ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಎನ್‌ಡಿಎ ಪಾಳಯ ಸೇರುವಂತಹ ವಾತಾವರಣ ಸೃಷ್ಟಿಸಲಾಗುತ್ತಿದೆ. ಕೇಂದ್ರದಿಂದ ಆ ರೀತಿಯ ಪಟ್ಟುಗಳನ್ನು ಆಂಧ್ರ ಪ್ರದೇಶದಲ್ಲಿ ಪ್ರಯೋಗಿಸಲಾಗುತ್ತಿದೆ ಎನ್ನುವ ವರದಿಗಳ ನಡುವೆ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಆಂಧ್ರಪ್ರದೇಶದ ಉಸ್ತುವಾರಿ ಸುನಿಲ್ ದೇವಧರ್ ಮಂಗಳವಾರ ಕೇಸರಿ ಪಕ್ಷದಿಂದ ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ನಿರಾಕರಿಸಿದರು.
"ಜಗನ್ ಮೋಹನ್ ರೆಡ್ಡಿ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಜುಲೈ 7 ರ ಕ್ಯಾಬಿನೆಟ್ ವಿಸ್ತರಣೆಯ ಮೊದಲು ಬಿಜೆಪಿ ಎಂದಿಗೂ ಅವರನ್ನು ಸಂಪರ್ಕಿಸಿಲ್ಲ "ಎಂದು ದೇವಧರ್ ನ್ಯೂಸ್ 18 ಗೆ ತಿಳಿಸಿದರು, ಜಗನ್ ಸರ್ಕಾರ ತೀವ್ರ ಹಣಕಾಸಿನ ಕೊರತೆಯಿಂದ ನಲುಗುತ್ತಿದೆ ಮತ್ತು ಅವರ ಭವಿಷ್ಯದ ನಿರೀಕ್ಷೆಗಳ ಬಗ್ಗೆ ವೈಎಸ್‌ಆರ್‌ಸಿಪಿ ಚಿಂತಿಸುತ್ತಿದೆ ಮತ್ತು ಮೋದಿ ಸರಕಾರದಿಂದ ಅವರಿಗೆ ಸಹಾಯದ ಅವಶ್ಯಕತೆ ಇದೆ ಎಂದು ಹೇಳಿದರು.
ಜಗನ್ ಅವರನ್ನು ಟಿಪ್ಪು ಸುಲ್ತಾನನಿಗೆ ಹೋಲಿಸಿದ, ದೇವಧರ್ ಅವರು, "ವೈಎಸ್‌ಆರ್ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದು ನಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಕೆಲಸ. ಜಗನ್ ಮೋಹನ್ ರೆಡ್ಡಿಯವರ ಅಡಿಯಲ್ಲಿ ಆಂಧ್ರ ಪ್ರದೇಶದ ಹಿಂದುಗಳು ನರಳುತ್ತಿದ್ದಾರೆ, ಅವರು ಧಾರ್ಮಿಕ ಮತಾಂತರವನ್ನು ಪ್ರೋತ್ಸಾಹಿಸುತ್ತಿದ್ದು, ರಾಜ್ಯದಾದ್ಯಂತ ಚರ್ಚುಗಳನ್ನು ನಿರ್ಮಿಸುತ್ತಿದ್ದಾರೆ
ಬಿಜೆಪಿಯ ಮಿಷನ್ ಸೌತ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ ದೇವಧರ್, ಕೇಸರಿ ಪಕ್ಷವು ತನ್ನದೇ ಆದ ಅರ್ಹತೆಯ ಮೇಲೆ ಆಂಧ್ರಪ್ರದೇಶಕ್ಕೆ ಕಾಲಿಡಲಿದೆ ಎಂದು ಹೇಳಿದರು. ಪಕ್ಷವು ಇಲ್ಲಿಯವರೆಗೆ ರಾಜ್ಯದಲ್ಲಿ ಒಬ್ಬ ಶಾಸಕರನ್ನು ಹೊಂದಿಲ್ಲ, ಆದರೆ ಬಿಜೆಪಿಯ ಮಿತ್ರ ಪಕ್ಷ ಜನ ಸೇನೆಯು ಒಬ್ಬ ಶಾಸಕನನ್ನು ಹೊಂದಿದೆ.
"ನಮ್ಮ ನಿಲುವು ಸ್ಪಷ್ಟವಾಗಿದೆ. ಆಂಧ್ರಪ್ರದೇಶದಲ್ಲಿ ಬಿಜೆಪಿಯ ಏಕೈಕ ಮೈತ್ರಿಕೂಟ ಜನ ಸೇನೆ ಪಕ್ಷ ಮಾತ್ರ, ಮತ್ತು ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಸಾಧನೆಯ ಬಗ್ಗೆ ನಮಗೆ ವಿಶ್ವಾಸವಿದೆ "ಎಂದು ದೇವಧರ್ ಹೇಳಿದರು
ವೈಎಸ್‌ಆರ್‌ಸಿಪಿಯೊಳಗಿನ ಮೂಲಗಳ ಹೇಳಿಕೆಯ ಪ್ರಕಾರ, ಎನ್‌ಡಿಎ ಸರ್ಕಾರದ ಜೊತೆ ಸೇರುವ ಸಾಧ್ಯತೆಯನ್ನು ತಳ್ಳಿಹಾಕಿವೆ ಆದರೆ ಇತ್ತೀಚಿನ ದಿನಗಳಲ್ಲಿ ಮೋದಿ ಸರ್ಕಾರವು ವೈಎಸ್‌ಆರ್ ಕಾಂಗ್ರೆಸ್ ಸಂಸದರಿಗೆ ಕ್ಯಾಬಿನೆಟ್ ಸ್ಥಾನಗಳನ್ನು ನೀಡುತ್ತದೆಯೇ ಎಂಬ ಬಗ್ಗೆ ಗಾಳಿಸುದ್ದಿ ಹರಿದಾಡಿತ್ತು, ಇದಕ್ಕೆ ಸ್ಪಷ್ಟನೆ ನೀಡಲು ನಿರಾಕರಿಸಲಾಯಿತು.
"ನಾವು ಯಾವಾಗಲೂ ಮೋದಿ ಸರ್ಕಾರಕ್ಕೆ ವಿಷಯ ಆಧಾರಿತ ಬೆಂಬಲವನ್ನು ನೀಡಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ. ನಾವು ಕೇಂದ್ರದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಯ್ದುಕೊಳ್ಳಲು ಬಯಸುತ್ತೇವೆ, ಆದರೆ ಮೈತ್ರಿಯಿಂದ ದೂರ ಇದ್ದೇವೆ ಎಂದು ವೈಎಸ್‌ಆರ್‌ಸಿಪಿ ಸಂಸದರೊಬ್ಬರು ಸಿಎನ್‌ಎನ್-ನ್ಯೂಸ್ 18 ಗೆ ತಿಳಿಸಿದರು.
22 ಸಂಸದರನ್ನು ಹೊಂದಿರುವ ವೈಎಸ್‌ಆರ್‌ಸಿಪಿ ಲೋಕಸಭೆಯಲ್ಲಿ ನಾಲ್ಕನೇ ಅತಿದೊಡ್ಡ ಪಕ್ಷವಾಗಿದೆ. 2019 ರ ವಿಧಾನಸಭಾ ಚುನಾವಣೆಯಲ್ಲಿ, 175 ವಿಧಾನಸಭಾ ಸ್ಥಾನಗಳಲ್ಲಿ 151 ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿದ ಜಗನ್. ಎನ್‌ಡಿಎ ಜೊತೆ ಅಂದರೆ ಬಿಜೆಪಿ ಜೊತೆ ಸೇರುವುದರ ಹಿಂದಿರುವ ಹಿಂಜರಿಕೆಯನ್ನು ವಿವರಿಸಿದ ಪಕ್ಷದ ಇನ್ನೊಬ್ಬ ಹಿರಿಯ ನಾಯಕ, ಜಗನ್ ಅವರ ಪ್ರಮುಖ ಬೆಂಬಲಿಗರು ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳಿಂದ ಬಂದವರು ಅವರಿಗೆ ಮೋಸ ಮಾಡಲು ಸಾಧ್ಯವೇ ಎಂದು ಹೇಳಿದರು.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ನಮ್ಮ ಮತ ಬ್ಯಾಂಕ್ ಅನ್ನು ಅದು ಹಾಳು ಮಾಡುವ ಅಪಾಯವಿದೆ. ವಿಶೇಷ ಸ್ಥಾನಮಾನದ ಸಮಸ್ಯೆ ನಮಗೆ ನಿರ್ಣಾಯಕವಾಗಿದೆ. ಆಂಧ್ರದ ವಿಶೇಷ ಸ್ಥಾನಮಾನವನ್ನು ಬೆಂಬಲಿಸುವವರಿಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ನಮ್ಮ ಸಿಎಂ ಪುನರುಚ್ಚರಿಸಿದ್ದಾರೆ ಎಂದು ವೈಎಸ್‌ಆರ್‌ಸಿಪಿ ನಾಯಕರೊಬ್ಬರು ಹೇಳಿದರು.
ಒಂದು ಒಕ್ಕೂಟವಾಗಿ ಅಲ್ಲದಿದ್ದರೂ, ವೈಎಸ್‌ಆರ್‌ಸಿಪಿ ಪ್ರಜ್ಞಾಪೂರ್ವಕವಾಗಿ ಬಿಜೆಪಿಯನ್ನು ಎದುರಿಸಲು ತಯಾರಾಗುತ್ತಿರುವ ಯುನೈಟೆಡ್ ಫ್ರಂಟಿನಿಂದ ದೂರ ಉಳಿದಿದೆ. ಕಾಂಗ್ರೆಸ್‌ನ ಪುನರುಜ್ಜೀವನವನ್ನು ಒಳಗೊಂಡ ಯಾವುದೇ ಪ್ರಯತ್ನಕ್ಕೆ ನಾವು ಹೋಗುವುದಿಲ್ಲ, ಹಿಂದಿನ ಕಹಿ ಘಟನೆಗಳು ಈ ರೀತಿ ಮಾಡಿಸುತ್ತಿವೆ, ಆ ಕಾರಣದಿಂದ ಜಗನ್ ಬೆಂಬಲವನ್ನು ಹೊಂದಿರುವುದಿಲ್ಲ ಎಂದು ಪಕ್ಷದ ಪ್ರಭಾವಿ ನಾಯಕರೊಬ್ಬರು ಹೇಳಿದರು.
ಇದನ್ನೂ ಓದಿ: ಆಮ್ಲಜನಕ ಕೊರತೆಯಿಂದ ಸಾವು: ಕೇಂದ್ರದಿಂದ ನಮಗೆ ಯಾವುದೇ ಪತ್ರ ಬಂದಿಲ್ಲ; ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಆರೋಪ
ಹಿರಿಯ ವೈಎಸ್‌ಆರ್‌ಸಿಪಿ ಸಂಸದರು ಹೇಳಿದರು: "ಕಪಿಲ್ ಸಿಬಲ್ ಅವರ ಔತಣಕೂಟದಲ್ಲಿ ವೈಎಸ್‌ಆರ್‌ಸಿಪಿ ನಾಯಕರು ಪಾಲ್ಗೊಂಡಿದ್ದಾರೆ ಎಂದು ವಿವಿಧ ಮಾಧ್ಯಮಗಳು ಸುಳ್ಳು ವರದಿ ಮಾಡಿವೆ, ಆದರೆ ನಾವು ಎಂದಿಗೂ ಆ ಕೆಲಸ ಮಾಡುವುದಿಲ್ಲ ಮತ್ತು ನಾವು ಕಾಂಗ್ರೆಸ್‌ನೊಂದಿಗೆ ಯಾವುದೇ ಸಂಬಂಧ ಬೆಳೆಸಲು ಇಷ್ಟ ಪಡುವುದಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ