ದುರಾದೃಷ್ಟ ಅನ್ನೋದು ಒಮ್ಮೆ ಬರೋಕೆ ಶುರು ಮಾಡಿದ್ರೆ ಹೇಗೆಲ್ಲಾ ಹುಡುಕಿ ಹುಡುಕಿಕೊಂಡು ಬರುತ್ತೆ ಅನ್ನೋದಕ್ಕೆ ತಾಜಾ ಉದಾಹರಣೆಯೊಂದು ವರದಿಯಾಗಿದೆ. ಇಟಲಿಯ ವ್ಯಕ್ತಿಯೋರ್ವನಿಗೆ ಒಂದೇ ಸಲಕ್ಕೆ ಮಂಕಿಪಾಕ್ಸ್ (Monkeypox) ಹೆಚ್ಐವಿ (HIV) ಮತ್ತು ಕೊವಿಡ್ 19 (Covid-19) ತಗುಲಿಬಿಟ್ಟಿದೆ. ಇಟಲಿಯಲ್ಲಿರುವ ಅಮನ್ ಎಂಬಾತನಿಗೇ ಮಂಕಿಪಾಕ್ಸ್, ಎಚ್‌ಐವಿ ಮತ್ತು ಕೋವಿಡ್-19 ಒಂದೇ ಸಮಯದಲ್ಲಿ ಪಾಸಿಟಿವ್ ಬಂದಿರುವುದು. 36 ವರ್ಷದ ವಯಸ್ಸಿನ ಈ ವ್ಯಕ್ತಿಗೆ ಐದು ದಿನ ಸ್ಪೇನ್ ಪ್ರವಾಸ (Spain Trip) ಮಾಡಿದ್ದ. ಅಲ್ಲಿಂದ ಮರಳಿ ಮನೆಗೆ ಬಂದವನೇ ಜ್ವರ, ಕಂಟಲು ನೋವು ಎಂದು ಮಲಗಿಬಿಟ್ಟಿದ್ದ. ವೈದ್ಯರಿಗೆ ತೋರಿಸಿದಾಗ ಕೊರೊನಾ ಪರೀಕ್ಷೆ (Covid 19 Test) ಮಾಡಿಸಿದ. ಪರೀಕ್ಷೆಯಲ್ಲಿ ಪಾಸಿಟಿವ್ ಬಂತು.
ಸರಿ, ಕೊವಿಡ್ ಬಂತು ಅಂದುಕೊಂಡು ಎರಡೇ ದಿನಕ್ಕೆ ಎಡಗೈಯಲ್ಲಿ ದದ್ದು ಕಾಣಿಸಿಕೊಂಡಿತು. ಅಲ್ಲದೇ ದೇಹದ ಇತರ ಭಾಗಗಳಲ್ಲಿ ಗುಳ್ಳೆಗಳು ಏಳಲಾರಂಭಿಸಿದವು. ಆ ಗುಳ್ಳೆಗಳು ನೋಯುತ್ತಿದ್ದವು.
ಆಸ್ಪತ್ರೆಗೆ ದಾಖಲಾದಾಗಲೇ ಹೊರಬಿತ್ತು ಶಾಕಿಂಗ್ ಮಾಹಿತಿ
ಇದೇನಿದು ಎಂದು ಮತ್ತೆ ಇಟಲಿಯ ಕ್ಯಾಟಾನಿಯಾದ ಸ್ಯಾನ್ ಮಾರ್ಕೊ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ತುರ್ತು ವಿಭಾಗಕ್ಕೆ ವ್ಯಕ್ತಿ ದಾಖಲಾಗಿದ್ದಾನೆ. ಆಗಲೇ ಮಂಕಿಪಾಕ್ಸ್ ಮತ್ತು ಹೆಚ್ಐವಿ ಸೋಂಕು ಇದೆ ಎಂಬುದು ಸಹ ಪಕ್ಕಾ ಆಯಿತು.
ಒಂದೇ ಸಲ ಇಷ್ಟೆಲ್ಲ ಖಾಯಿಲೆ ಹೇಗೆ ಬಂತು?
ತಾನು ಸ್ಪೇನ್ ಪ್ರವಾಸದಲ್ಲಿ ಪುರುಷರೊಂದಿಗೆ ಅಸುರಕ್ಷಿತ ಲೈಂಗಿಕತೆಯನ್ನು ಹೊಂದಿದ್ದೆ ಎಂದು ಈ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ತಾನು ಈ ಹಿಂದೆ ಸೆಪ್ಟೆಂಬರ್ 2021 ರಲ್ಲಿ ಎಚ್‌ಐವಿ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದೆ. ಆಗ ಹೆಚ್ಐವಿ ನೆಗೆಟಿವ್ ಬಂದಿತ್ತು ಎಂದು ಈ ವ್ಯಕ್ತಿ ತಿಳಿಸಿದ್ದಾನೆ.
ಕೊವಿಡ್ 19 ಮತ್ತು ಮಂಕಿಪಾಕ್ಸ್ ಗುಣ
ಆಸ್ಪತ್ರೆಯಲ್ಲಿ ಒಂದು ವಾರದ ಚಿಕಿತ್ಸೆ ಪಡೆದುಕೊಂಡ ವ್ಯಕ್ತಿಯ ಆರೋಗ್ಯ ಸದ್ಯ ಸ್ಥಿರವಾಗಿದೆ. ಕೋವಿಡ್-19 ಮತ್ತು ಮಂಕಿಪಾಕ್ಸ್‌ನಿಂದ ಚೇತರಿಸಿಕೊಂಡ ನಂತರ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ ಹೆಚ್ಐವಿ ಸೋಂಕು ಮಾತ್ರ ಹಾಗೇ ಇದೆ.
ಇದೇ ಮೊದಲ ಉದಾಹರಣೆ
ಮಂಕುಪಾಕ್ಸ್ ಸೋಂಕು ಮತ್ತು ಕೊವಿಡ್ 19 ಎರಡೂ ಸಹ ಒಟ್ಟಿಗೆ ಬರಬಹುದು ಎಂಬ ಮಾತಿಗೆ ಇದು ಉತ್ತಮ ಉದಾಹರಣೆ ಎಂದು ಸಾಬೀತಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಮಂಕಿಪಾಕ್ಸ್, ಹೆಚ್ಐವಿ ಮತ್ತು ಕೊರೊನಾ ವೈರಸ್ ಒಂದೇ ವ್ಯಕ್ತಿಯಲ್ಲಿ ಒಟ್ಟಿಗೇ ಕಾಣಿಸಿಕೊಳ್ಳಬಹುದು ಎಂಬುದು ಸಾಬೀತಾಗಿದೆ.
ಇದನ್ನೂ ಓದಿ:Indian Army: ದಾಳಿ ನಡೆಸಿದ ಉಗ್ರನಿಗೇ ರಕ್ತದಾನ ಮಾಡಿದ ಭಾರತೀಯ ಸೈನಿಕರು!
ನಾಯಿಯಲ್ಲೂ ಮಂಕಿಪಾಕ್ಸ್ ಪತ್ತೆ
ಮಂಕಿಪಾಕ್ಸ್ ಭಯದ ಇಡೀ ಜಗತ್ತಿಗೇ ಕಾಡುತ್ತಿದೆ. ಕೊಂಚ ಕಡಿಮೆಯಾಯ್ತು ಅಂದುಕೊಳ್ಳುವಾಗಲೇ ಮತ್ತೆ ಹೊಸ ಪ್ರಕರಣಗಳು ದೃಢಪಟ್ಟು ಅತಂಕ ಹೆಚ್ಚಿಸುತ್ತಲೇ ಇದೆ. ಆದರೆ ಇದೀಗ ಇನ್ನೊಂದು ಆತಂಕದ ಸುದ್ದಿ ಹೊರಬಿದ್ದಿದೆ. ಮಂಕಿಪಾಕ್ಸ್ ವೈರಸ್ (Monkeypox Virus) ಮಾನವನಿಂದ ಸಾಕುಪ್ರಾಣಿಗಳಿಗೆ ಹರಡುವ ಮೊದಲ ಶಂಕಿತ ಪ್ರಕರಣದ ಸಾಕ್ಷ್ಯವನ್ನು ಪ್ರಮುಖ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ( The Lancet) ಪ್ರಕಟಿಸಿದೆ. ದಿ ಲ್ಯಾನ್ಸೆಟ್ ಪ್ರಕಾರ, ವೈರಸ್ ಸೋಂಕಿಗೆ ಒಳಗಾದ ಫ್ರಾನ್ಸ್ ಇಬ್ಬರು ವ್ಯಕ್ತಿಗಳ ಜೊತೆಗಿದ್ದ ನಾಯಿಗೂ ಮಂಕಿಪಾಕ್ಸ್ ಲಕ್ಷಣ (Monkeypox Symptoms In Dog) ಕಾಣಿಸಿಕೊಂಡಿದೆ. ನಾಯಿಗೆ 12 ದಿನಗಳ ನಂತರ ರೋಗಲಕ್ಷಣ ಕಾಣಿಸಿಕೊಂಡಿದೆ.
ಇದನ್ನೂ ಓದಿ: Russia-Ukraine War: ಸ್ವಾತಂತ್ರ್ಯ ದಿನದಂದು ರಷ್ಯಾದ ಕ್ಷಿಪಣಿ ದಾಳಿ, 22 ಮಂದಿ ಬಲಿ: ಗುಡುಗಿದ ಝೆಲೆನ್ಸ್ಕಿ
ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ 4 ವರ್ಷದ ಗಂಡು ಇಟಾಲಿಯನ್ ಗ್ರೇಹೌಂಡ್ ತಳಿಯ ನಾಯಿಗೆ ಮಂಕಿಪಾಕ್ಸ್ ಲಕ್ಷಣ ಕಾಣಿಸಿಕೊಂಡಿದೆ. ನಾಯಿಯ ಹೊಟ್ಟೆಯ ಮೇಲೆ ಗಾಯಗಳು ಕಾಣಿಸಿಕೊಂಡಿದ್ದು ಪರೀಕ್ಷಿಸಿದಾಗ ಪಾಸಿಟಿವ್ ಬಂದಿದೆ.
ಮಂಕಿಪಾಕ್ಸ್ ಬಂದ ವ್ಯಕ್ತಿಗಳು-ನಾಯಿ ಒಂದೇ ಬೆಡ್ನಲ್ಲಿ!
ಡಿಎನ್‌ಎ ಪರೀಕ್ಷೆಯ ಮೂಲಕ ಸಂಶೋಧಕರು ಇಬ್ಬರು ಪುರುಷರಿಗೆ ಸೋಂಕು ತಗುಲಿರುವ ವೈರಸ್‌ಗಳು ಮತ್ತು ನಾಯಿಯಲ್ಲಿ ಪತ್ತೆಯಾದ ವೈರಸ್ ಎರಡೂ ಒಂದೇ ಎಂದು ನಿರ್ಧರಿಸಿದ್ದಾರೆ. ಮೊದಲು ಮಂಕಿಪಾಕ್ಸ್ ತಗುಲಿದ್ದ ಇಬ್ಬರು ವ್ಯಕ್ತಿಗಳ ಬೆಡ್ ಮೇಲೆ ನಾಯಿಯೂ ಸಹ ಮಲಗಿತ್ತು. ಇದೇ ಕಾರಣಕ್ಕೆ ನಾಯಿಗೂ ಮಂಕಿಪಾಕ್ಸ್ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ