ತಮ್ಮ ಹೆತ್ತವರನ್ನು ಹೆಮ್ಮೆಪಡಿಸುವುದು ಪ್ರತಿ ಮಕ್ಕಳ ಕನಸಾಗಿರುತ್ತದೆ. ಆದರೆ ಕೆಲವರು ಮಾತ್ರ ಸಾಧನೆ ಮಾಡಿ ಹೆತ್ತವರಿಗೆ ಸಮಾಜದಲ್ಲಿ ಗೌರವನ್ನು ಹೆಚ್ಚಿಸುತ್ತಾರೆ. ಈ ಗುಂಪಿಗೆ ದೀಕ್ಷಾ ಕುಮಾರ್ ಸೇರಿಕೊಳ್ಳುತ್ತಾರೆ. ಅವರು ಇತ್ತೀಚೆಗೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸೈನ್ಯಕ್ಕೆ ಸಹಾಯಕ ಕಮಾಂಡೆಂಟ್ ಆಗಿ ಸೇರಿಕೊಂಡಿದ್ದಾರೆ. ಅವರು ಹೆತ್ತವರು ಹೆಮ್ಮೆಪಡುವಂತ ಸಾಧನೆಯನ್ನು ಮಾಡಿದ್ದಾರೆ.ಒಬ್ಬ ತಂದೆಗೆ ತನ್ನ ಮಕ್ಕಳ ಸಾಧಿನೆಯ ಕೆಲಸವನ್ನು ಕಣ್ಣು ತುಂಬ ನೋಡುವುದೇ ಹೆಮ್ಮೆಯ ಕ್ಷಣ. ಮಸ್ಸೂರಿಯಲ್ಲಿ ಐಟಿಬಿಪಿ ಅಕಾಡೆಮಿಯಿಂದ ನಡೆದ ಪದವಿ ಮೆರವಣಿಗೆ ಮತ್ತು ಪ್ರಮಾಣೀಕರಣ ಸಮಾರಂಭದ ನಂತರ, ದೀಕ್ಷಾ ಕುಮಾರ್ಗೆ ಅವರ ತಂದೆಯಾದ ಕಮಲೇಶ್ ನಿಂತು ಸಂತೋಷದಿಂದ ಸೆಲ್ಯೂಟ್ ಮಾಡುತ್ತಿರುವ ಫೋಟೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿವೆ.
"ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸೈನ್ಯಕ್ಕೆ ಸಹಾಯಕ ಕಮಾಂಡೆಂಟ್ ಆಗಿ ಸೇರಿಕೊಂಡ ಮಗಳಿಗೆ ಹೆಮ್ಮೆಯಿಂದ ಸೆಲ್ಯೂಟ್ ಮಾಡುತ್ತಿರುವ ತಂದೆ" ಎಂಬ ಶೀರ್ಷಿಕೆಯೊಂದಿಗೆ ಐಟಿಬಿಪಿಯ ಅಧಿಕೃತ ಟ್ವಿಟ್ಟರ್ ಖಾತೆಯು ತಂದೆ ಮಗಳ ಹೆಮ್ಮೆಯ ಚಿತ್ರಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದು. ಬಹಳಷ್ಟು ಜನರು ತಂದೆ ಮತ್ತು ಮಗಳು ಇಬ್ಬರಿಗೂ ಅಭಿನಂದನೆಗಳನ್ನು ಹೇಳಿರುವುದನ್ನು ನೀವು ಐಟಿಬಿಪಿ ಟ್ವಿಟ್ಟರ್ ಖಾತೆಯಲ್ಲಿ ನೋಡಬಹುದು.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ದೀಕ್ಷಾ ಕುಮಾರ್: "ನನ್ನ ತಂದೆ ನನಗೆ ಆದರ್ಶ, ಮತ್ತು ಅವರು ಯಾವಾಗಲೂ ನನಗೆ ಸ್ಫೂರ್ತಿ ನೀಡುತ್ತಾರೆ" ಎಂದು ಹೇಳಿದರು. ದೀಕ್ಷಾ ಕುಮಾರ್ ಜೊತೆ ಐಟಿಬಿಪಿಗೆ ಸೇರಿದ ಮತ್ತೊಬ್ಬ ಮಹಿಳೆ ಪ್ರಕೃತಿ ಸಹ ಸಹಾಯಕ ಕಮಾಂಡರ್ ಆಗಿ ಸೇವೆ ಸಲ್ಲಿಸಲಿದ್ದಾರೆ.
ಇಬ್ಬರು ಮಹಿಳೆಯರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಹಾಯಕ ಕಮಾಂಡರ್ಗಳಾಗಿ ಸೇರಿಕೊಂಡಿರುವುದು ಇದೇ ಮೊದಲು. ಈ ಸಮಾರಂಭದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಹಾಜರಿದ್ದರು.
Diksha joined ITBP as Assistant Commandant. His father Insp/CM Kamlesh Kumar of ITBP salutes her after the Passing Out Parade and attestation ceremony at ITBP Academy, Mussoorie today. #Himveers pic.twitter.com/v8e1GkQJYH
— ITBP (@ITBP_official) August 8, 2021
"ನೀವು ಐಟಿಬಿಪಿ ಮತ್ತು ಚೀನಾದ ಗಡಿಗಳಲ್ಲಿ ನಿಯೋಜಿಸಲಾಗಿರುವ ಐಟಿಬಿಪಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದಿರುವುದು ನಿಮ್ಮ ಅದೃಷ್ಟ" ಎಂದು ಪುಷ್ಕರ್ ಸಿಂಗ್ ಧಾಮಿ ಎಎನ್ಐಗೆ ಹೇಳಿದ್ದಾರೆ.
ಟ್ವಿಟ್ಟರ್ನಲ್ಲಿ ವೈರಲ್ ಆದ ಚಿತ್ರಗಳಿಗೆ ಪ್ರತಿಕ್ರಿಯಿಸಿದ ನೆಟ್ಟಿಗರು ದೀಕ್ಷಾ ಕುಮಾರ್ಗೆ ಅಭಿನಂದಿಸಿದರು ಮತ್ತು "ಲವ್ಲಿ ಮೂಮೆಂಟ್ಸ್", "ವಾಟ್ ಎ ಬ್ಯೂಟಿಫುಲ್ ಸ್ಟೋರಿ," ಇದು ತಂದೆ ಮತ್ತು ಮಗಳಿಗೆ ಅತ್ಯುತ್ತಮ ಕ್ಷಣ ಎಂದು ಕಮೆಂಟ್ ಮಾಡಿದ್ದಾರೆ.
ದೀಕ್ಷಾ ಕುಮಾರ್ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಜೀವನದಲ್ಲಿ ಯಶಸ್ಸನ್ನು ಪಡೆಯಲು ನಾವು ಆಕೆಯ ದಾರಿಯನ್ನು ಅನುಸರಿಸಬೇಕು ಹಾಗೂ ನಮ್ಮ ಹೆತ್ತವರು ಹೆಮ್ಮೆ ಪಡುವಂತಹ ಸಾಧನೆಯ ಗುರಿಯನ್ನು ಹೊಂದಬೇಕು ಹಾಗೂ ಆ ಗುರಿಯತ್ತ ಶ್ರಮಿಸಬೇಕು. ನೀವು ಕೂಡ ಐಟಿಬಿಪಿ ಟ್ವೀಟರ್ ಖಾತೆಗೆ ಭೇಟಿ ನೀಡಿ ತಂದೆ ಮಗಳ ಅತ್ಯುತ್ತಮ ಕ್ಷಣವನ್ನು ನೋಡಿ ಕಣ್ಣ ತುಂಬಿಕೊಳ್ಳಿ. ನಿಮ್ಮ ಮಕ್ಕಳಿಗೆ ಫೋಟೋಗಳನ್ನು ತೋರಿಸಿ ಅವರನ್ನು ಪ್ರೇರೇಪಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ