• Home
  • »
  • News
  • »
  • national-international
  • »
  • Jagan Mohan Reddy| ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವೈಎಸ್​ಆರ್​ ಕಾಂಗ್ರೆಸ್ ಕ್ಲೀನ್ ಸ್ವೀಪ್

Jagan Mohan Reddy| ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವೈಎಸ್​ಆರ್​ ಕಾಂಗ್ರೆಸ್ ಕ್ಲೀನ್ ಸ್ವೀಪ್

ಜಗನ್ ಮೋಹನ್ ರೆಡ್ಡಿ.

ಜಗನ್ ಮೋಹನ್ ರೆಡ್ಡಿ.

ಭಾನುವಾರ ಸಂಜೆ 7.30ಕ್ಕೆ ಬಂದ ಅಂತಿಮ ಫಲಿತಾಂಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ 553 ರಲ್ಲಿ 547 ZPTC ಕ್ಷೇತ್ರಗಳಲ್ಲಿ ಗೆಲುವು  ಪಡೆದುಕೊಂಡಿದೆ. MPTC 8,083 ಕ್ಷೇತ್ರಗಳ ಪೈಕಿ  7,284 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

  • Share this:

    ಹೈದರಾಬಾದ್: ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (JaganMohan Reddy) ನೇತೃತ್ವದ ವೈಎಸ್​ಆರ್ ಕಾಂಗ್ರೆಸ್ (YSR Congress) ಪಕ್ಷ ಆಂಧ್ರಪ್ರದೇಶದ (Andhra Pradesh) ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಭಾನುವಾರ ಫಲಿತಾಂಶ ಪ್ರಕಟವಾಗಿದೆ. ಕೊನೆಯ ವರದಿಗಳು ಬಂದಂತೆ, ಪಕ್ಷವು ಸುಮಾರು ಶೇ.90 ಪ್ರತಿಶತದಷ್ಟು ಮಂಡಲ ಪರಿಷತ್ ಪ್ರಾದೇಶಿಕ ಕ್ಷೇತ್ರಗಳನ್ನು (MPTC) ಮತ್ತು ಶೇ.99 ಪ್ರತಿಶತದಷ್ಟು ಜಿಲ್ಲಾ ಪರಿಷತ್ ಪ್ರಾದೇಶಿಕ ಕ್ಷೇತ್ರಗಳಲ್ಲಿ (ZPTC) ಗೆಲುವು ಸಾಧಿಸಿದೆ ಎಂದು ವರದಿಯಾಗಿದೆ. ಏಪ್ರಿಲ್ 8 ರಂದು 515 ZPTC ಮತ್ತು 7,220 MPTC ಗಳಿಗೆ ಚುನಾವಣೆ ನಡೆಸಲಾಯಿತು. ಫಲಿತಾಂಶಗಳನ್ನು ಮೂಲತಃ ಏಪ್ರಿಲ್ 10 ರಂದು ಘೋಷಿಸಲು ನಿರ್ಧರಿಸಲಾಗಿತ್ತು, ಆದಾಗ್ಯೂ, ತೆಲುಗು ದೇಶಂ ಪಕ್ಷ ಮತ್ತು ಬಿಜೆಪಿ ಸಲ್ಲಿಸಿದ ಅರ್ಜಿಗಳ ಆಧಾರದ ಮೇಲೆ ಆಂಧ್ರಪ್ರದೇಶ ಹೈಕೋರ್ಟ್ ಎಣಿಕೆಯನ್ನು ಸ್ಥಗಿತಗೊಳಿಸಿತ್ತು. 


    ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ದಿನಾಂಕದಿಂದ ಕಡ್ಡಾಯವಾಗಿ ಮಾದರಿ ನೀತಿ ಸಂಹಿತೆ ಅವಧಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಇದೇ ಕಾರಣಕ್ಕೆ ಮತ ಏಣಿಕೆಗೆ ಕೋರ್ಟ್​ ಅನುಮತಿ ನೀಡಿರಲಿಲ್ಲ. ಕಳೆದ ಗುರುವಾರ, ಹೈಕೋರ್ಟ್‌ನ ವಿಭಾಗೀಯ ಪೀಠವು ಅಂತಿಮವಾಗಿ ಮತ ಎಣಿಕೆಗೆ ಅನುಮತಿ ನೀಡಿತು.


    ಭಾನುವಾರ ಸಂಜೆ 7.30ಕ್ಕೆ ಬಂದ ಅಂತಿಮ ಫಲಿತಾಂಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ 553 ರಲ್ಲಿ 547 ZPTC ಕ್ಷೇತ್ರಗಳಲ್ಲಿ ಗೆಲುವು  ಪಡೆದುಕೊಂಡಿದೆ. MPTC 8,083 ಕ್ಷೇತ್ರಗಳ ಪೈಕಿ  7,284 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.


    ಒಂದು ದಶಕದ ಹಿಂದೆ ಸ್ಥಾಪನೆಯಾದ ವೈಎಸ್‌ಆರ್ ಕಾಂಗ್ರೆಸ್, ರಾಜ್ಯದ 75 ಪುರಸಭೆಗಳು ಮತ್ತು 74 ನಗರ ಪಂಚಾಯತ್‌ಗಳಲ್ಲಿ ಗೆಲುವು ಸಾಧಿಸಿದೆ. ಅಲ್ಲದೆ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲಾ 12 ಮುನ್ಸಿಪಲ್ ಕಾರ್ಪೊರೇಶನ್‌ಗಳನ್ನೂ ಗೆಲುವು ಸಾಧಿಸಿದೆ.


    ಇದನ್ನೂ ಓದಿ: Petrol Price| ಉತ್ತರ ಕನ್ನಡದಲ್ಲಿ ಅತ್ಯಧಿಕ 106.93 ರೂ.ಗೆ ಏರಿದ ಪೆಟ್ರೋಲ್ ಬೆಲೆ; ಬೆಂಗಳೂರಲ್ಲಿ 10 ದಿನಗಳಿಂದ ಯಥಾಸ್ಥಿತಿ!


    2019 ರಲ್ಲಿ ವೈಎಸ್​ಆರ್ ಕಾಂಗ್ರೆಸ್ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲಿ 175 ವಿಧಾನಸಭಾ ಸ್ಥಾನಗಳ ಪೈಕಿ 151 ಸ್ಥಾನಗಳಲ್ಲಿ ಮತ್ತು 25 ಲೋಕಸಭಾ ಕ್ಷೇತ್ರಗಳ ಪೈಕಿ 22 ಸ್ಥಾನಗಳನ್ನು ಗೆಲುವು ಸಾಧಿಸಿತ್ತು. ವೈಎಸ್​ಆರ್ ಕಾಂಗ್ರೆಸ್​ ಪಕ್ಷದ ಈ ಗೆಲುವಿಗೆ ಮಹಿಳೆಯರು, ಹಿಂದುಳಿದ ಸಮುದಾಯಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಗನ್​ಮೋಹನ್ ರೆಡ್ಡಿ ಸರ್ಕಾರ ಜಾರಿಗೆ ತಂದ ಅಭಿವೃದ್ಧಿ ಯೋಜನೆಯೇ ಕಾರಣ ಎಂದು ಉಲ್ಲೇಖಿಸಲಾಗಿದೆ.

    Published by:MAshok Kumar
    First published: