Jagan Mohan Reddy: ಆ್ಯಂಬುಲೆನ್ಸ್​​ ಹೋಗಲು ದಾರಿ ಬಿಟ್ಟು ವ್ಯಕ್ತಿ ಪ್ರಾಣ ಉಳಿಸಿದ ಆಂಧ್ರ ಸಿಎಂ ಜಗನ್​​

ಸಿಎಂ ಜಗನ್‌ ಮೋಹನ್‌ ರೆಡ್ಡಿ ವಿಮಾನ ನಿಲ್ದಾಣದಿಂದ ಹಿಂದಿರುಗುತ್ತಿದ್ದರು. ಅದೇ ಮಾರ್ಗದಲ್ಲೇ ಆ್ಯಂಬುಲೆನ್ಸ್​ ಕೂಡ ಬಂದಿದೆ. ಈ ವೇಳೆ ತಮ್ಮ ತುರ್ತು ಕೆಲಸದ ಮಧ್ಯೆಯೂ ಸಾಲುಗಟ್ಟಲೇ ವಾಹನಗಳಿದ್ದ ಇಡೀ ಬೆಂಗಾವಲನ್ನು ನಿಲ್ಲಿಸಿ ಆ್ಯಂಬುಲೆನ್ಸ್​ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ.

news18-kannada
Updated:September 3, 2020, 8:00 AM IST
Jagan Mohan Reddy: ಆ್ಯಂಬುಲೆನ್ಸ್​​ ಹೋಗಲು ದಾರಿ ಬಿಟ್ಟು ವ್ಯಕ್ತಿ ಪ್ರಾಣ ಉಳಿಸಿದ ಆಂಧ್ರ ಸಿಎಂ ಜಗನ್​​
ಜಗನ್​ಮೋಹನ್​ ರೆಡ್ಡಿ
  • Share this:
ನವದೆಹಲಿ(ಸೆ.02): ತುರ್ತು ಕೆಲಸದ ನಡುವೆಯೂ ಆ್ಯಂಬುಲೆನ್ಸ್​ ಹೋಗಲು ತನ್ನ ಇಡೀ ಬೆಂಗಾವಲು ಪಡೆಯನ್ನೇ ನಿಲ್ಲಿಸಿ ದಾರಿ ಬಿಟ್ಟ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್​ ಜಗನ್​​ ಮೋಹನ್​​ ರೆಡ್ಡಿ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಹೀಗೆ ಮಾನವೀಯತೆ ತೋರಿ ಇತರರಿಗೆ ಮಾದರಿಯಾದ ಜಗನ್​​ ನಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅಭಿಮಾನಿಗಳು ಜಗನ್​​ ಸರಳ ಪ್ರತೀಕ ಮತ್ತು ಬಡವರಿಗೆ ಆಪತ್ಭಾಂದವ ಎಂದು ಬಣ್ಣಿಸುತ್ತಿದ್ದಾರೆ.

ಸಿಎಂ ಜಗನ್‌ ಮೋಹನ್‌ ರೆಡ್ಡಿ ವಿಮಾನ ನಿಲ್ದಾಣದಿಂದ ಹಿಂದಿರುಗುತ್ತಿದ್ದರು. ಅದೇ ಮಾರ್ಗದಲ್ಲೇ ಆ್ಯಂಬುಲೆನ್ಸ್​ ಕೂಡ ಬಂದಿದೆ. ಈ ವೇಳೆ ತಮ್ಮ ತುರ್ತು ಕೆಲಸದ ಮಧ್ಯೆಯೂ ಸಾಲುಗಟ್ಟಲೇ ವಾಹನಗಳಿದ್ದ ಇಡೀ ಬೆಂಗಾವಲನ್ನು ನಿಲ್ಲಿಸಿ ಆ್ಯಂಬುಲೆನ್ಸ್​ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ. ಈ ಮೂಲಕ ಓರ್ವ ವ್ಯಕ್ತಿ ಪ್ರಾಣ ಉಳಿಸಲು ಸಹಾಯರಾಗಿದ್ದಾರೆ.

ರಸ್ತೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಚಾಪರ್ಥಿನಾ ಶೇಖರ್ ಎಂಬ ವ್ಯಕ್ತಿಯನ್ನು ಆ್ಯಂಬುಲೆನ್ಸ್​ನಲ್ಲಿ ಕರೆದೊಯ್ಯಲಾಗುತ್ತಿತ್ತು. ಗಂಭೀರವಾಗಿ ಗಾಯಗೊಂಡ ಗಾಯಾಳು ಶೇಖರ್‌ರನ್ನು ಆ್ಯಂಬುಲೆನ್ಸ್‌ನಲ್ಲಿ ವಿಜಯವಾಡದ ಇಎಸ್‌ಐ ಆಸ್ಪತ್ರೆಗೆ ಕರೆದೊಯ್ಯುವಾಗ ಅದೇ ದಾರಿಯಲ್ಲೇ ಸಿಎಂ ಜಗನ್‌ ಬರುತ್ತಿದ್ದರು.

ಇದನ್ನೂ ಓದಿ: ಸ್ಯಾಂಡಲ್​​ವುಡ್​​ ಡ್ರಗ್​​ ಮಾಫಿಯಾ: 15 ಮಂದಿ ಸ್ಟಾರ್ಸ್​ಗೆ ಸದ್ಯದಲ್ಲೇ ಸಿಸಿಬಿ ಪೊಲೀಸರಿಂದ ನೋಟಿಸ್​​

ಇನ್ನು, ಸಿಎಂ ಬರುತ್ತಿದ್ದ ಕಾರಣ ಆ್ಯಂಬುಲೆನ್ಸ್ ಹೋಗಲು ತೊಂದರೆಯಾಗಿತ್ತು. ಸಿಎಂ ವಿಮಾನ ನಿಲ್ದಾಣದಿಂದ ತಡೆಪಲ್ಲಿಯ ತಮ್ಮ ನಿವಾಸಕ್ಕೆ ಹೋಗುತ್ತಿದ್ದರು. ಈ ವೇಳೆ ಹೀಗೆ ಸಿಎಂ ತಮ್ಮ ಕೆಲಸಕ್ಕಿಂತಲೂ ವ್ಯಕ್ತಿ ಪ್ರಾಣಕ್ಕೆ ಮಹತ್ವ ನೀಡಿ ಆ್ಯಂಬುಲೆನ್ಸ್​​ಗೆ ದಾರಿ ಬಿಟ್ಟಿದ್ಧಾರೆ.
Published by: Ganesh Nachikethu
First published: September 2, 2020, 10:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading