನು ಅವರು ಸಂತೋಷದಿಂದ ಸ್ವೀಕರಿಸಿದರು ಎಂದು ಪ್ರಧಾನಿ ತಿಳಿಸಿದರು.ಮಾನವ ಕುಲವು ಭಗವಾನ್ ರಾಮನನ್ನು ನಂಬಿದಾಗಲೆಲ್ಲಾ ಅಭಿವೃದ್ಧಿ, ಪ್ರಗತಿ ಸಂಭವಿಸಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಅದರಿಂದ ನಾವು ವಿಮುಖರಾದಾಗ ವಿನಾಶದ ಬಾಗಿಲು ತೆರೆದಂತೆ. ನಾವು ಎಲ್ಲರ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಎಲ್ಲರ ಬೆಂಬಲ ಮತ್ತು ವಿಶ್ವಾಸದಿಂದ ಅಭಿವೃದ್ಧಿ ಸಾಧಿಸಬೇಕು ಎಂದರು.
Published by: HR Ramesh
First published: August 5, 2020, 1:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading