news18-kannada Updated:February 23, 2021, 3:19 PM IST
ಸಾಂದರ್ಭಿಕ ಚಿತ್ರ
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಬೋ ದೇಶದ ಪೂರ್ವದಲ್ಲಿ ನಡೆದ ದಾಳಿಯಲ್ಲಿ ಇಟಲಿ ದೇಶದ ರಾಯಭಾರಿ ಹತ್ಯೆಗೀಡಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ದಾಳಿಯಿಂದ ಅವರು ಪ್ರಯಾಣಿಸುತ್ತಿದ್ದ ವಿಶ್ವಸಂಸ್ಥೆಯ ಬೆಂಗಾವಲು ವಾಹನಕ್ಕೆ ಗೋಮಾ ಎಂಬ ಪ್ರದೇಶದ ಬಳಿ ಬೆಂಕಿ ಹೊತ್ತಿಕೊಂಡು ಲುಕಾ ಅಟಾನಾಸಿಯೊ (43) ಸೋಮವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಂಗಾವಲು ವಾಹನ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮಕ್ಕೆ (WFP) ಸೇರಿದೆ ಎಂದು ವರದಿಯಾಗಿದೆ. ಇನ್ನು, ರಾಯಭಾರಿಯೊಂದಿಗೆ ಪ್ರಯಾಣಿಸುತ್ತಿದ್ದ ಇಟಲಿಯ ಮಿಲಿಟರಿ ಪೊಲೀಸ್ ಅಧಿಕಾರಿ ಹಾಗೂ ಕಾಂಗೋ ಮೂಲದ ವಾಹನದ ಚಾಲಕ ಮೃತಪಟ್ಟಿದ್ದಾರೆ.
ಇನ್ನು, ಬೆಂಕಿ ಹೊತ್ತಿಕೊಂಡಿದ್ದಕ್ಕೆ "ಇಟಲಿಯ ರಾಯಭಾರಿ ಗೋಮಾದಲ್ಲಿ ಸಾವಿಗೀಡಾಗಿದ್ದರೆಂದು ವಿದೇಶಾಂಗ ಸಚಿವಾಲಯವು ತೀವ್ರ ದುಃಖದಿಂದ ದೃಢಪಡಿಸುತ್ತಿದೆ'' ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹತ್ತಿರದ ವಿರುಂಗಾ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳ ಪ್ರಕಾರ, ಉತ್ತರ ಕಿವು ಪ್ರಾಂತ್ಯದಲ್ಲಿ ನಡೆದ ಈ ದಾಳಿ ಅಪಹರಣಕ್ಕೆ ಯತ್ನವಾಗಿದೆ ಎಂದು ನಂಬಲಾಗಿದೆ.
ದಾಳಿ ಸಂಭವಿಸಿದ್ದು ಹೇಗೆ..?:
ಗೋಮಾದಿಂದ 15 ಕಿ.ಮೀ ದೂರದಲ್ಲಿ ಚಾಲನೆಯಲ್ಲಿದ್ದ ಎರಡು ವಾಹನಗಳ ಪೈಕಿ ಒಂದು ವಾಹನದಲ್ಲಿ ಲುಕಾ ಅಟಾನಾಸಿಯೊ ಪ್ರಯಾಣಿಸುತ್ತಿದ್ದರು. ಈ ವೇಳೆ ಸೋಮವಾರ ಬೆಳಗ್ಗೆ ಈ ವಾಹನಗಳನ್ನು ಗುರಿಯಾಗಿಸಿ ಹೊಂಚು ಹಾಕಿದ ಆರು ದಾಳಿಕೋರರ ಗುಂಪು, ಎರಡೂ ಕಾರುಗಳಲ್ಲಿದ್ದ ಜನರನ್ನು ವಿರುಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಅಪಹರಣ ಮಾಡಲು ಯತ್ನಿಸಿದರು. ಇದಕ್ಕೂ ಮೊದಲು ಬಂದೂಕಿನಿಂದ ಬುಲೆಟ್ ಹಾರಿಸಿ ಅವರನ್ನು ಹೆದರಿಸುವ ಪ್ರಯತ್ನ ಮಾಡಲಾಯಿತು ಎಂದು ಉತ್ತರ ಕಿವು ಪ್ರಾಂತ್ಯದ ಗವರ್ನರ್ ಕಾರ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Coronavirus: ಬೆಂಗಳೂರಿನಲ್ಲಿ ಹೆಚ್ಚಿದ ಕೊರೋನಾ ಕೇಸ್; ಬೆಳ್ಳಂದೂರಿನ ಅಪಾರ್ಟ್ಮೆಂಟ್ ಸೀಲ್ಡೌನ್
ಈ ವೇಳೆ ವಿರುಂಗಾ ನ್ಯಾಷನಲ್ ಪಾರ್ಕ್ ರೇಂಜರ್ಸ್ ಗಸ್ತು ತಿರುಗುತ್ತಿದ್ದ ಪಡೆ ಮಧ್ಯಪ್ರವೇಶಿಸಿ ನಾಲ್ಕು ಜನರನ್ನು ಬಚಾವ್ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು. ದುರದೃಷ್ಟವಶಾತ್, ಹಲ್ಲೆಕೋರರು ರಾಯಭಾರಿ, ಅವರ ಅಂಗ ರಕ್ಷಕ ಹಾಗೂ ದಾಳಿಯ ಪ್ರಾರಂಭದಲ್ಲಿ ಅವರು ಕಾಂಗೋ ಮೂಲದ ಚಾಲಕನನ್ನು ಕೊಲೆ ಮಾಡಿದ್ದಾರೆ'' ಎಂದು ರಾಜ್ಯಪಾಲರು ಹೇಳಿದರು.
ಪೂರ್ವ ಡಿಆರ್ ಕಾಂಗೋದ ರುತ್ಶುರು ಗ್ರಾಮದಲ್ಲಿ ನಡೆಯುತ್ತಿದ್ದ ಶಾಲೆಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಟಾನಾಸಿಯೊ ಗೋಮಾದಿಂದ ಪ್ರಯಾಣಿಸುತ್ತಿದ್ದರು ಎಂದು ಡಬ್ಲುಎಫ್ಪಿ ಹೇಳಿದೆ.ದಾಳಿಯಲ್ಲಿ ಕಳೆದ ಸೆಪ್ಟೆಂಬರ್ನಿಂದ ರಾಯಭಾರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಿಲಿಟರಿ ಪೊಲೀಸ್ ಅಧಿಕಾರಿ ವಿಟ್ಟೊರಿಯೊ ಐಕೊವಾಚಿ (30) ಮತ್ತು ಕಾಂಗೋ ಮೂಲದ ಚಾಲಕ ಮೌಸ್ತಫಾ ಮಿಲಾಂಬೊ ಸಹ ಮೃತಪಟ್ಟಿದ್ದಾರೆ. ಅಲ್ಲದೆ, ಘಟನೆಯಲ್ಲಿ ಹಲವಾರು ಇತರ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ರುವಾಂಡಾದ ವಿಮೋಚನೆಗಾಗಿ ಡೆಮಾಕ್ರಟಿಕ್ ಫೋರ್ಸಸ್ (ಎಫ್ಡಿಎಲ್ಆರ್) ಎಂದು ಕರೆಯಲ್ಪಡುವ ಹುಟು ಬಂಡಾಯ ಗುಂಪಿನ ಕೈವಾಡದ ಶಂಕೆ ಇದೆ ಎಂದು ಆಂತರಿಕ ಸಚಿವಾಲಯವು ಆರೋಪಿಸಿದೆ.
ಅನೇಕ ಸಶಸ್ತ್ರ ಗುಂಪುಗಳು ಉದ್ಯಾನವನದಲ್ಲಿ ಮತ್ತು ಅದರ ಸುತ್ತಲೂ ಕಾರ್ಯನಿರ್ವಹಿಸುತ್ತಿವೆ ಮತ್ತು ದೇಶದ ಪೂರ್ವದಲ್ಲಿ ಮಿಲಿಷಿಯಾಗಳು ನಿಯಮಿತವಾಗಿ ಘರ್ಷಣೆ ನಡೆಸುತ್ತಾರೆ. ಅಲ್ಲಿ ಯುಎನ್ ಪಡೆ ಶಾಂತಿ ಕಾಪಾಡಲು ಹೆಣಗಾಡುತ್ತಿದೆ. ಡಿಆರ್ಸಿ ಸೈನ್ಯವು ಈ ಪ್ರದೇಶವನ್ನು ಹುಡುಕಲು ಸಹಾಯ ಮಾಡಲು ಸೈನಿಕರನ್ನು ನಿಯೋಜಿಸಿದೆ.
ಇಟಲಿ ಪ್ರಧಾನಿ, ಅಧ್ಯಕ್ಷ ಸಂತಾಪ:
ಈ ಘಟನೆಗೆ ಇಟಲಿ ಪ್ರಧಾನಿ ಮಾರಿಯೋ ದ್ರಾಘಿ ಸಂತಾಪ ವ್ಯಕ್ತಪಡಿಸಿದ್ದು, ಅಧ್ಯಕ್ಷ ಸೆರ್ಗಿಯೋ ಮ್ಯಾಟರೆಲ್ಲಾ ಅವರು "ಹೇಡಿತನದ ದಾಳಿಯನ್ನು" ಖಂಡಿಸಿದರು. ಅಲ್ಲದೆ, ವಿದೇಶಾಂಗ ಸಚಿವ ಲುಯಿಗಿ ಡಿ ಮಾಯೊ ಅವರು "ಕ್ರೂರ" ಹತ್ಯೆಗಳಿಗೆ ತಮ್ಮ ಆಘಾತ ಮತ್ತು ಅಪಾರ ದುಃಖವನ್ನು ವ್ಯಕ್ತಪಡಿಸಿದರು.
"ಇಂದು ಇಟಲಿ ತನ್ನ ಇಬ್ಬರು ಪುತ್ರರ ನಷ್ಟವನ್ನು ಶೋಕಿಸುತ್ತಿದೆ ಮತ್ತು ಅವರ ಕುಟುಂಬವನ್ನು ಸಂತೈಸುತ್ತಿದೆ'' ಎಂದು ಅವರು ಹೇಳಿದರು. ಈ ಘಟನೆಯ ಹಿಂದಿನ ಸಂಪೂರ್ಣ ಮಾಹಿತಿ ಪಡೆಯದೆ ಬಿಡುವುದಿಲ್ಲ ಎಂದೂ ಹೇಳಿದರು.
ಈ ಹತ್ಯೆಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಿಆರ್ ಕಾಂಗೋದ ವಿದೇಶಾಂಗ ಸಚಿವ ಮೇರಿ ತುಂಬಾ ಹೇಳಿದ್ದಾರೆ. ಅಟಾನಾಸಿಯೊ 2017 ರಿಂದ ಡಿಆರ್ ಕಾಂಗೋದಲ್ಲಿ ಇಟಲಿಯನ್ನು ಪ್ರತಿನಿಧಿಸಿದ್ದರು. ಅವರು 2003 ರಲ್ಲಿ ರಾಜತಾಂತ್ರಿಕ ಸೇವೆಗೆ ಸೇರಿದರು. ಅವರು ಮೊರಾಕೋ ಮತ್ತು ನೈಜೀರಿಯಾದಲ್ಲಿ ಸಹ ರಾಯಭಾರಿಯಾಗಿದ್ದರು.
Published by:
Sushma Chakre
First published:
February 23, 2021, 3:19 PM IST