HOME » NEWS » National-international » IT RETURNS FILING DEADLINE EXTENDED TO JAN 10TH SNVS

IT Returns - ಐಟಿ ರಿಟರ್ನ್ಸ್ ಸಲ್ಲಿಸುವ ಗಡುವು ಜ. 10ಕ್ಕೆ ವಿಸ್ತರಣೆ

ಮಾಮೂಲಿಯ ಆದಾತ ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಸಲು ಡಿ. 31ಕ್ಕೆ ಇದ್ದ ಗಡುವನ್ನು ಜ. 10ಕ್ಕೆ ವಿಸ್ತರಿಸಲಾಗಿದೆ. ಆಡಿಟಿಂಗ್, ವಹಿವಾಟು ದಾಖಲೆ ಸಲ್ಲಿಸುವ ಅಗತ್ಯವಿದ್ದವರಿಗೆ ಫೆ. 15ರವರೆಗೆ ಕಾಲಾವಕಾಶ ಕೊಡಲಾಗಿದೆ.

news18
Updated:December 30, 2020, 9:29 PM IST
IT Returns - ಐಟಿ ರಿಟರ್ನ್ಸ್ ಸಲ್ಲಿಸುವ ಗಡುವು ಜ. 10ಕ್ಕೆ ವಿಸ್ತರಣೆ
ಸಾಂದರ್ಭಿಕ ಚಿತ್ರ.
  • News18
  • Last Updated: December 30, 2020, 9:29 PM IST
  • Share this:
ನವದೆಹಲಿ(ಡಿ. 30): ಆದಾಯ ತೆರಿಗೆ ರಿಟರ್ನ್ಸ್ (Income Tax Returns) ಸಲ್ಲಿಸಲು ನಾಳೆಗೆ ಇದ್ದ ಗಡುವನ್ನು ಇನ್ನಷ್ಟು ಅವಧಿಗೆ ವಿಸ್ತರಿಸಲಾಗಿದೆ. ಐಟಿಆರ್ ಸಲ್ಲಿಕೆಗೆ ಜನವರಿ 10ರವರೆಗೆ ಅವಕಾಶ ನೀಡಲಾಗಿದೆ. ಕೋವಿಡ್ ಸಂಕಷ್ಟದ ಕಾರಣಕ್ಕೆ ತೆರಿಗೆ ಪಾವತಿದಾರರಿಗೆ ಸಿಬಿಡಿಟಿ ಕಾಲಾವಕಾಶ ನೀಡಿದೆ. ಖಾತೆಗಳ ಆಡಿಟ್ (Auditing) ಮಾಡಬೇಕಿರುವ ವ್ಯಕ್ತಿಗಳು ಹಾಗೂ ಕಂಪನಿಗಳಿಗೆ ಐಟಿಆರ್ ಫೈಲ್ ಮಾಡಲು ಫೆಬ್ರವರಿ 15ರವರೆಗೂ ಗಡುವು ವಿಸ್ತರಿಸಿದೆ.

2019-20ರ ಹಣಕಾಸು ವರ್ಷದಲ್ಲಿ ಡಿಸೆಂಬರ್ 28, ಅಂದರೆ ಮೊನ್ನೆಯವರೆಗೂ ಸಲ್ಲಿಕೆಯಾಗಿರುವ ಐಟಿಆರ್​ಗಳ ಪ್ರಮಾಣ 4.54 ಕೋಟಿ ಆಗಿದೆ. ಹಿಂದಿನ ವರ್ಷದಲ್ಲಿ ಒಟ್ಟಾರೆ 5.65 ಕೋಟಿ ಜನರು ಐಟಿ ರಿಟರ್ನ್ಸ್ ಫೈಲ್ ಮಾಡಿದ್ದರು.

ಅಂತರರಾಷ್ಟ್ರೀಯ ಮತ್ತು ನಿರ್ದಿಷ್ಪಪಡಿಸಿದ ಆಂತರಿಕ ವಹಿವಾಟು ವಿಚಾರದಲ್ಲಿ ದಾಖಲೆಗಳನ್ನ ಸಲ್ಲಿಸಬೇಕಾದ ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಸಲು ಫೆಬ್ರುವರಿ 15ರವರೆಗೆ ಸಮಯ ಹೊಂದಿದ್ದಾರೆ. ವಿವಾದ್ ಸೆ ವಿಶ್ವಾಸ ಯೋಜನೆ ಅಡಿಯಲ್ಲಿ ಘೋಷಣೆ ಮಾಡಬೇಕಾದವರಿಗೂ ಜನವರಿ 31ರವರೆಗೆ ಕಾಲಾವಕಾಶ ಕೊಡಲಾಗಿದೆ. ಇವರಿಗೆ ಡಿಸೆಂಬರ್ 31ಕ್ಕೆ ಅಂತಿಮ ಗಡುವು ನಿಗದಿ ಮಾಡಲಾಗಿತ್ತು. ಕೋವಿಡ್ ಕಾರಣಕ್ಕೆ ಅವರಿಗೂ ಅವಧಿ ವಿಸ್ತರಣೆ ಮಾಡಿದೆ.

ಇದೇ ವೇಳೆ, ಜಿಎಸ್​ಟಿ ಕಾಯ್ದೆಯ ಸೆಕ್ಷನ್ 44ರ ಅಡಿಯಲ್ಲಿ ವಾರ್ಷಿಕ ರಿಟರ್ನ್ ಸಲ್ಲಿಸಲು ಡಿಸೆಂಬರ್ 31ಕ್ಕೆ ಇದ್ದ ಗಡುವನ್ನು ಫೆಬ್ರವರಿ 28ಕ್ಕೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ 20ಕ್ಕೇರಿದ ರೂಪಾಂತರಿ ಕೊರೋನಾ ಕೇಸ್; ಜನವರಿ 7ರವರೆಗೆ ಇಂಗ್ಲೆಂಡ್ ವಿಮಾನಗಳಿಗೆ ನಿಷೇಧ

ಐಟಿ ಕಾಯ್ದೆ ಪ್ರಕಾರ ನಿಗದಿತ ಅವಧಿಯಲ್ಲಿ ರಿಟರ್ನ್ಸ್ ಫೈಲ್ ಮಾಡಲು ವಿಫಲವಾದರೆ ಸಾಕಷ್ಟು ದಂಡ ತೆರಬೇಕಾಗುತ್ತದೆ. ಈ ವರ್ಷ ಕೋವಿಡ್ ಸಂಕಷ್ಟ ಸಮಾಜದ ಎಲ್ಲಾ ಸ್ತರದವರಿಗೂ ಬಾಧಿಸಿರುವ ಹಿನ್ನೆಲೆಯಲ್ಲಿ ಬಾರಿ ಬಾರಿ ಗಡುವನ್ನು ವಿಸ್ತರಿಸುತ್ತಾ ಬರಲಾಗಿದೆ.
Published by: Vijayasarthy SN
First published: December 30, 2020, 9:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories