ಕಾಶ್ಮೀರದಲ್ಲಿ ಸೋಮವಾರದಿಂದ ಶಾಲೆ, ಕಾಲೇಜು; ಇಂದಿನಿಂದ ಸರ್ಕಾರಿ ಕಚೇರಿಗಳು ಪುನರಾರಂಭ

ಮಾಜಿ ಮುಖ್ಯಮಂತ್ರಿಗಳಾಗಿರುವ ಒಮರ್​ ಅಬ್ದುಲ್ಲಾ ಹಾಗೂ ಮೆಹಬೂಬ್​ ಮುಫ್ತಿ ಬಂಧಿಸಿರುವ ಕ್ರಮ ಪ್ರಶ್ನಿಸಿ ಮುಫ್ತಿ ಮಗಳು ಇತಿಜಾ ಜಾವೀದ್​ ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಪತ್ರ ಬರೆದಿದ್ದಾರೆ.

Seema.R | news18-kannada
Updated:August 16, 2019, 3:16 PM IST
ಕಾಶ್ಮೀರದಲ್ಲಿ ಸೋಮವಾರದಿಂದ ಶಾಲೆ, ಕಾಲೇಜು; ಇಂದಿನಿಂದ ಸರ್ಕಾರಿ ಕಚೇರಿಗಳು ಪುನರಾರಂಭ
ಕಾಶ್ಮೀರದ ಚಿತ್ರಣ
  • Share this:
ನವದೆಹಲಿ (ಆ.16): ಕಾಶ್ಮೀರದ ವಾಸ್ತವ ಸ್ಥಿತಿ ಕುರಿತು ಪ್ರತಿನಿತ್ಯ ವೀಕ್ಷಣೆ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್​ ಇಲ್ಲಿನ ರಕ್ಷಣಾ ಸಂಸ್ಥೆಗಳ ಬಗ್ಗೆ ನಂಬಿಕೆಯನ್ನು ಹೊಂದಬೇಕು. ಇಲ್ಲಿನ ಪರಿಸ್ಥಿತಿಯನ್ನು ಹಂತಹಂತವಾಗಿ ಸುಧಾರಿಸಲಾಗುವುದು. ಕಾಶ್ಮೀರದ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಮುಂದಿನ ಕೆಲವು ದಿನಗಳ ಬಳಿಕ ಸಂಪೂರ್ಣವಾಗಿ ತೆಗೆದುಹಾಕಲಾಗುವುದು ಎಂದು ಇಲ್ಲಿನ ಸ್ಥಳೀಯ ಆಡಳಿತ ಸುಪ್ರೀಂಕೋರ್ಟ್​ಗೆ ತಿಳಿಸಿದೆ.

ಕಳೆದ 10 ದಿನಗಳಿಂದ ರಾಜ್ಯದಲ್ಲಿ ಹೇರಿರುವ ನಿರ್ಬಂಧವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್​ ವಿಚಾರಣೆ ನಡೆಸಿತು.

ಕಾಶ್ಮೀರದ ಸ್ಥಳೀಯ ಆಡಳಿತ ಇಲ್ಲಿನ ಪರಿಸ್ಥಿತಿ ಅವಲೋಕಿಸಿದ್ದು, ಸೋಮವಾರದಿಂದ ಇಲ್ಲಿನ ಶಾಲಾ-ಕಾಲೇಜುಗಳನ್ನು ಪುನರಾರಂಭಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ.Loading...

ಇನ್ನು ಈ ಕುರಿತು ಮಾತನಾಡಿರುವ ರಾಜ್ಯಪಾಲ ಸತ್ಯಪಾಲ್​ ಸಿಂಗ್​ ಇಂದಿನಿಂದಲೇ ಸರ್ಕಾರಿ ಕಚೇರಿಗಳು ಕೆಲಸ ಆರಂಭಿಸಲಿದ್ದು, ಸೋಮವಾರದಿಂದ ಶಾಲಾ-ಕಾಲೇಜುಗಳು ಆರಂಭಗೊಳ್ಳಲಿದೆ ಎಂದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಮಾನ್ಯತೆಯ ಕಲಂ 370ನ್ನು ರದ್ದು ಮಾಡಿದ ಬಳಿದ ಬಳಿಕ ರಾಜ್ಯದಲ್ಲಿ ನಿರ್ಬಂಧ ವಿಧಿಸಲಾಗಿದೆ.

ಕಾಶ್ಮೀರದಲ್ಲಿ ಹೇರಿರುವ ನಿರ್ಬಂಧ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ಎಂಎಲ್​ ಶರ್ಮಾ ಮತ್ತು ಕಾಶ್ಮೀರ ಟೈಮ್ಸ್​ ಸಂಪಾದಕ ಅನುರಾಧ ಭಾಸಿನ್​ ಅರ್ಜಿಯನ್ನು ಇದೇ ವೇಳೆ ಸುಪ್ರೀಂ ಕೋರ್ಟ್​ ಮುಂದೂಡಿದೆ.

ಅಮಿತ್​ ಷಾಗೆ ಪತ್ರ ಬರೆದ ಮುಫ್ತಿ ಮಗಳು

ಜಮ್ಮು ಕಾಶ್ಮೀರದ ವಿಶೇಷ ಮಾನ್ಯತೆ ಕಲಂ 370 ರದ್ದು ಮಾಡಿದ ಹಿನ್ನೆಲೆ ಕಾಶ್ಮೀರಿಗರನ್ನು ಸಂಘಟಿಸಿ ಹೋರಾಟಕ್ಕೆ ಮುಂದಾಗಬಹುದು ಎಂಬ ಮುನ್ನೆಚ್ಚರಿಕೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿರುವ ಒಮರ್​ ಅಬ್ದುಲ್ಲಾ ಹಾಗೂ ಮೆಹಬೂಬ್​ ಮುಫ್ತಿ ಬಂಧಿಸಿರುವ ಕ್ರಮ ಪ್ರಶ್ನಿಸಿ ಮುಫ್ತಿ ಮಗಳು ಇತಿಜಾ ಜಾವೀದ್​ ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಪತ್ರ ಬರೆದಿದ್ದಾರೆ.

ಇದನ್ನು ಓದಿ: ರಾಜ್ಯದ ನೆರೆ ಪ್ರವಾಹ ಪರಿಹಾರಕ್ಕೆ ಪ್ರಧಾನಿಗೆ ಮನವಿ ಸಲ್ಲಿಸಿದ ಸಿಎಂ ಬಿಎಸ್​ ಯಡಿಯೂರಪ್ಪ

ಕಣಿವೆ ರಾಜ್ಯದಲ್ಲಿ ವಾಸಿಸುತ್ತಿರುವವರನ್ನು ಪ್ರಾಣಿಗಳಂತೆ ಬಂಧನದಲ್ಲಿ ಇಡಲಾಗಿದೆ. ಅಲ್ಲದೇ ಅವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...