ಇದೇ ಕೊನೇ ಅವಕಾಶ, ಸುಸ್ತಿದಾರರ ವಿವರ ಬಹಿರಂಗಗೊಳಿಸಿ; ಆರ್​ಬಿಐಗೆ ಸುಪ್ರೀಂಕೋರ್ಟ್​ ಖಡಕ್ ಸೂಚನೆ

ಆರ್​ಟಿಐ ಅಡಿ ಈ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್​ ಈ ಹಿಮದೆಯೇ ಆರ್​ಬಿಐಗೆ ಸೂಚನೆ ನೀಡಿತ್ತು. ಆದರೆ, ಆರ್​ಬಿಐ ಅದನ್ನು ಇಲ್ಲಿಯವರೆಗೆ ಪಾಲಿಸಿರಲಿಲ್ಲ. ಆದ್ದರಿಂದ ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಆರ್​ಬಿಐಗೆ ಇದೇ ಕೊನೇ ಅವಕಾಶ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

HR Ramesh | news18
Updated:April 26, 2019, 2:54 PM IST
ಇದೇ ಕೊನೇ ಅವಕಾಶ, ಸುಸ್ತಿದಾರರ ವಿವರ ಬಹಿರಂಗಗೊಳಿಸಿ; ಆರ್​ಬಿಐಗೆ ಸುಪ್ರೀಂಕೋರ್ಟ್​ ಖಡಕ್ ಸೂಚನೆ
ಆರ್​ಬಿಐ
  • News18
  • Last Updated: April 26, 2019, 2:54 PM IST
  • Share this:
ನವದೆಹಲಿ: ಸುಸ್ತಿದಾರರ ವಿವರ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಬ್ಯಾಂಕುಗಳ ತಪಾಸಣಾ ವರದಿಗಳನ್ನು ಬಹಿರಂಗಪಡಿಸಿ, ಇದೇ ನಿಮಗೆ ಕೊನೇ ಅವಕಾಶ ಎಂದು ಶುಕ್ರವಾರ ಸುಪ್ರೀಂಕೋರ್ಟ್​ ಆರ್​ಬಿಐಗೆ ಆದೇಶಿಸಿದೆ. ನ್ಯಾ.ನಾಗೇಶ್ವರ ರಾವ್ ಮತ್ತು ಎಂಆರ್ ಶಾ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ.

ಆರ್​ಟಿಐ ಕಾಯ್ದೆ ಪ್ರಕಾರ ಸುಸ್ತಿದಾರರ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಕೇಳಿಕೊಂಡಾಗ ಆರ್​ಬಿಐ ಮತ್ತು ಆರ್​ಬಿಐ ಮಾಜಿ ಗವರ್ನರ್ ಊರ್ಜಿತ್ ಪಟೇಲ್​ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರ್​ಟಿಐ ಕಾರ್ಯಕರ್ತ ಸಭಾಶ್​ ಚಂದ್ರ ಅಗರವಾಲ್​ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಏಪ್ರಿಲ್ 2011ರಿಂದ ಡಿಸೆಂಬರ್ 2015ರವರೆಗೆ ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್​ ಬ್ಯಾಂಕ್, ಎಚ್​ಡಿಎಫ್​ಸಿ ಮತ್ತು ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ತಪಾಸಣಾ ವರದಿಗಳ ಪ್ರತಿಯನ್ನು ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಅಗರವಾಲ್ 2015ರ ಡಿಸೆಂಬರ್​ನಲ್ಲಿ ಆರ್​ಟಿಐ ಮೂಲಕ ಮಾಹಿತಿಗಾಗಿ ಮನವಿ ಸಲ್ಲಿಸಿದ್ದರು. ಅಗರವಾಲ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಪಾರದರ್ಶಕತೆಯ ವಿಚಾರದಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದಿದೆ.

ಇದನ್ನು ಓದಿ: ಮೋದಿ ಬಯೋಪಿಕ್​ಗೆ ಮತ್ತೆ ಹಿನ್ನಡೆ; ಬಿಡುಗಡೆ ವಿಚಾರದಲ್ಲಿ ನಾವು ತಲೆ ಹಾಕುವುದಿಲ್ಲ ಎಂದ ಸುಪ್ರೀಂ

ಆರ್​ಟಿಐ ಅಡಿ ಈ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್​ ಈ ಹಿಮದೆಯೇ ಆರ್​ಬಿಐಗೆ ಸೂಚನೆ ನೀಡಿತ್ತು. ಆದರೆ, ಆರ್​ಬಿಐ ಅದನ್ನು ಇಲ್ಲಿಯವರೆಗೆ ಪಾಲಿಸಿರಲಿಲ್ಲ. ಆದ್ದರಿಂದ ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಆರ್​ಬಿಐಗೆ ಇದೇ ಕೊನೇ ಅವಕಾಶ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಹಿಂದೆ ದೇಶದ ಸಹಕಾರಿ ಬ್ಯಾಂಕ್​ಗಳ ಲೆಕ್ಕ ತಪಾಸಣಾ ವರದಿಯ ವಿವರವನ್ನು ಸಾರ್ವಜನಿಕರಿಗೆ ಬಹಿರಂಗಗೊಳಿಸುವಂತೆ ಕೇಂದ್ರ ಮಾಹಿತಿ ಆಯೋಗವು ಆರ್​ಬಿಐಗೆ ನಿರ್ದೇಶನ ನೀಡಿತ್ತು.

First published:April 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ