ದೇಶ ತೊರೆಯುತ್ತಿದ್ದ ನಟಿ ಜಾಕ್ವೆಲಿನ್​​ಗೆ ತಡೆ: ಏರ್​​ಪೋರ್ಟ್​​ನಲ್ಲೇ ವಶಕ್ಕೆ ಪಡೆದ ಅಧಿಕಾರಿಗಳು

Actress Jacqueline Fernandes: ಇಂದು ಜಾಕ್ವೆಲಿನ್ ​​ ಕಾರ್ಯಕ್ರಮವೊಂದಕ್ಕಾಗಿ ದುಬೈಗೆ (Dubai) ಹೋಗಲು ಮುಂದಾದಾಗ ಏರ್​ಪೋರ್ಟ್​ನಲ್ಲೇ ತಡೆಯಲಾಗಿದೆ. ಇದೀಗ ನಟಿಯನ್ನು ವಿಚಾರಣೆಗಾಗಿ ದೆಹಲಿಗೆ ಕರೆತರಲಾಗುವುದು ಎಂದು ಇಡಿ(ED) ಮೂಲಗಳು ತಿಳಿಸಿವೆ.

ನಟಿ ಜಾಕ್ವೆಲಿನ್ ಫರ್ನಾಂಡಿಸ್

ನಟಿ ಜಾಕ್ವೆಲಿನ್ ಫರ್ನಾಂಡಿಸ್

  • Share this:
ಮುಂಬೈ: ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರನ್ನು ವಲಸೆ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ತಡೆದಿದ್ದಾರೆ. ಎಲ್‌ಒಸಿ (Lookout Notice) ಹಿನ್ನೆಲೆಯಲ್ಲಿ ಬಾಲಿವುಡ್​ ನಟಿಯನ್ನು ವಶಕ್ಕೆ ಪಡೆಯಲಾಗಿದೆ.  ಸುಕೇಶ್ ಚಂದ್ರಶೇಖರ್ (Sukesh Chandrasekhar) ಪ್ರಕರಣದಲ್ಲಿ ನಟಿಯ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್​​ ಔಟ್​ ನೋಟಿಸ್​ ಹೊರಡಿಸಿತ್ತು. ಇಂದು ಜಾಕ್ವೆಲಿನ್ ​​ ಕಾರ್ಯಕ್ರಮವೊಂದಕ್ಕಾಗಿ ದುಬೈಗೆ (Dubai) ಹೋಗಲು ಮುಂದಾದಾಗ ಏರ್​ಪೋರ್ಟ್​ನಲ್ಲೇ ತಡೆಯಲಾಗಿದೆ. ಇದೀಗ ನಟಿಯನ್ನು ವಿಚಾರಣೆಗಾಗಿ ದೆಹಲಿಗೆ ಕರೆತರಲಾಗುವುದು ಎಂದು ಇಡಿ(ED) ಮೂಲಗಳು ತಿಳಿಸಿವೆ.

₹ 10 ಕೋಟಿ ಮೌಲ್ಯದ ಉಡುಗೊರೆಗಳು..!

200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಖೇಶ್ ಚಂದ್ರಶೇಖರ್ ಜೊತೆ ನಟಿ ಜಾಕ್ವೆಲಿನ್ ​​ ಹೆಸರು ತಳುಕು ಹಾಕಿಕೊಂಡಿದೆ. ಕಳೆದ ಒಂದು ವಾರದಿಂದ ಸುಖೇಶ್​ ಹಾಗೂ ಜಾಕ್ವೆಲಿನ್ ​​ ವೈಯಕ್ತಿಯ ಫೋಟೋಗಳು ಎನ್ನಲಾದ ಫೋಟೋಗಳು ಸಾಕಷ್ಟು ಸುದ್ದಿ ಮಾಡಿದ್ದವು. ಇನ್ನು ಜಾಕಲಿನ್​​ ಅವರಿಗೆ ಚಂದ್ರಶೇಖರ್ ₹ 10 ಕೋಟಿ ಮೌಲ್ಯದ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವುದು ಬಯಲಾಗಿದೆ. ಇದರಲ್ಲಿ ₹ 52 ಲಕ್ಷ ಮೌಲ್ಯದ ಕುದುರೆ ಮತ್ತು ₹ 9 ಲಕ್ಷ ಮೌಲ್ಯದ ಪರ್ಷಿಯನ್ ಬೆಕ್ಕು ಸೇರಿವೆ ಎಂದು ಇಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಕ್ರಮ ಹಣ ವ್ಯವಹಾರದಲ್ಲಿ ಜಾಕಲಿನ್​..!?

ಆರೋಪಿ ಸುಖೇಶ್ ಚಂದ್ರಶೇಖರ್ ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ. ತಿಹಾರ್ ಜೈಲಿನಲ್ಲಿದ್ದ ಉದ್ಯಮಿಯೊಬ್ಬರ ಪತ್ನಿಯಿಂದ ₹ 200 ಕೋಟಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಚಂದ್ರಶೇಖರ್‌ ಹಾಗೂ ನಟಿಯ ಮಧ್ಯೆ ಹಣಕಾಸಿನ ವಹಿವಾಟುಗಳು ನಡೆದಿರುವ ಬಗ್ಗೆ ಪುರಾವೆಗಳನ್ನು ಕೇಂದ್ರೀಯ ಸಂಸ್ಥೆ ಬಹಿರಂಗಪಡಿಸಿದೆ. ಸುಕೇಶ್‌ನಿಂದ ಜಾಕ್ವೆಲಿನ್ ​ಗೆ ಹಣ ತಲುಪಿದ ಅಪರಾಧದ ಆದಾಯದ ತನಿಖೆ ಇನ್ನೂ ಮುಂದುವರೆದಿದೆ. ನಟಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸಬೇಕಿದೆ. ಜಾಕ್ವೆಲಿನ್ ಮತ್ತು ಅವರ ಸಹಾಯಕರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: Jacqueline Fernandez: ವಂಚಕನಿಂದ 36 ಲಕ್ಷ ಮೌಲ್ಯದ ಬೆಕ್ಕು ಉಡುಗೊರೆ ಪಡೆದಿದ್ದ ಜಾಕ್ವೆಲಿನ್..!

ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌

ರಾಜಕಾರಣಿಯ ಬಂಧು ಎಂದು ಹೇಳಿಕೊಂಡು ನೂರಾರು ಜನರಗೆ ಕೋಟ್ಯಂತರ ರೂ. ವಂಚನೆ  ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ ಜತೆ ಶ್ರೀಲಂಕಾ  ಮೂಲದ ಬಾಲಿವುಡ್‌  ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಹೆಸರು ತಳುಕು ಹಾಕಿಕೊಂಡು ಇಬ್ಬರು ಪ್ರೀತಿಯಲ್ಲಿ ಇದ್ದಾರೆ ಎಂಬುದನ್ನು ಜಗತ್ತಿನ ಮುಂದೆ ಬಯಲು ಮಾಡಿತ್ತು.. ಆ ಫೋಟೋದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಕನ್ನಡಿ ಮುಂದೆ ವಂಚಕ ಸುಕೇಶ್ ಚಂದ್ರಶೇಖರ್ ಕೆನ್ನೆಗೆ ಕಿಸ್ ಮಾಡಿದ್ದಾಳೆ. ಅಲ್ಲದೆ ಆ ಫೋಟೋವನ್ನ ಕಳ್ಳ ಸುಕೇಶ್ ಮಿರರ್ ಮುಂದೆ ತನ್ನದೇ ಮೊಬೈಲ್‌ನಲ್ಲಿ ಸೆಲ್ಫಿ ಹಿಡಿದಿದ್ದಾನೆ. ಜಾಕ್ವೆಲಿನ್ ಹಾಗೂ ಸುಕೇಶ್ ಇಬ್ಬರ ಈ ಫೋಟೊ ಎಲ್ಲಡೆ ವೈರಲ್ ಆಗಿತ್ತು.

ವಂಚಕನ ಮೇಲಿದೆ 15ಕ್ಕೂ ಹೆಚ್ಚು FIR 

ಸುಕೇಶ್ ಚಂದ್ರಶೇಖರ್ ಸದ್ಯ 200 ಕೋಟಿ ವಂಚನೆ ಆರೋಪದ ಮೇಲೆ ದೆಹಲಿಯ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. 27 ವರ್ಷದ ಸುಕೇಶ್ ಚಂದ್ರಶೇಖರ್ ಬೆಂಗಳೂರು ಮೂಲದವನಾಗಿದ್ದು, ತನ್ನ 17ನೇ ವರ್ಷಕ್ಕೆ ನಕಲಿ ಸಹಿ ಕೇಸಿನಲ್ಲಿ ಪೊಲೀಸರ ಅತಿಥಿಯಾಗಿದ್ದ.  ಆ ಬಳಿಕ ರಾಜಕಾರಣಿಗಳಿಗೆ, ಉದ್ಯಮಿಗಳಿಗೆ, ಸೆಲೆಬ್ರೆಟಿಗಳಿಗೆ ನಂಬಿಕೆ ಹುಟ್ಟಿಸಿ ಕೋಟಿ ಕೋಟಿ ಹಣ ಲೂಟಿ ಮಾಡುವುದೇ ಈತನ ಕಾಯಕವಾಗಿತ್ತು. ಐಷಾರಾಮಿ ಜೀವನ ನಡೆಸಲು ಈತ ಇಂತಹ ಕೃತ್ಯಕ್ಕೆ ಕೈ ಹಾಕುತ್ತಿದ್ದ. ಇನ್ನು ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಿಂದ ಏಪ್ರಿಲ್-ಜೂನ್‍ನಲ್ಲಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದ. ಈ ವೇಳೆ ಜಾಕ್ವಲಿನ್‌ ಅನ್ನು ಚೆನ್ನೈಗೆ ಕರೆಸಿಕೊಂಡಿದ್ದ ಎನ್ನಲಾಗಿದೆ. ಆ ವೇಳೆನೇ ಈ ಮುತ್ತಿನ ಪ್ರಕರಣ ನಡೆದಿದೆ ಎನ್ನಲಾಗಿದೆ.
Published by:Kavya V
First published: