ಎಸ್ಸಿ ಸಮುದಾಯಗಳನ್ನ ದಲಿತರೆಂದು ಕರೆಯದಂತೆ ಸರಕಾರ ಹೊರಡಿಸಿದ ಸುತ್ತೋಲೆಗೆ ಸಚಿವರಿಂದಲೇ ಆಕ್ಷೇಪ


Updated:September 4, 2018, 12:57 PM IST
ಎಸ್ಸಿ ಸಮುದಾಯಗಳನ್ನ ದಲಿತರೆಂದು ಕರೆಯದಂತೆ ಸರಕಾರ ಹೊರಡಿಸಿದ ಸುತ್ತೋಲೆಗೆ ಸಚಿವರಿಂದಲೇ ಆಕ್ಷೇಪ
ರಾಮದಾಸ್ ಅಥಾವಳೆ

Updated: September 4, 2018, 12:57 PM IST
- ಈರಂ ಆಘಾ, ನ್ಯೂಸ್18

ನವದೆಹಲಿ(ಸೆ. 04): ಪರಿಶಿಷ್ಟ ಜಾತಿಯ ಸಮುದಾಯಗಳನ್ನ ದಲಿತರೆಂದು ಸಂಬೋಧಿಸಬಾರದೆಂದು ಸುದ್ದಿ ವಾಹಿನಿಗಳಿಗೆ ಕೇಂದ್ರದ ಐಬಿ ಸಚಿವಾಲಯವು ನಿರ್ದೇಶನ ಹೊರಡಿಸಿರುವುದು ಈಗ ಚರ್ಚೆಯ ವಿಷಯವಾಗಿದೆ. ಕೇಂದ್ರ ಸರಕಾರದ ಈ ಕ್ರಮಕ್ಕೆ ಸಂಪುಟದಿಂದಲೇ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಥಾವಳೆ ಹಾಗೂ ಕೆಲ ಬಿಜೆಪಿ ಮುಖಂಡರೂ ಸರಕಾರದ ಸುತ್ತೋಲೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದಲಿತ ಎಂದರೆ ಕೇವಲ ಪರಿಶಿಷ್ಟ ಜಾತಿ ಮಾತ್ರವಲ್ಲ. ಸಮಾಜದಲ್ಲಿ ದಮಿನಿತ ಸಮುದಾಯಗಳೆಲ್ಲರನ್ನೂ ದಲಿತರೆಂದು ಕರೆಯುತ್ತೇವೆ ಎಂಬುದು ಆರ್​ಪಿಐ(ಎ) ಪಕ್ಷದ ಮುಖಂಡ ರಾಮದಾಸ್ ಅಥಾವಳೆ ಅವರ ವಾದವಾಗಿದೆ.

“ದಲಿತ ಪದ ಬಳಕೆಯು ತಪ್ಪು ಎಂದು ಹೈಕೋರ್ಟ್ ಹೇಳುತ್ತಿದೆ. ನ್ಯಾಯಾಲಯದ ಅಭಿಪ್ರಾಯಕ್ಕೆ ನಮ್ಮ ವಿರೋಧವಿದೆ. ದಲಿತ ಪದ ಬಳಕೆಯಿಂದ ಯಾವುದೇ ಅಪಮಾನವಾಗುವುದಿಲ್ಲ,” ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟಿದ್ಧಾರೆ.

ಬಿಜೆಪಿ ಮುಖಂಡ ಉದಿತ್ ರಾಜ್ ಕೂಡ ಅಥಾವಳೆ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ. ದಲಿತ ಪದದ ವ್ಯಾಪ್ತಿ ದೊಡ್ಡದಿದೆ. ಸಾಮಾನ್ಯ ಬಳಕೆಯಲ್ಲೂ ದಲಿತ ಪದವಿದೆ. ಅದನ್ನು ಹಾಗೆಯೇ ಬಳಕೆಯಲ್ಲಿ ಬಿಡುವುದು ಒಳ್ಳೆಯದು. ದಲಿತ ಪದ ಬಳಕೆಯಿಂದ ದಮನಿತರಿಗೆ ಹೋರಾಟ ಮಾಡಲು ಸ್ಫೂರ್ತಿ ಸಿಗುತ್ತದೆ ಎಂದು ಉದಿತ್ ರಾಜ್ ಅವರು ದಲಿತ ಪದ ಬಳಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಯಾಕೆ ದಲಿತ ಪದ ಬೇಡ?
ಮಧ್ಯಪ್ರದೇಶದ ಪ್ರಕರಣವೊಂದರ ಸಂಬಂಧ ಜನವರಿಯಂದು ಉಚ್ಚ ನ್ಯಾಯಾಲಯವು ದಲಿತ ಪದ ಬದಲು ಸಂವಿಧಾನದಲ್ಲಿರುವಂತೆ ಶೆಡ್ಯೂಲ್ ಕ್ಯಾಸ್ಟ್ ಎಂಬ ಪದವನ್ನೇ ಬಳಕೆ ಮಾಡಬೇಕೆಂದು ತಾಕೀತು ಮಾಡಿತ್ತು. ಅದೇ ಆಧಾರವಾಗಿಟ್ಟುಕೊಂಡು ಕೇಂದ್ರ ಮಾಹಿತಿ ಮತ್ತು ಪ್ರಸರಣ ಇಲಾಖೆಯು ಇತ್ತೀಚೆಗೆ ಸುದ್ದಿ ಮಾಧ್ಯಮಗಳಿಗೆ ಸುತ್ತೋಲೆ ಹೊರಡಿಸಿ, ದಲಿತ ಪದ ಬಳಕೆಗೆ ನಿರ್ಬಂಧ ಹಾಕಿತ್ತು.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ