ಕರ್ನಾಟಕ, ಮಧ್ಯಪ್ರದೇಶ ಬೆನ್ನಲ್ಲೇ ಆಂಧ್ರಕ್ಕೂ ಐಟಿ ಬಿಸಿ; ಟಿಡಿಪಿ ಅಭ್ಯರ್ಥಿ ಮನೆ ಮೇಲೆ ದಾಳಿ; ಕೇಂದ್ರದ ವಿರುದ್ಧ ಸಿಎಂ ನಾಯ್ಡು ಕಿಡಿ!

ಗಲ್ಲಾ ಜಯದೇವ ಅವರು ರಾಜಕಾರಣಿ ಮತ್ತು ಉದ್ಯಮಿ. ಟಿಡಿಪಿ ಅಭ್ಯರ್ಥಿ ಎನಿಸಿಕೊಂಡಿರುವ ಜಯದೇವ್‌ ಬಹುಕೋಟಿಗಳ ಒಡೆಯ. 'ಅಮರ ರಾಜಾ' ಸಮೂಹ ಸಂಸ್ಥೆಗಳ ಮಾಲೀಕ. 2014ರಲ್ಲಿ ಮೊದಲಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದಾಗಲೇ ಅವರು ₹680 ಕೋಟಿ ಮೊತ್ತದ ಆಸ್ತಿ ಘೋಷಿಸಿಕೊಂಡಿದ್ದರು.

Ganesh Nachikethu | news18
Updated:April 10, 2019, 11:07 AM IST
ಕರ್ನಾಟಕ, ಮಧ್ಯಪ್ರದೇಶ ಬೆನ್ನಲ್ಲೇ ಆಂಧ್ರಕ್ಕೂ ಐಟಿ ಬಿಸಿ; ಟಿಡಿಪಿ ಅಭ್ಯರ್ಥಿ ಮನೆ ಮೇಲೆ ದಾಳಿ; ಕೇಂದ್ರದ ವಿರುದ್ಧ ಸಿಎಂ ನಾಯ್ಡು ಕಿಡಿ!
ಸಿಎಂ ಚಂದ್ರಬಾಬು ನಾಯ್ಡು
Ganesh Nachikethu | news18
Updated: April 10, 2019, 11:07 AM IST
ಹೈದರಾಬಾದ್​​(ಏ.10): ಲೋಕಸಭಾ ಚುನಾವಣೆ ಹೊತ್ತಲ್ಲಿಯೇ ಕರ್ನಾಟಕ, ಮಧ್ಯಪ್ರದೇಶ ಬೆನ್ನಲ್ಲೀಗ ಆಂಧ್ರಪ್ರದೇಶಕ್ಕೂ ಐಟಿ ಬಿಸಿ ತಟ್ಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​​-ಜೆಡಿಎಸ್​​ ನಾಯಕರ ಮನೆ ಮೇಲೆ ದಾಳಿ ಮಾಡಿದ್ದ ಐಟಿ ಅಧಿಕಾರಿಗಳ ಕಣ್ಣು ಸದ್ಯ ಆಂಧ್ರದ ಮೇಲೆ ನೆಟ್ಟಿದೆ. ಹಾಗಾಗಿಯೇ ನಿನ್ನೆ(ಮಂಗಳವಾರ) ಸಿಎಂ ಚಂದ್ರಬಾಬು ನೇತೃತ್ವದ ತೆಲುಗುದೇಶಂ ಪಕ್ಷದ ಅಭ್ಯರ್ಥಿ ಮೇಲೆ ಐಟಿ ದಾಳಿ ಮಾಡಲಾಗಿದೆ. ಇಲ್ಲಿನ ಗುಂಟೂರು ಲೋಕಸಭಾ ಕ್ಷೇತ್ರದ ಟಿಡಿಪಿ ಅಭ್ಯರ್ಥಿ ಗಲ್ಲಾ ಜಯದೇವ ಅವರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿದ್ದಾರೆ.

ಒಂದು ವಾರದಿಂದ ಕರ್ನಾಟಕ, ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್​​-ಜೆಡಿಎಸ್​​ ಪ್ರಮುಖ ರಾಜಕಾರಣಿಗಳ ಮನೆಗಳ ಮೇಲೆ ಐಟಿ ದಾಳಿ ನಡೆದಿತ್ತು. ಈ ಬೆನ್ನಲ್ಲೇ ಜುಲೈನಲ್ಲಿ ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ಗಲ್ಲಾ ಜಯದೇವ ಮೇಲೆಯೂ ದಾಳಿ ನಡೆಸಲಾಗಿದೆ. ಹಾಗಾಗಿ ಒಂದೆಡೆ ಗಲ್ಲಾ ಅವರಿಗೆ ಸಂಬಂಧಿಸಿದ ಕಡತಗಳ ಪರಿಶೀಲನೆಯಲ್ಲಿ ಐಟಿ ಅಧಿಕಾರಿಗಳು ತೊಡಗಿದ್ದರೇ, ಇನ್ನೊಂದೆಡೆ ಬಿಜೆಪಿ ನಾಯಕರ ಮೇಲೆ ಯಾಕೇ ಐಟಿ ದಾಳಿ ನಡೆದಿಲ್ಲ ಎಂಬ ಚರ್ಚೆ ನಡೆಯುತ್ತಿದೆ.

ಕಾಂಗ್ರೆಸ್​​-ಜೆಡಿಎಸ್​​ ಹಾಗೆಯೇ ಟಿಡಿಪಿ ಅಭ್ಯರ್ಥಿಗಳ ಮೇಲೆ ದಾಳಿ ನಡೆಸಿದನ್ನು ಖಂಡಿಸಿ ಕೇಂದ್ರದ ವಿರುದ್ಧ ಈಗಾಗಲೇ ಸಿಎಂ ಚಂದ್ರಬಾಬು ನಾಯ್ಡು ಪ್ರತಿಭಟನೆಗೆ ಕುಳಿತಿದ್ದರು. ಈ ವೇಳೆ ಪ್ರತಿಭಟನೆಯಲ್ಲಿ ಮಾತಾಡಿದ್ದ ಸಿಎಂ ನಾಯ್ಡು ಅವರು, ನಮ್ಮ ಅಭ್ಯರ್ಥಿಯ ಮೇಲೆ ಐಟಿ ದಾಳಿ ಮಾಡಲಾಗಿದೆ. ಈ ಬಗ್ಗೆ ಯಾವುದೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಕೇಂದ್ರದ ವಿರುದ್ಧ ಇದ್ದ ಕಾಂಗ್ರೆಸ್​​, ಜೆಡಿಎಸ್​​ನಂತೆಯೇ ನಮ್ಮ ಟಿಡಿಪಿ ಅನ್ನು ಕೇಂದ್ರ ಗುರಿಯಾಗಿಸಿಕೊಂಡಿದೆ ಎಂದರು.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್​​ಗೆ ಭೀಮಸೇನೆ ಮುಖ್ಯಸ್ಥ ಚಂದ್ರಶೇಖರ್​​​ ಆಜಾದ್​​​​​ ಬೆಂಬಲ; ಎಸ್​​​ಪಿ-ಬಿಎಸ್​​ಪಿ ಮೈತ್ರಿಗೆ ಭಾರೀ ಹಿನ್ನಡೆ!

ಇನ್ನು ಚುನಾವಣೆ ಗೆಲ್ಲಲು ಮೋದಿ ಸರ್ಕಾರ ಈ ರೀತಿಯ ತಂತ್ರಗಳನ್ನು ಆಗ್ಗಾಗೆ ನಡೆಸುತ್ತಲೇ ಬಂದಿದೆ. ರಾಜ್ಯವನ್ನು ತುರ್ತು ಪರಿಸ್ಥಿತಿಗೆ ತಳ್ಳುವ ಪ್ರಯತ್ನಗಳಿವು. ಅದಾಯ ತೆರಿಗೆ ಇಲಾಖೆ, ಚುನಾವಣೆ ಆಯೋಗ ಪಕ್ಷಪಾತಿಗಳಾಗಿ ಕೆಲಸ ಮಾಡುತ್ತಿವೆ ಎಂದು ಗಂಭೀರವಾಗಿ ಸಿಎಂ ನಾಯ್ಡು ಆರೋಪಿಸಿದ್ಧಾರೆ.

ಇದನ್ನೂ ಓದಿ: ನಾಳೆ ಮೊದಲ ಹಂತದ ಲೋಕಸಭಾ ಚುನಾವಣೆ; ಆಂಧ್ರದಲ್ಲಿ ಅಗ್ನಿಪರೀಕ್ಷೆಗೊಳಗಾಗಲಿರುವ ಚಂದ್ರಬಾಬು
Loading...

ಗಲ್ಲಾ ಜಯದೇವ ಅವರು ರಾಜಕಾರಣಿ ಮತ್ತು ಉದ್ಯಮಿ. ಟಿಡಿಪಿ ಅಭ್ಯರ್ಥಿ ಎನಿಸಿಕೊಂಡಿರುವ ಜಯದೇವ್‌ ಬಹುಕೋಟಿಗಳ ಒಡೆಯ. 'ಅಮರ ರಾಜಾ' ಸಮೂಹ ಸಂಸ್ಥೆಗಳ ಮಾಲೀಕ. 2014ರಲ್ಲಿ ಮೊದಲಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದಾಗಲೇ ಅವರು ₹680 ಕೋಟಿ ಮೊತ್ತದ ಆಸ್ತಿ ಘೋಷಿಸಿಕೊಂಡಿದ್ದರು.
--------------
First published:April 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626