ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ, ಬಳಿಕ ತನ್ನನ್ನೇ ಗುಂಡಿಟ್ಟು ಹತ್ಯೆ ಮಾಡಿಕೊಂಡ ಐಟಿಬಿಪಿ ಯೋಧ

ಪ್ರಾಥಮಿಕ ಮಾಹಿತಿ ಪ್ರಕಾರ ಐಟಿಬಿಪಿ ಯೋಧ ತಮ್ಮ ಸಹೋದ್ಯೋಗಿ ಮೇಲೆ ಸರ್ವಿಸ್​ ಗನ್​ನಿಂದ ದಾಳಿ ನಡೆಸಿದ್ದಾರೆ. ಮೊದಲು ನಾಲ್ವರನ್ನು ಕೊಂದಿದ್ದು, ಮೂವರನ್ನು ಗಾಯಗೊಳಿಸಿದ್ದಾರೆ. ಬಳಿಕ ಅದೇ ಗುಂಡಿನಿಂದ ತಮ್ಮಗೆ ಗುಂಡಿಟ್ಟುಕೊಂಡು ಹತ್ಯೆ ಮಾಡಿಕೊಂಡಿದ್ದಾರೆ.

Seema.R | news18-kannada
Updated:December 4, 2019, 1:05 PM IST
ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ, ಬಳಿಕ ತನ್ನನ್ನೇ ಗುಂಡಿಟ್ಟು ಹತ್ಯೆ ಮಾಡಿಕೊಂಡ ಐಟಿಬಿಪಿ ಯೋಧ
ಸಾಂದರ್ಭಿಕ ಚಿತ್ರ
  • Share this:
ರಾಯ್​ಪುರ (ಡಿ.04): ಇಂಡೋ- ಟಿಬೆಟಿಯನ್​ ಗಡಿ ಪೊಲೀಸ್​ ಯೋಧರೊಬ್ಬರು ತಮ್ಮ ಸಹೊದ್ಯೋಗಿಗಳ ಮೇಲೆ ನಡೆಸಿದ ಗುಂಡಿನ ದಾಳಿಯಿಂದಾಗಿ ಐವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಛತ್ತೀಸ್​ಗಢದ ನಾರಾಯಣಪುರಜಿಲ್ಲೆಯ ಕೆದೆನಾರ್​ ಕ್ಯಾಂಪ್​ನ 45ನೇ ಬೆಟಲಿಯನ್​ ಅಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಐಟಿಬಿಪಿ ಯೋಧ ತಮ್ಮ ಸಹೋದ್ಯೋಗಿ ಮೇಲೆ ಸರ್ವಿಸ್​ ಗನ್​ನಿಂದ ದಾಳಿ ನಡೆಸಿದ್ದಾರೆ. ಮೊದಲು ನಾಲ್ವರನ್ನು ಕೊಂದಿದ್ದು, ಮೂವರನ್ನು ಗಾಯಗೊಳಿಸಿದ್ದಾರೆ. ಬಳಿಕ ಅದೇ ಗುಂಡಿನಿಂದ ತಮ್ಮಗೆ ಗುಂಡಿಟ್ಟುಕೊಂಡು ಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ಜಮ್ಮುವಿನ ಪೂಚ್​ನಲ್ಲಿ ಪಾಕ್​ನಿಂದ ಅಪ್ರಚೋದಿತ ದಾಳಿ; ಇಬ್ಬರು ನಾಗರಿಕರ ಸಾವು

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ನಾರಾಯಣಪುರ ಎಸ್​ಪಿ ಭೇಟಿ ನೀಡಿದ್ದಾರೆ.
First published: December 4, 2019, 12:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading