HOME » NEWS » National-international » IVANKA TRUMP TO JOIN DAD DONALD TRUMP IN INDIA SAYS SOURCE RH

Trump India Tour: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಯೊಂದಿಗೆ ಭಾರತಕ್ಕೆ ಬರಲಿದ್ದಾರೆ ಮಗಳು ಇವಾಂಕ, ಅಳಿಯ ಕುಶ್ನೆರ್

ಗುಜರಾತ್ ರಾಜಧಾನಿ ಅಹಮದಾಬಾದ್​ನಲ್ಲಿ ಟ್ರಂಪ್​ ಹಾಗೂ ಅವರ ಕುಟುಂಬಕ್ಕೆ ಸ್ವಾಗತ ಕೋರಿ ಬೃಹತ್ ಪೋಸ್ಟರ್​ಗಳನ್ನು ಹಾಕಲಾಗಿದೆ. ಇಡೀ ನಗರವನ್ನು ನವಮಧುವಣಗಿತ್ತಿಯಂತೆ ಸಿಂಗರಿಸಲಾಗಿದೆ.

HR Ramesh | news18-kannada
Updated:February 21, 2020, 7:28 PM IST
Trump India Tour: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಯೊಂದಿಗೆ ಭಾರತಕ್ಕೆ ಬರಲಿದ್ದಾರೆ ಮಗಳು ಇವಾಂಕ, ಅಳಿಯ ಕುಶ್ನೆರ್
ಇವಾಂಕ ಟ್ರಂಪ್ ಮತ್ತು ಅವರ ಗಂಡ ಕುಶ್ನೆರ್.
  • Share this:
ನವದೆಹಲಿ: ಇದೇ ತಿಂಗಳ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಬಂದಿಳಿಯಲಿದ್ದಾರೆ. ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಟ್ರಂಪ್ ಅವರು ಭಾರತಕ್ಕೆ ಬರುತ್ತಿದ್ದು, ಎರಡು ದಿನಗಳ ಕಾಲ ಇರಲಿದ್ದಾರೆ. ಈ ಭೇಟಿಯ ವಿಶೇಷ ಏನೆಂದರೆ ಟ್ರಂಪ್ ಅವರೊಂದಿಗೆ ಅವರ ಹೆಂಡತಿ ಮೆಲಾನಿಯಾ ಟ್ರಂಪ್, ಮಗಳು ಇವಾಂಕ ಟ್ರಂಪ್ ಹಾಗೂ ಅಳಿಯ ಜೆರಾಲ್ಡ್ ಕುಶ್ನೆರ್​ ಕೂಡ ಬರಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಮೊದಲು ಟ್ರಂಪ್ ಅವರೊಂದಿಗೆ ಅವರ ಹೆಂಡತಿ ಮಾತ್ರ ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ದಂಪತಿಯೊಂದಿಗೆ ಮಗಳು ಮತ್ತು ಅಳಿಯ ಬರುತ್ತಿರುವುದು ವಿಶೇಷ.

ಭಾರತ ಭೇಟಿ ಬಗ್ಗೆ ಈಗಾಗಲೇ ಹೇಳಿಕೆ ಬಿಡುಗಡೆ ಮಾಡಿರುವ ಟ್ರಂಪ್, ನಾನು ಪ್ರಧಾನಿ ಮೋದಿ ಅವರನ್ನು ತುಂಬಾ ಇಷ್ಟಪಡುತ್ತೇನೆ. ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯಲಿರುವ ವಿಶ್ವದ ಅತೀ ದೊಡ್ಡ ಕ್ರೀಡಾಂಗಣಕ್ಕೆ ಸಾಗುವ ರಸ್ತೆಯುದ್ದಕ್ಕೂ 70 ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಈ ಕ್ಷಣ ನಿಜಕ್ಕೂ ರೋಮಾಂಚನಕಾರಿ ಎಂದು ಟ್ವೀಟ್ ಮಾಡಿದ್ದರು.

ಗುಜರಾತ್ ರಾಜಧಾನಿ ಅಹಮದಾಬಾದ್​ನಲ್ಲಿ ಟ್ರಂಪ್​ ಹಾಗೂ ಅವರ ಕುಟುಂಬಕ್ಕೆ ಸ್ವಾಗತ ಕೋರಿ ಬೃಹತ್ ಪೋಸ್ಟರ್​ಗಳನ್ನು ಹಾಕಲಾಗಿದೆ. ಇಡೀ ನಗರವನ್ನು ನವಮಧುವಣಗಿತ್ತಿಯಂತೆ ಸಿಂಗರಿಸಲಾಗಿದೆ.

ಇದನ್ನು ಓದಿ: Trump India Tour: ಅಮೆರಿಕ ಅಧ್ಯಕ್ಷರು ಬರುವ ಮುನ್ನ ಅಹಮದಾಬಾದ್​ಗೆ ಬರಲಿದೆ ದಿ ಬೀಸ್ಟ್ ಕಾರು; ಇದರ ವಿಶೇಷತೆಗಳೇನು ಗೊತ್ತಾ?

ಭಾರತಕ್ಕೆ ಇವಾಂಕ ಬರುತ್ತಿರುವುದು ಇದೇ ಮೊದಲಲ್ಲ!

ಟ್ರಂಪ್ ಅವರೊಂದಿಗೆ ಸೋಮವಾರ ಭಾರತಕ್ಕೆ ಬರುತ್ತಿರುವ ಇವಾಂಕ ಟ್ರಂಪ್ ಅವರಿಗೆ ಭಾರತ ಭೇಟಿ ಹೊಸದಲ್ಲ. ಈ ಮೊದಲು 2017ರಲ್ಲಿ ಹೈದರಾಬಾದ್​ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಇವಾಂಕ ಟ್ರಂಪ್ ಅವರು ಭಾರತಕ್ಕೆ ಬಂದಿದ್ದರು. ಅದಾದ ಮರುವರ್ಷ ನಡೆದ ಆತ್ಮೀಯರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಗಂಡ ಕುಶ್ನೆರ್ ಅವರೊಂದಿಗೆ ಜೈಪುರಗೆ ಬಂದಿದ್ದರು.
First published: February 21, 2020, 7:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories