news18-kannada Updated:January 17, 2020, 8:05 AM IST
ರಶ್ಮಿಕಾ ಮಂದಣ್ಣ
ಬೆಂಗಳೂರು (ಜ.17): ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದರು. ಹೈದರಾಬಾದ್ನಲ್ಲಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಕೊಡಗಿಗೆ ವಾಪಾಸಾಗಿದ್ದಾರೆ. ಇಂದು ಕೂಡ ಐಟಿ ಪರಿಶೀಲನೆ ಮುಂದುವರಿದಿದೆ.
ರಶ್ಮಿಕಾ ಮಂದಣ್ಣ ಹುಟ್ಟೂರು ವಿರಾಜಪೇಟೆಯಲ್ಲಿರುವ ಮನೆಗೆ ಬೆಳಗ್ಗೆ ಟ್ಯಾಕ್ಸಿ ಮೂಲಕ ಆಗಮಿಸಿದ ಅಧಿಕಾರಿಗಳು ಕುಟುಂಬಸ್ಥರಿಗೆ ಶಾಕ್ ನೀಡಿದ್ದಾರೆ. 3 ಕಾರಿನಲ್ಲಿ ಬಂದ 9 ಅಧಿಕಾರಿಗಳು ರಶ್ಮಿಕಾರ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಆಂಧ್ರ ಹಾಗೂ ತೆಲಂಗಾಣದ ಐಟಿ ಅಧಿಕಾರಿಗಳಿಂದ ಈ ದಾಳಿ ನಡೆದಿದೆ. ನಟಿ ರಶ್ಮಿಕಾ ಮಂದಣ್ಣ ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡ ಹೆಚ್ಚುಗಾರಿಕೆ ರಶ್ಮಿಕಾ ಅವರದ್ದು. ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದ ಅವರು, ಸಂಭಾವನೆಯನ್ನು ಸಂಪೂರ್ಣ ಕ್ಯಾಶ್ ಮೂಲಕವೇ ಪಡೆಯುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಐಟಿ ಶಾಕ್; ವಿರಾಜಪೇಟೆ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ
ರಶ್ಮಿಕಾ ಮನೆಗೆ ವಾಪಾಸದ ಬೆನ್ನಲ್ಲೇ ಐಟಿ ಅಧಿಕಾರಿಗಳನ್ನು ಅವರನ್ನು ಪ್ರಶ್ನಿಸಿದ್ದಾರೆ. ತಡರಾತ್ರಿ 2:30ಕ್ಕೆ ರಶ್ಮಿಕಾ ಮಂದಣ್ಣಗೆ ಐಟಿ ಅಧಿಕಾರಿಗಳು ಪ್ರಶ್ನೆ ಹಾಕಿದ್ದಾರೆ. ಎರಡನೇ ದಿನವೂ ಐಟಿ ಅಧಿಕಾರಿಗಳಿಂದ ಶೋಧ ಮುಂದುವರಿಯಲಿದೆ ಎನ್ನಲಾಗಿದೆ. ಇನ್ನು, ಸಂಜೆಯವರೆಗೆ ಎಲ್ಲಿಗೂ ತೆರಳದಂತೆ ಐಟಿ ಅಧಿಕಾರಿಗಳು ರಶ್ಮಿಕಾಗೆ ತಾಕೀತು ಮಾಡಿದ್ದಾರೆ.
ಇತ್ತೀಚೆಗೆ ನಟ ಶಿವರಾಜ್, ಯಶ್, ಪುನೀತ್ ರಾಜ್ ಕುಮಾರ್ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಇದೀಗ ನಟಿ ರಶ್ಮಿಕಾ ಮಂದಣ್ಣ ಮನೆಯ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
First published:
January 17, 2020, 8:05 AM IST