Jackie Chan: ರಾಜಕೀಯಕ್ಕೆ ಖ್ಯಾತ ನಟ ಜಾಕಿ ಚಾನ್: ಕಮ್ಯುನಿಸ್ಟ್ ಪಕ್ಷ ಸೇರಲಿದ್ದಾರಂತೆ ಮಾರ್ಷಲ್ ಆರ್ಟ್ಸ್ ಕಿಂಗ್

ಬೆಳಗ್ಗೆಯಷ್ಟೇ ಭಾರತ ಚಿತ್ರರಂಗದ ಮೇರು ನಟ ರಜನಿಕಾಂತ್​ ರಾಜಕೀಯದಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದಾಗಿ ತಿಳಿಸಿದ್ದರು. ಸಂಜೆ ಹೊತ್ತಿಗೆ ಜಾಕಿ ಚಾನ್​ ರಾಜಕೀಯಕ್ಕೆ ಧಮುಕ್ಕುವ ಸುದ್ದಿ ಹೊರ ಬಿದ್ದಿದೆ.

ಜಾಕಿ ಚಾನ್​

ಜಾಕಿ ಚಾನ್​

  • Share this:
ಜಾಕಿ ಚಾನ್​​.. ಹೆಸರಲ್ಲೇ ಒಂದು ವೇಗವಿದೆ. ಹಾಸ್ಯಭರಿತ ಸಾಹಸ ಚಿತ್ರಗಳಿಂದಲೇ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಹಾಂಗ್​ಕಾಂಗ್​ ದೇಶದ ನಟ ಈಗ ರಾಜಕೀಯದತ್ತ ಮುಖ ಮಾಡಿದ್ದಾರೆ. ಬೆಳಗ್ಗೆಯಷ್ಟೇ ಭಾರತ ಚಿತ್ರರಂಗದ ಮೇರು ನಟ ರಜನಿಕಾಂತ್​ ರಾಜಕೀಯದಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದಾಗಿ ತಿಳಿಸಿದ್ದರು. ಸಂಜೆ ಹೊತ್ತಿಗೆ ಜಾಕಿ ಚಾನ್​ ರಾಜಕೀಯಕ್ಕೆ ಧಮುಕ್ಕುವ ಸುದ್ದಿ ಹೊರ ಬಿದ್ದಿದೆ. 67 ವರ್ಷದ ನಟ ಜಾಕಿ ಚಾನ್ ಹಾಂಗ್​ಕಾಂಗ್​ನಲ್ಲಿ ಆಡಳಿತಾರೂಢ ಪಕ್ಷವಾದ ಕಮ್ಯುನಿಸ್ಟ್​​​​ ಪಾರ್ಟಿಯನ್ನು(CPS) ಸೇರ್ಪಡೆಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಬಿಜಿಂಗ್​ನಲ್ಲಿ ನಡೆದ ಬ್ರಿಟಿಷ್​ ಕಾಲೋನಿ ವಿರುದ್ಧದ ಪ್ರತಿಭಟನೆಯನ್ನು ಬೆಂಬಲಿಸುವ ಮೂಲಕ ಇತ್ತೀಚೆಗೆ ಜಾಕಿ ಜಾನ್​​​ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಆಡಳಿತ ಪಕ್ಷ ಕಮ್ಯುನಿಸ್ಟ್​​​ ಪಾರ್ಟಿ ಸೇರುವ ಬಗ್ಗೆ ಒಲವು ತೋರಿದ್ದಾರೆ. ಚೀನಾ ಸಿನಿಮಾ ಅಸೋಸಿಯೇಷನ್​ನ ಉಪಾಧ್ಯಕ್ಷರೂ ಆಗಿರುವ ಜಾಕಿ, ಜು.1ರಂದು ಅಧ್ಯಕ್ಷ ಜಿಂಗ್​ಪಿಂಗ್​ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿ ಪಕ್ಷ ಸೇರುವ ಬಗ್ಗೆ ಚರ್ಚಿಸಿದ್ದಾರಂತೆ. ಇದರ ಬೆನ್ನಲ್ಲೇ ಕಮ್ಯುನಿಸ್ಟ್​​ ಪಕ್ಷದ ಕಾರ್ಯವನ್ನು ಜಾಕಿ ಕೊಂಡಾಡಿದ್ದರು.

ಕಮ್ಯುನಿಸ್ಟ್​​ ಪಕ್ಷ ನುಡಿದಂತೆ ನಡೆದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಡಿದೆ. ಒಂದು ಶತಮಾನವೇ ಹಿಡಿಯಬಹುದಾದ ಬದಲಾವಣೆಗಳನ್ನು ಕೇವಲ 2-3 ದಶಕಗಳಲ್ಲಿ ಸಾಧಿಸಿದ್ದಾರೆ. ಹೀಗಾಗಿಯೇ ನಾನು ಕಮ್ಯುನಿಸ್ಟ್​​ ಪಕ್ಷದ ಸದಸ್ಯನಾಗಲು ಬಯಸಿದ್ದೇನೆ ಎಂದು ಜಾಕಿ ಹೇಳಿಕೆ ನೀಡಿದ್ದರು. 2013ರಿಂದಲೂ ಜಾಕಿ ಕಮ್ಯುನಿಸ್ಟ್​​​ ಪಕ್ಷದ ಸಿದ್ಧಾಂತಗಳೊಂದಿಗೆ ಗುರುತ್ತಿಸಿಕೊಂಡಿದ್ದರು.

ಜಾಕಿ ಏಷ್ಯಿಯನ್​​ ಹಾಗೂ ಹಾಲಿವುಡ್​ ಸೇರಿದಂತೆ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾರ್ಷಲ್ ಆರ್ಟ್ಸ್ ಐಕಾನ್​ ಆಗಿ ಗುರುತ್ತಿಸಿಕೊಂಡಿದ್ದಾರೆ. ಭಾರತದಲ್ಲೂ ಜಾಕಿಜಾನ್​ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಈಗ ರಾಜಕೀಯಕ್ಕೆ ಕಮ್ಯುನಿಸ್ಟ್​​ ಪಾರ್ಟಿ ಮೂಲಕ ಪ್ರವೇಶಿಸುತ್ತಿರುವುದಕ್ಕೆ ಕೆಲ ಅಭಿಮಾನಿಗಳು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: RajiniKanth| ಮತ್ತೆ ರಾಜಕೀಯ ಪ್ರವೇಶ ಮಾಡ್ತಾರ ನಟ ರಜನೀಕಾಂತ್?; ಕುತೂಹಲ ಮೂಡಿಸಿದ ತಲೈವಾನ ಹೊಸ ಹೇಳಿಕೆ!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: