ಈ ವಾಟ್ಸ್ಆ್ಯಪ್(WhatsApp), ಫೇಸ್ಬುಕ್(Facebook) ಬರುವ ಮೊದಲಿನಿಂದಲೂ ಟ್ವಿಟರ್(Twitter) ರೂಲ್ ಮಾಡಿಕೊಂಡು ಬಂದಿತ್ತು. ಈಗಲೂ ಮಾಡುತ್ತಿದೆ. ಆದರೆ ವಿಚಾರ ಆದಲ್ಲ. ಟ್ವಿಟರ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ಜಾಖ್ ಡಾರ್ಸೆ(Jack Dorsey) ರಾಜೀನಾಮೆ(Resign) ಸಲ್ಲಿಸಿದ್ದಾರೆ. ಟ್ವಿಟರ್ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದ ಜಾಕ್ ಡಾರ್ಸೆ ಟ್ವಿಟರ್ ಸಂಸ್ಥೆಯಲ್ಲಿ 16 ವರ್ಷ ಕಾರ್ಯನಿರ್ವಹಿಸಿದ್ದರು. ಏಕಾಏಕಿ ಸಿಇಒ ಹುದ್ದೆಗೆ ರಾಜೀನಾಮೆ ನೀಡಿರುವ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಿವೆ. ಖುಷಿಯ ವಿಚಾರ ಏನಪ್ಪ ಅಂದರೆ, ನಮ್ಮ ಭಾರತೀ(India)ಯ ಮೂಲದವರು ಟ್ವಿಟರ್ ನೂತನ ಸಿಇಒ(New CEO) ಆಗಿ ನೇಮಕಗೊಂಡಿದ್ದಾರೆ. ನೂತನ ಸಿಇಒ ಆಗಿ ಭಾರತೀಯ ಪರಾಗ್ ಅಗರ್ವಾಲ್(Parag Agrawal) ಆಯ್ಕೆ ಆಗಿದ್ದಾರೆ. ಮುಂಬೈ(Mumbai)ನ ಐಐಟಿ(IIT)ಯಲ್ಲಿ ವ್ಯಾಸಂಗ ಪರಾಗ್ ಮಾಡಿದ್ದರು. ಪರಾಗ್, ಪ್ರಸ್ತುತ ಟ್ವಿಟರ್ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಆಗಿದ್ದಾರೆ. ಈ ವಿಚಾರ ಭಾರತೀಯರಲ್ಲಿ ಸಂತಸ ಮೂಡಿಸಿದೆ. ಸಾಮಾಜಿಕ ಜಾಲತಾಣದ ದೈತ್ಯ ಎಂದೇ ಕರೆಸಿಕೊಳ್ಳುವ ಟ್ವಿಟರ್ಗೆ ನಮ್ಮ ಭಾರತೀಯ ಮೂಲದವರು ಸಿಇಒ ಆಗಿರುವುದು ಹೆಮ್ಮೆಯ ವಿಚಾರ ಅಂತಿದ್ದಾರೆ ನೆಟ್ಟಿಗರು..
ಟ್ವೀಟ್ ಮಾಡಿ ವಿಷಯ ತಿಳಿಸಿದ ಜಾಕ್!
ಜಾಕ್ ಡೋರ್ಸೆ ಸ್ಕ್ವೇರ್ ಐಎನ್ಸಿ ಕಡೆಗೆ ಅಧಿಕ ಗಮನ ನೀಡುತ್ತಿದ್ದಾರೆ, ಟ್ವಿಟರ್ ಕಡೆಗೆ ಗಮನಹರಿಸುತ್ತಿಲ್ಲ ಎಂದು ಟ್ವಿಟರ್ನ ಪಾಲುದಾರ ಸಂಸ್ಥೆ ಎಲಿಯಟ್ ಮ್ಯಾನೇಜ್ಮೆಂಟ್ ಕಾರ್ಪ್ ಈ ಮೊದಲು ಆರೋಪ ಮಾಡಿತ್ತು. ಅಷ್ಟೇ ಅಲ್ಲದೆ, ಡೋರ್ಸೆ ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದು 2020ರ ಆರಂಭದಲ್ಲಿ ಒತ್ತಾಯಿಸಿತ್ತು. ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ ನೀಡಿರುವ ಬಗ್ಗೆ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಟ್ವೀಟ್ನಲ್ಲಿ ಲಗತ್ತಿಸಿದ್ದಾರೆ. ಇದನ್ನು ಯಾರಾದರೂ ಕೇಳಿಸಿಕೊಂಡಿರಾ ಎಂದು ಖಚಿತವಿಲ್ಲ. ಆದರೆ, ನಾನು ಟ್ವಿಟರ್ಗೆ ರಾಜೀನಾಮೆ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
2020ರಲ್ಲೇ ಜಾಕ್ ರಾಜೀನಾಮೆಗೆ ಒತ್ತಾಯ!
ಕಳೆದ 16 ವರ್ಷಗಳಿಂದ ಟ್ವಿಟರ್ನಲ್ಲಿ ಜಾಕ್ ಡಾರ್ಸೆ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಸ್ಕ್ವೇರ್ ಐಎನ್ಸಿ ಕಡೆಗೆ ಅಧಿಕ ಗಮನ ನೀಡುತ್ತಿದ್ದರು. ಟ್ವಿಟರ್ ಕಡೆಗೆ ಗಮನಹರಿಸುತ್ತಿಲ್ಲ ಎಂದು ಟ್ವಿಟರ್ನ ಪಾಲುದಾರ ಸಂಸ್ಥೆ ಎಲಿಯಟ್ ಮ್ಯಾನೇಜ್ಮೆಂಟ್ ಕಾರ್ಪ್ ಈ ಮೊದಲು ಆರೋಪ ಮಾಡಿತ್ತು. ಅಲ್ಲದೆ, ಡೋರ್ಸೆ ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದು 2020ರ ಆರಂಭದಲ್ಲಿ ಒತ್ತಾಯಿಸಿತ್ತು. ''ಸಂಸ್ಥೆಯು ಸಂಸ್ಥಾಪಕರ ಹೊರತಾಗಿಯೂ ಮುಂದುವರಿಯುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ನಾನು ಟ್ವಿಟರ್ ತೊರೆಯಲು ನಿರ್ಧರಿಸಿದ್ದೇನೆ. ಪರಾಗ್ ಅಗರ್ವಾಲ್ ಅವರು ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂಬ ವಿಶ್ವಾಸವಿದೆ,'' ಎಂದು ಜಾಕ್ ಡಾರ್ಸಿ ತಿಳಿಸಿದ್ದಾರೆ.
ಇದನ್ನು ಓದಿ : ಅಶಿಸ್ತಿನ ವರ್ತನೆ ತೋರಿದ್ದ 12 Rajya Sabha Members Suspended; ನಾಳೆ ಕ್ಷಮೆಯಾಚನೆ ಸಾಧ್ಯತೆ
ಯಾರು ಈ ಪರಾಗ್ ಅಗರ್ವಾಲ್?
ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರು 2017ರಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಅವರಿಗೆ ಸಿಇಒ ಸ್ಥಾನ ನೀಡಲಾಗಿದ್ದು, ನಿರ್ದೇಶಕರ ಮಂಡಳಿಯ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ. ಪರಾಗ್ ಅಗರವಾಲ್ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬಿ ಟೆಕ್ ಅಧ್ಯಯನ ಮಾಡಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. ಪರಾಗ್ ಅಗರ್ವಾಲ್ ಅವರು ಟ್ವಿಟ್ಟರ್‌ಗೆ ಸೇರುವ ಮೊದಲು ಮೈಕ್ರೋಸಾಫ್ಟ್, ಯಾಹೂ ಮತ್ತು AT&T ಲ್ಯಾಬ್ಸ್ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ವರದಿಗಳ ಪ್ರಕಾರ ಪರಾಗ್ $1.52 ಮಿಲಿಯನ್ ಸಂಪತ್ತು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : Omicron ಆತಂಕದ ನಡುವೆ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ನಿಯಮಗಳು
ಜಾಕ್ ಡಾರ್ಸಿಗ್ ಪರಾಗ್ ಅಗರ್ವಾಲ್ ಸಂದೇಶ!
‘ನಾನು ಈ ಜವಾಬ್ದಾರಿಯುತ ಸ್ಥಾನ ಅಲಂಕರಿಸಲು ವಿನಮ್ರನಾಗಿದ್ದೇನೆ. ಮತ್ತು ನಿಮ್ಮ ಮಾರ್ಗದರ್ಶನ ಮತ್ತು ನಿಮ್ಮ ಸ್ನೇಹಕ್ಕಾಗಿ ಕೃತಜ್ಞನಾಗಿದ್ದೇನೆ. ನೀವು ಕಟ್ಟಿ ಬೆಳೆಸಿರುವ ಈ ಸೇವೆ, ಸಂಸ್ಕೃತಿ ಮತ್ತು ಕಂಪನಿಯನ್ನು ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ‘. ಎಂದು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕಂಪನಿ ಟ್ವಿಟ್ಟರ್‌ನt ಹೊಣೆ ಹೊತ್ತ ನಂತರ ಪರಾಗ್ ಅವರು ಜಾಕ್ ಡಾರ್ಸಿಗೆ ಬರೆದ ಸಂದೇಶದಲ್ಲಿ ತಿಳಿಸಿದ್ದಾರೆ. ಇಲ್ಲಿಂದ ನಿಮ್ಮ ಕೆಲಸವನ್ನು ನಾನು ಮಾಡುತ್ತೇನೆ. ಈ ಪ್ರಪಂಚ ನಮ್ಮನ್ನು ಪ್ರತಿದಿನ ನೋಡುತ್ತೆ ಅಂತ ಪರಾಗ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ