HOME » NEWS » National-international » JAGAN SENT PROPOSAL TO UNION GOVERNMENT ABOUT THE DECISION OF DISSOLVING LEGISLATIVE COUNCIL GNR

ಪರಿಷತ್​​ ರದ್ದು: ವಿಧಾನಸಭೆ ಅನುಮೋದನೆ ಬಳಿಕ ಕೇಂದ್ರಕ್ಕೆ ಪ್ರಸ್ತಾವ ಕಳಿಸಿದ ಜಗನ್​​ ಸರ್ಕಾರ

ಸದ್ಯ ದೇಶದಲ್ಲಿ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್‌ ಅಸ್ತಿತ್ವದಲ್ಲಿದೆ. ಇದರಲ್ಲಿ ಕರ್ನಾಟಕವೂ ಒಂದು. ಇನ್ನುಳಿದ ರಾಜ್ಯಗಳು ಈಗಾಗಲೇ ಮೇಲ್ಮನೆಯನ್ನು ರದ್ದುಗೊಳಿಸಿವೆ.

news18-kannada
Updated:January 28, 2020, 4:20 PM IST
ಪರಿಷತ್​​ ರದ್ದು: ವಿಧಾನಸಭೆ ಅನುಮೋದನೆ ಬಳಿಕ ಕೇಂದ್ರಕ್ಕೆ ಪ್ರಸ್ತಾವ ಕಳಿಸಿದ ಜಗನ್​​ ಸರ್ಕಾರ
ಜಗನ್​ ಮೋಹನ್​ ರೆಡ್ಡಿ
  • Share this:
ಅಮರಾವತಿ(ಜ.28): ರಾಜ್ಯ ವಿಧಾನ ಪರಿಷತ್​ ರದ್ದಿಗೆ ಕೆಳಮನೆಯಲ್ಲಿ ಅನುಮೋದನೆ ಸಿಕ್ಕ ಬಳಿಕ ಮುಖ್ಯಮಂತ್ರಿ ವೈ.ಎಸ್​​ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಕಳಿಸಿದೆ. ಸೋಮವಾರ ಅಂದರೆ ನಿನ್ನೆ ವಿಧಾನ ಪರಿಷತ್​​​ ರದ್ದುಗೊಳಿಸುವ ನಿರ್ಧಾರ ಸಿಎಂ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ಸಚಿವ ಸಂಪುಟ ಕೈಗೊಂಡಿತ್ತು. ಇದಕ್ಕೆ ವಿಧಾನಸಭೆಯಲ್ಲಿ ಅನುಮೋದನೆಯೂ ದೊರಕಿತು. ಈ ಬೆನ್ನಲ್ಲೇ ವಿಧಾನ ಪರಿಷತ್​​​ ರದ್ದುಗೊಳಿಸಿದ ಕುರಿತಂತೆ ಕೈಗೊಂಡ ತೀರ್ಮಾನದ ಪ್ರತಿಯನ್ನು ಕೇಂದ್ರಕ್ಕೆ ಜಗನ್​​ ಸರ್ಕಾರ ಕಳಿಸಿಕೊಟ್ಟಿದೆ. ವಿಧಾನ ಪರಿಷತ್​​​ ರದ್ದು ನಿರ್ಣಯದ ಪರವಾಗಿ ಕೆಳಮನೆಯಲ್ಲಿ ಎಷ್ಟು ಮತಗಳು ಬಿದ್ದಿವೆ ಎಂಬುದರ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಸೋಮವಾರ(ಜ.28) ವಿಧಾನ ಪರಿಷತ್​​ ತೆಗೆದು ಹಾಕಲು ಆಂಧ್ರಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿತ್ತು. ಇದರ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದ ಬಳಿಕ ಆಡಳಿತರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ಇರುವುದರಿಂದ ಸುಲಭವಾಗಿ ಅನುಮೋದನೆ ಸಿಕ್ಕಿತು.

ತಮ್ಮ ತಂದೆ ಮತ್ತೆ ಅಸ್ತಿತ್ವಕ್ಕೆ ತಂದಿದ್ದ ವಿಧಾನ ಪರಿಷತ್ ಅನ್ನು ರದ್ದುಗೊಳಿಸುವ ಕುರಿತಂತೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಬಳಿಕ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಯಿತು. ನಿರ್ಣಯದ ಪರವಾಗಿ 133 ಮತಗಳು ಬಿದ್ದಿದೆ. ನಿರ್ಣಯದ ವಿರುದ್ಧ ಯಾವುದೇ ಮತ ಚಲಾವಣೆಯಾಗಿಲ್ಲ. ಈ ಮೂಲಕ ಆಂಧ್ರದಲ್ಲೇ ವಿಧಾನ ಪರಿಷತ್ ಅನ್ನು ಎರಡನೇ ಬಾರಿ ವಿಸರ್ಜಿಸಲಾಗಿದೆ.

ಇದನ್ನೂ ಓದಿ: ‘ವಿಧಾನ ಪರಿಷತ್​​​ ರದ್ದುಗೊಳಿಸುವ ಜಗನ್​​ ಸರ್ಕಾರದ ನಿರ್ಧಾರ ಖಂಡನೀಯ‘: ಪವನ್​​ ಕಲ್ಯಾಣ್​​

ಸದ್ಯ ದೇಶದಲ್ಲಿ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್‌ ಅಸ್ತಿತ್ವದಲ್ಲಿದೆ. ಇದರಲ್ಲಿ ಕರ್ನಾಟಕವೂ ಒಂದು. ಇನ್ನುಳಿದ ರಾಜ್ಯಗಳು ಈಗಾಗಲೇ ಮೇಲ್ಮನೆಯನ್ನು ರದ್ದುಗೊಳಿಸಿವೆ.

ವೈ.ಎಸ್​​ ರಾಜಶೇಖರ್​​ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್​​​ ಶುರು ಮಾಡಲಾಯ್ತು. ಅಂದಿನ ವಿಧಾನ ಪರಿಷತ್​​ ಅನ್ನು ಸಿಎಂ ವೈ.ಎಸ್ ಜಗನ್​​ ಮೋಹನ್​ ರೆಡ್ಡಿ ರದ್ದುಗೊಳಿಸಿರುವುದು ಖಂಡನೀಯ. ಇದರ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ವಿಧಾನ ಪರಿಷತ್​​ ಬೇಕಿದೆ ಎಂದು ಟಿಡಿಪಿ ಮತ್ತು ಜನಸೇನೆ ​​ಆರೋಪಿಸಿವೆ.
Youtube Video
First published: January 28, 2020, 4:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories