IT Raid: ವಾಚ್​ ಶಾಪ್​ ಮಾಲೀಕನ ಬಡತನದ ಬದುಕು, ಆದ್ರೆ ಬ್ಯಾಂಕ್ ಬ್ಯಾಲೆನ್ಸ್​ ನೋಡಿದ ಐಟಿ ಅಧಿಕಾರಿಗಳಿಗೆ ಶಾಕ್!

ಉತ್ತರ ಪ್ರದೇಶದ ನಿವಾಸಿ ಅಬ್ದುಲ್ ಮಬೂದ್ ಇದರ್ಸಿ ಸಣ್ಣ ಗಲ್ಲಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಕೈಗಡಿಯಾರಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಅಂಗಡಿಯನ್ನು ಅವರು ಹೊಂದಿದ್ದಾರೆ. ತನ್ನ ಮಗನು ತನ್ನ ಕೆಲಸದಲ್ಲಿ ಸಹಾಯ ಮಾಡುತ್ತಾ, ಹೀಗಾಗಿ ತಾನೊಬ್ಬ ನಿರುದ್ಯೋಗಿ ಎಂದು ತನ್ನನ್ನು ತಾನು ಬಣ್ಣಿಸುತ್ತಾರೆ. ಆದರೆ ಐಟಿ ದಾಳಿ ವೇಳೆ ಅಚ್ಚರಿಯ ಮಾಹಿತಿ ಬಯಲಾಗಿದೆ. ಈತ 300 ಕೋಟಿ ಸಂಪತ್ತಿನ ಮಾಲೀಕರಾಗಿದ್ದರೂ ಯಾವುದೇ ಆದಾಯ ತೆರಿಗೆ ರಿಟರ್ನ್ ಸಲ್ಲಿಸುತ್ತಿಲ್ಲ.

ವಾಚ್​ ಶಾಪ್​ ಮಾಲೀಕ

ವಾಚ್​ ಶಾಪ್​ ಮಾಲೀಕ

  • Share this:
ಲಕ್ನೋ(ಸೆ.11): ರಾಜಕೀಯ ಪಕ್ಷ ಕಟ್ಟಿಕೊಂಡು ದೇಣಿಗೆ (Donation) ಸಂಗ್ರಹಿಸುವ ವಿಚಾರದಲ್ಲಿ ನೋಂದಣಿಯಾಗದ ಹಲವು ರಾಜಕೀಯ ಪಕ್ಷಗಳಿಂದ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ (Income Tax Department) ಮಾಹಿತಿ ಸಿಕ್ಕಿದೆ. ಆದಾಯ ತೆರಿಗೆ ಮೂಲಗಳ ಪ್ರಕಾರ, ಅಂತಹ ಕೆಲವು ರಾಜಕೀಯ ಪಕ್ಷದ ಅಧ್ಯಕ್ಷರು ಸಹ ಸಣ್ಣ ಗಡಿಯಾರ ಅಂಗಡಿಯನ್ನು (Watch Shop)  ನಡೆಸುತ್ತಿರುವುದು ಕಂಡುಬಂದಿದ್ದು, ಅವರು ತಮ್ಮ ಜೀವನವನ್ನು ಅತ್ಯಂತ ಬಡತನದಲ್ಲಿ ಸಾಗಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಹಾಗೂ ಬ್ಯಾಂಕ್ ವಿವರಗಳನ್ನು ಪರಿಶೀಲಿಸಿದಾಗ ಹೀಗೆ ಬಡತನದ ಬದುಕು ಸಾಗಿಸುತ್ತಿದ್ದಾತ ಬರೋಬ್ಬರಿ 300 ಕೋಟಿಗೂ ಅಧಿಕ ಆಸ್ತಿಯ ಒಡೆಯ ಎಂಬುದು ತಿಳಿದು ಬಂದಿದೆ.

ಕೈಗಡಿಯಾರ ಶಾಪ್​ ಮಾಲೀಕ

ಉತ್ತರ ಪ್ರದೇಶದ ನಿವಾಸಿ ಅಬ್ದುಲ್ ಮಬೂದ್ ಇದರ್ಸಿ ಸಣ್ಣ ಗಲ್ಲಿ ಪ್ರದೇಶದಲ್ಲಿ ವಾಸಿಸುತ್ತಾರೆ. ಕೈಗಡಿಯಾರಗಳನ್ನು ತಯಾರಿ ಮತ್ತು ಮಾರಾಟಕ್ಕಾಗಿ ಪುಟ್ಟ ಅಂಗಡಿಯನ್ನೂ ಇಟ್ಟಿದ್ದಾರೆ. ತನ್ನ ಮಗ ತನಗೆ ಈ ಕೆಲಸದಲ್ಲಿ ಸಹಾಯ ಮಾಡುತ್ತಾನೆ ಎಂದ್ಇರುವ ಅವರು ತಾನೊಬ್ಬ ನಿರುದ್ಯೋಗಿ ಎಂದು ಬಣ್ಣಿಸಿದ್ದಾರೆ. ಆದರೆ ಐಟಿ ದಾಳಿ ವೇಳೆ ಅಚ್ಚರಿಯ ಮಾಹಿತಿ ಬಯಲಾಗಿದೆ. ಈತ 300 ಕೋಟಿ ಸಂಪತ್ತಿನ ಮಾಲೀಕರಾಗಿದ್ದರೂ ಯಾವುದೇ ಆದಾಯ ತೆರಿಗೆ ರಿಟರ್ನ್ ಸಲ್ಲಿಸುತ್ತಿಲ್ಲ.

ಇದನ್ನೂ ಓದಿ: Congressನವರು ಹುಟ್ಟು ಕುಡುಕರು: BJP ನಾಯಕ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ

ದೆಹಲಿಯಲ್ಲಿ ಒಂದು ಕಡೆ ಸೇರಿ ಉತ್ತರ ಪ್ರದೇಶದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೀಗಿರುವಾಗ ಈ ಅಚ್ಚರಿಯ ವಿಚಾರ ಬಯಲಿಗೆ ಬಂದಿದೆ.

ಏಕಕಾಲದಲ್ಲಿ ಹಲವೆಡೆ ಐಟಿ ದಾಳಿ

ಹೌದು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಶಂಕಿತ 'ನಿಧಿ', ಎಫ್‌ಸಿಆರ್‌ಎ ಉಲ್ಲಂಘನೆ ಮತ್ತು ಆಪಾದಿತ ತೆರಿಗೆ ವಂಚನೆಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಆದಾಯ ತೆರಿಗೆ ಇಲಾಖೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದೆ. ಗುಜರಾತ್, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ, ಹರಿಯಾಣ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಏಕಕಾಲದಲ್ಲಿ 110 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಮತ್ತು ಅವುಗಳ ಅನುಮಾನಾಸ್ಪದ ವಹಿವಾಟುಗಳ ಮೇಲೆ ದಾಳಿ ನಡೆಸಲಾಯಿತು. ಈ ಅವಧಿಯಲ್ಲಿ ಅಕ್ರಮವಾಗಿ ಗಳಿಸಿದ ಹಣವನ್ನು ರಾಜಕೀಯ ಪಕ್ಷಗಳಿಗೆ ನೀಡಿರುವ ಕೆಲ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2,100 ಕ್ಕೂ ಹೆಚ್ಚು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು

ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ಇಲಾಖೆ ಏಕಾಏಕಿ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ಆಯೋಗವು ಇತ್ತೀಚೆಗೆ 198 ಸಂಸ್ಥೆಗಳನ್ನು ಭೌತಿಕ ಪರಿಶೀಲನೆಯ ನಂತರ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಪಟ್ಟಿಯಿಂದ ತೆಗೆದುಹಾಕಿತ್ತು. ನಿಯಮಗಳು ಮತ್ತು ಚುನಾವಣೆ ಸಂಬಂಧಿತ ಕಾನೂನುಗಳನ್ನು ಉಲ್ಲಂಘಿಸಿದ 2,100 ಕ್ಕೂ ಹೆಚ್ಚು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ. ಇದು ನಿಧಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸದಿರುವುದು, ದಾನಿಗಳ ವಿಳಾಸಗಳು ಮತ್ತು ಪದಾಧಿಕಾರಿಗಳ ಹೆಸರುಗಳನ್ನು ಬಿಡುಗಡೆ ಮಾಡದಿರುವುದು. ಕೆಲವು ಪಕ್ಷಗಳು 'ಗಂಭೀರ' ಹಣಕಾಸು ಅವ್ಯವಹಾರಗಳಲ್ಲಿ ತೊಡಗಿರುವುದು ಕಂಡುಬಂದಿದೆ.

ಇದನ್ನೂ ಓದಿ: DK Shivakumar ಆಪ್ತನಿಗೆ IT ಶಾಕ್: ಉದ್ಯಮಿ ಯು.ಬಿ. ಶೆಟ್ಟಿ & ಬ್ರದರ್ ಮನೆಯಲ್ಲಿ ಸಿಕ್ಕ ಆಸ್ತಿ ಎಷ್ಟು ಗೊತ್ತಾ?

ಇನ್ನೂ ಅನೇಕರ ಮೇಲೆ ಐಟಿ ಕಣ್ಣು

ಈ ಆದಾಯ ತೆರಿಗೆ ದಾಳಿಗಳ ಮಧ್ಯೆ, ದೆಹಲಿ ಮೂಲದ ಥಿಂಕ್-ಟ್ಯಾಂಕ್ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (CPR) ಮತ್ತು ಜಾಗತಿಕ ಎನ್‌ಜಿಒ ಆಕ್ಸ್‌ಫ್ಯಾಮ್ ಸೇರಿದಂತೆ ಕೆಲವು ಎನ್‌ಜಿಒಗಳ ಮೇಲೆ ಇಲಾಖೆಯು ದಾಳಿ ನಡೆಸಿತು. ಮೇಲಿನ ಮಾಹಿತಿಯನ್ನು ನೀಡುತ್ತಾ, ವಿದೇಶದಿಂದ ಹಣ ಸ್ವೀಕಾರಕ್ಕೆ ಸಂಬಂಧಿಸಿದ ಎಫ್‌ಸಿಆರ್‌ಎ (ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ) ಕಾನೂನು ಉಲ್ಲಂಘನೆಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಮೂರು ಎನ್‌ಜಿಒಗಳು ಮತ್ತು ದತ್ತಿ ಸಂಸ್ಥೆಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ಅಚ್ಚರಿಯ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು. ಆಕ್ಸ್‌ಫ್ಯಾಮ್ ಇಂಡಿಯಾ, ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಮತ್ತು ಬೆಂಗಳೂರಿನ ಸ್ವತಂತ್ರ ಮತ್ತು ಸಾರ್ವಜನಿಕ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ ಮತ್ತು ಇತರರಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಆದಾಯ ತೆರಿಗೆ ಇಲಾಖೆಯು ಈ ಸಂಸ್ಥೆಗಳ ಬ್ಯಾಲೆನ್ಸ್ ಶೀಟ್ ಮತ್ತು ಎಫ್‌ಸಿಆರ್‌ಎ ಮೂಲಕ ಪಡೆದ ಹಣದ ಸ್ವೀಕೃತಿಯನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
Published by:Precilla Olivia Dias
First published: