• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ದೆಹಲಿಯಿಂದ ಮೀರತ್​ಗೆ ಈಗ 45 ನಿಮಿಷಗಳಲ್ಲಿ ಪ್ರಯಾಣ ಸಾಧ್ಯ; ಇಂದಿನಿಂದ ಸಂಚಾರಕ್ಕೆ ಮುಕ್ತವಾದ ಎಕ್ಸ್​ಪ್ರೆಸ್ ಹೈವೇ

ದೆಹಲಿಯಿಂದ ಮೀರತ್​ಗೆ ಈಗ 45 ನಿಮಿಷಗಳಲ್ಲಿ ಪ್ರಯಾಣ ಸಾಧ್ಯ; ಇಂದಿನಿಂದ ಸಂಚಾರಕ್ಕೆ ಮುಕ್ತವಾದ ಎಕ್ಸ್​ಪ್ರೆಸ್ ಹೈವೇ

ದೆಹಲಿ-ಮೀರತ್ ಎಕ್ಸ್​ಪ್ರೆಸ್ ಹೈವೇ

ದೆಹಲಿ-ಮೀರತ್ ಎಕ್ಸ್​ಪ್ರೆಸ್ ಹೈವೇ

22 ಹಸಿರು ಹೆದ್ದಾರಿ ಕಾರಿಡಾರ್‌ಗಳಲ್ಲಿ, ದೆಹಲಿ- ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿ ಹೊಸ ಜೋಡಣೆಯ ಮೂಲಕ ಎರಡೂ ಮಹಾನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಾರಿನ ಮೂಲಕ 12 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ ಎಂದು ಗಡ್ಕರಿ ಅವರು ಹೇಳಿದರು.

  • Share this:

ನವದೆಹಲಿ: ದೆಹಲಿಯಿಂದ- ಮೀರತ್ ಪ್ರಯಾಣದ ಅವಧಿ ಈಗ ಕಡಿಮೆಯಾಗಲಿದೆ. ದೆಹಲಿ-ಮೀರತ್ ಎಕ್ಸ್​ಪ್ರೆಸ್ ಹೈವೇ ಇಂದು ಉದ್ಘಾಟನೆಯಾಗಿದ್ದು, ಪ್ರಯಾಣಿಕರು ಈಗ ಗಂಟೆಯೊಳಗೆ ಪ್ರಯಾಣ ಬೆಳೆಸಬಹುದಾಗಿದೆ. ಪ್ರಸ್ತುತ ದೆಹಲಿಯಿಂದ ಮೀರತ್​ಗೆ ಪ್ರಯಾಣ ಬೆಳೆಸಲು 2.5 ಗಂಟೆ ಸಮಯ ತಗುಲುತ್ತಿತ್ತು. ಇದೀಗ ಎಕ್ಸ್​ಪ್ರೆಸ್ ಹೈವೇಯಿಂದಾಗಿ ಈ ಸಮಯ ಕೇವಲ 45 ನಿಮಿಷಕ್ಕೆ ಇಳಿದಿದೆ. ಈ ವಿಷಯವಾಗಿ ಮಾತನಾಡಿರುವ ರಸ್ತೆ ಮತ್ತು ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ದೆಹಲಿಯಿಂದ ಮೀರತ್​ವರೆಗೆ ಪ್ರಯಾಣದ ಅವಧಿ ಕಡಿಮೆ ಮಾಡುತ್ತೇವೆ ಎಂಬ ನಮ್ಮ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.


ದೆಹಲಿ- ಮೀರತ್ ಎಕ್ಸ್​ಪ್ರೆಸ್ ಹೈವೇ ಈಗ ಸಂಪೂರ್ಣವಾಗಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ದೆಹಲಿ- ಮೀರತ್ ಸಂಚಾರದ ಅವಧಿಯನ್ನು 2.5 ಗಂಟೆಯಿಂದ 45 ನಿಮಿಷಕ್ಕೆ ಇಳಿಸುವುದಾಗಿ ಭರವಸೆ ನೀಡಿದ್ದೇವು. ಅದರಂತೆ ಈಗ ನಮ್ಮ ಭರವಸೆ ಈಡೇರಿಸಿದ್ದೇವೆ ಎಂದು ನಿತಿನ್ ಗಡ್ಕರಿ ಟ್ವೀಟ್​ ಮಾಡಿ ತಿಳಿಸಿದ್ದಾರೆ.

 96 ಕಿ.ಮೀ. ಉದ್ದದ 14 ಪಥದ ಎಕ್ಸ್​ಪ್ರೆಸ್ ಹೈವೇ ಮೀರತ್ ಮತ್ತು ದೆಹಲಿ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಿದ್ದು, ಈಗ ಕೇವಲ 45 ನಿಮಿಷದಲ್ಲಿ ಈ ಸ್ಥಳಕ್ಕೆ ತಲುಪಬಹುದಾಗಿದೆ. ಪ್ರಸ್ತುತ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ 58ರ ಮೂಲಕ ಸಂಚಾರ ಮಾಡಿ ದೆಹಲಿ ತಲುಪುತ್ತಿದ್ದರು. ಈ ಮಾರ್ಗದಲ್ಲಿ 70 ಕಿ.ಮೀ. ಸಂಚರಿಸಲು ಬರೋಬ್ಬರಿ 3 ಗಂಟೆ ಸಮಯ ಹಿಡಿಯುತ್ತಿತ್ತು. ಈ ಎಕ್ಸ್​ಪ್ರೆಸ್​ ಹೈವೇ ಮುಜಾಫರ್​ನಗರ, ಶಹರಾನ್​ಪುರ, ಹರಿದ್ವಾರ ಹಾಗೂ ಡೆಹ್ರಾಡೂನ್​ನಿಂದ ದೆಹಲಿಗೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಿದೆ.


1300 ಕಿ.ಮೀ. ಬಹುಉದ್ದದ ದೆಹಲಿ- ಮುಂಬೈ ಇ-ಹೈವೇ ಪ್ರತ್ಯೇಕ ನಿರ್ಮಾಣಕ್ಕೂ ಸರ್ಕಾರ ಪ್ರಯತ್ನಿಸುತ್ತಿದೆ. ಈ ಹೈವೇಯಲ್ಲಿ ಬಸ್ಸುಗಳು ಹಾಗೂ ಟ್ರಕ್ಕುಗಳು ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸುವಂತಹ ಸುಧಾರಿತ ಹೆದ್ದಾರಿ ನಿರ್ಮಾಣಕ್ಕೆ ಚಿಂತಿಸಲಾಗುತ್ತಿದೆ ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕಳೆದ ವಾರ ಹೇಳಿದ್ದರು.


ಇದನ್ನು ಓದಿ: Coronavirus Vaccine: ಇಂದಿನಿಂದ 45 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೊರೋನಾ ಲಸಿಕೆ ಲಭ್ಯ

ಆಧುನಿಕ ತಂತ್ರಜ್ಞಾನದ ಮೂಲಕ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರವು 7 ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದೆ. ಇದರಿಂದಾಗಿ ಸ್ಮಾರ್ಟ್ ಸಾರಿಗೆ ಮತ್ತು ಮಾಲಿನ್ಯ ಕಡಿಮೆಯಾಗುತ್ತದೆ. ಈ ಪೈಕಿ ದೆಹಲಿ- ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿ ಒಂದು ವರ್ಷದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.




ಪ್ರಧಾನಮಂತ್ರಿ ಮೋದಿ ಅವರು 111 ಲಕ್ಷ ಕೋಟಿ ರೂ.ಗಳ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಗುರಿಯನ್ನು ಹೊಂದಿದ್ದಾರೆ ಮತ್ತು ಇದು ಹಸಿರು ವಿಧಾನವನ್ನು ಅಳವಡಿಸಿಕೊಳ್ಳಲು ಮತ್ತು "ವಿನಾಶವಿಲ್ಲದೆ ಅಭಿವೃದ್ಧಿ" ಮಾಡಲು ಕೇಂದ್ರ ಸರ್ಕಾರದ ಪ್ರಯತ್ನವಾಗಿದೆ ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 22 ಹಸಿರು ಹೆದ್ದಾರಿ ಕಾರಿಡಾರ್‌ಗಳಲ್ಲಿ, ದೆಹಲಿ- ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿ ಹೊಸ ಜೋಡಣೆಯ ಮೂಲಕ ಎರಡೂ ಮಹಾನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಾರಿನ ಮೂಲಕ 12 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ ಎಂದು ಗಡ್ಕರಿ ಅವರು ಹೇಳಿದರು.

top videos
    First published: