ಬೀಜಿಂಗ್ (ಜ. 4): ಚೀನಾದ ಟೆಕ್ ಬಿಲಿಯನೇರ್ ಹಾಗೂ ಅಲಿಬಾಬ ಕಂಪನಿಯ ಸಂಸ್ಥಾಪಕ ಜಾಕ್ ಮಾ ಕಳೆದ 2 ತಿಂಗಳಿನಿಂದ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ, ಚೀನಾದ ಕೋಟ್ಯಾಧಿಪತಿ Jack Ma ನಾಪತ್ತೆಯಾಗಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ. ಚೀನಾದ ಕಮ್ಯುನಿಸ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಜಾಕ್ ಮಾ 2 ತಿಂಗಳಿಂದ ಇದ್ದಕ್ಕಿದ್ದಂತೆ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅಕ್ಟೋಬರ್ ತಿಂಗಳಲ್ಲಿ ಚೀನಾ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಜಾಕ್ ಮಾ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಾದ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಶಾಂಘೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸರ್ಕಾರವನ್ನು ಟೀಕಿಸಿದ್ದ ಜಾಕ್ ಮಾ ಸರ್ಕಾರದ ವ್ಯವಸ್ಥೆಯ ವಿರುದ್ಧ ಕಿಡಿ ಕಾರಿದ್ದರು.
ತಮ್ಮದೇ ಟ್ಯಾಲೆಂಟ್ ಶೋ ಆದ ಆಫ್ರಿಕಾಸ್ ಬ್ಯುಸಿನೆಸ್ ಹೀರೋಸ್ ಅಂತಿಮ ಎಪಿಸೋಡ್ನಲ್ಲಿ ಜಾಕ್ ಮಾ ತೀರ್ಪುಗಾರರಾಗಿ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ, ಅದಕ್ಕೂ ಗೈರಾಗಿರುವ ಅವರು ಎಲ್ಲಿದ್ದಾರೆ? ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಆ ಶೋದ ವೆಬ್ಸೈಟ್ನಿಂದಲೂ ಜಾಕ್ ಮಾ ಅವರ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ. ಆಫ್ರಿಕಾದ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಈ ಶೋ ಮೂಲಕ 1.5 ಮಿಲಿಯನ್ ಡಾಲರ್ ಮೊತ್ತದ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: Honey Trap: ಮ್ಯಾಟ್ರಿಮೊನಿ ಮೂಲಕ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ದಂಧೆ; ತಾನೇ ನೀಡಿದ ದೂರಿನಿಂದ ಸಿಕ್ಕಿಬಿದ್ದಳು ಟೀಚರ್!
ಚೀನಾದ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಮಾತನಾಡಿದ್ದ ಜಾಕ್ ಮಾ ಅವರ ಅಲಿಬಾಬ ಮತ್ತು ಇತರೆ ಕಂಪನಿಗಳ ವಿರುದ್ಧ ಹಲವು ನಿರ್ಬಂಧಗಳನ್ನು ಕೂಡ ಚೀನಾ ಸರ್ಕಾರ ಹೇರಿತ್ತು. ಜಾಕ್ ಮಾ ಅವರ ಫೈನಾನ್ಷಿಯಲ್ ಟೆಕ್ ಕಂಪನಿಯಾದ ಆಂಟ್ ಗ್ರೂಪ್ ಮೇಲೂ ನಿರ್ಬಂಧಗಳನ್ನು ವಿಧಿಸಿದ್ದ ಚೀನಾ ಸರ್ಕಾರ ಆಂಟ್ ಗ್ರೂಪ್ಗೆ ಸೇರಿದ 37 ಬಿಲಿಯನ್ ಡಾಲರ್ ಐಪಿಓಗಳನ್ನು ಅಮಾನತುಗೊಳಿಸಿತ್ತು ಶಾಕ್ ನೀಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ