ಮುಸ್ಲಿಮರ ಪೌರತ್ವರಹಿತ ಹುನ್ನಾರ ಇದರಲ್ಲಿ ಅಡಗಿದೆ; ಲೋಕಸಭೆಯಲ್ಲಿ ಮಸೂದೆ ಪ್ರತಿ ಹರಿದುಹಾಕಿದ ಸಂಸದ ಓವೈಸಿ

ಇದು ಭಾರತ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದ ಓವೈಸಿ, ಬಿಜೆಪಿ ನೇತೃತ್ವದ ಸರ್ಕಾರ ದೇಶದಲ್ಲಿ ಮುಸ್ಲಿಮರನ್ನು ಅಂಚಿನಲ್ಲಿರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಮಸೂದೆ ಸಂವಿಧಾನದ ವಿರುದ್ಧವಾಗಿದೆ. ಇದು ಮುಸ್ಲಿಮರನ್ನು ದೇಶದ ಪೌರತ್ವರಹಿತರನ್ನಾಗಿ ಮಾಡುವ ಪಿತೂರಿಯನ್ನು ಹೊಂದಿದೆ ಎಂದು ಆರೋಪಿಸಿದರು.

ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪ್ರತಿ ಹರಿದುಹಾಕಿದ ಸಂಸದ ಅಸಾದುದ್ದೀನ್ ಓವೈಸಿ.

ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪ್ರತಿ ಹರಿದುಹಾಕಿದ ಸಂಸದ ಅಸಾದುದ್ದೀನ್ ಓವೈಸಿ.

  • Share this:
ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿಚಾರವಾಗಿ ಇಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ತೀವ್ರ ತರಾಟೆಗೆ ತೆಗೆದುಕೊಂಡರು. ಇದು ಮುಸ್ಲಿಮರನ್ನು ಗತಿ ಇಲ್ಲದಂತೆ ಮಾಡುವ ಗುರಿ ಹೊಂದಿದೆ ಹಾಗೂ ಮತ್ತೊಂದು ಪ್ರತ್ಯೇಕತೆಯನ್ನು ಮುನ್ನಡೆಸುವಂತಿದೆ ಎಂದು ಹೇಳಿದರು.

ಇದೇ ವೇಳೆ ಮಹಾತ್ಮ ಗಾಂಧಿ ಅವರನ್ನು ಉಲ್ಲೇಖ ಮಾಡಿದ ಓವೈಸಿ, ದಕ್ಷಿಣ ಆಫ್ರಿಕಾದಲ್ಲಿ ತಾರತಮ್ಯದ ಪೌರತ್ವ ಚೀಟಿಯನ್ನು ಹರಿದ ಬಳಿಕ ಅವರನ್ನು ಮಹತ್ವ ಎಂದು ಕರೆಯಲಾಯಿತು. ಮತ್ತು ತಮ್ಮ ಪ್ರತಿಭಟನಾರ್ಥವಾಗಿ ಪೌರತ್ವ ತಿದ್ದುಪಡಿ ಮಸೂದೆಯ ಪ್ರತಿಯನ್ನು ಹರಿದುಹಾಕಿದರು.

ಇದು ಭಾರತ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದ ಓವೈಸಿ, ಬಿಜೆಪಿ ನೇತೃತ್ವದ ಸರ್ಕಾರ ದೇಶದಲ್ಲಿ ಮುಸ್ಲಿಮರನ್ನು ಅಂಚಿನಲ್ಲಿರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಮಸೂದೆ ಸಂವಿಧಾನದ ವಿರುದ್ಧವಾಗಿದೆ. ಇದು ಮುಸ್ಲಿಮರನ್ನು ದೇಶದ ಪೌರತ್ವರಹಿತರನ್ನಾಗಿ ಮಾಡುವ ಪಿತೂರಿಯನ್ನು ಹೊಂದಿದೆ ಎಂದು ಆರೋಪಿಸಿದರು.

ಇದನ್ನು ಓದಿ: ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ; ಇದು ದೇಶ ವಿಭಜನೆಯ ಪ್ರತಿಫಲ ಎಂದು ‘ಕೈ’ ಕುಟುಕಿದ ಅಮಿತ್ ಶಾ

First published: