National Anthem: ಮದರಸಾಗಳಲ್ಲಿ ಮೊಳಗಲಿದೆ "ಜನ ಗಣ ಮನ"! ರಾಷ್ಟ್ರಗೀತೆ ಕಡ್ಡಾಯ ಮಾಡಿ ಸರ್ಕಾರ ಆದೇಶ

ಇಲ್ಲಿಯವರೆಗೆ ಮದರಸಾಗಳಲ್ಲಿ ಸಾಮಾನ್ಯವಾಗಿ ಅಲ್ಲಾನಿಗೆ ಹೊಗಳಿಕೆಗಳನ್ನು ತಿಳಿಸುವ ಹಮ್ದ್ ಮತ್ತು ಮುಹಮ್ಮದ್  ಪೈಗಂಬರ್ ಅವರ ಶುಭಾಶಯಗಳನ್ನು ತಿಳಿಸುವ ಸಲಾಂಗಳನ್ನು ತರಗತಿಗಳು ಪ್ರಾರಂಭವಾಗುವ ಮೊದಲು ಓದಲಾಗುತ್ತಿತ್ತು. ಇನ್ನು ಕೆಲವೆಡೆ ರಾಷ್ಟ್ರಗೀತೆಯನ್ನೂ ಹಾಡಲಾಗಿದ್ದರೂ ಕಡ್ಡಾಯವಾಗಿರಲಿಲ್ಲ. ಆದರೆ ಈಗ ಅದನ್ನು ಕಡ್ಡಾಯ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತರ ಪ್ರದೇಶ: ಅಕ್ರಮ ಕಟ್ಟಡಗಳ (Illegal buildings) ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ (Bulldozer Operation) ನಡೆಸಿದ್ದ ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಉತ್ತರ ಪ್ರದೇಶ ರಾಜ್ಯ ಸರ್ಕಾರ (Uttar Pradesh State Government) ಇದೀಗ ಮತ್ತೊಂದು ಮಹತ್ವದ ಆದೇಶ (Order) ನೀಡಿದೆ. ಇನ್ನು ಮುಂದೆ ಮದರಸಾಗಳಲ್ಲಿ (Madarasa) ಎಲ್ಲಾ ವಿದ್ಯಾರ್ಥಿಗಳು (Students) ಮತ್ತು ಶಿಕ್ಷಕರು (Teachers) ತರಗತಿಗಳನ್ನು (Class) ಪ್ರಾರಂಭಿಸುವ ಮೊದಲು ರಾಷ್ಟ್ರಗೀತೆಯನ್ನು (National Anthem) ಹಾಡುವುದನ್ನು ಕಡ್ಡಾಯಗೊಳಿಸಿದೆ. ನಿನ್ನೆಯಿಂದಲೇ ಉತ್ತರ ಪ್ರದೇಶ ರಾಜ್ಯಾದ್ಯಂತ ಈ ಆದೇಶ ಜಾರಿಗೆ ಬಂದಿದೆ. ಉತ್ತರ ಪ್ರದೇಶ ಅಲ್ಪಸಂಖ್ಯಾತ ಖಾತೆ ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಈ ಆದೇಶವನ್ನು ಹೊರಡಿಸಿದ್ದಾರೆ. ಮಾರ್ಚ್ 24 ರಂದು ನಡೆದ ಯುಪಿ ಮದರಸಾ ಶಿಕ್ಷಣ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅನುಷ್ಠಾನದ ಆದೇಶವನ್ನು ಮೇ 9 ರಂದು ಅಂಗೀಕರಿಸಲಾಗಿತ್ತು.

ಮದರಸಾಗಳಲ್ಲಿ ಮೊಳಗಲಿದೆ ಜನಗಣಮನ

ಈ ಆದೇಶದ ಪ್ರಕಾರ, ಶಾಲೆಗಳು ರಾಷ್ಟ್ರಗೀತೆಯಾದ "ಜನ ಗಣ ಮನ" ಜೊತೆಗೆ ಹಿಂದೆ ಹಾಡಿದ ಧಾರ್ಮಿಕ ಪ್ರಾರ್ಥನೆಗಳೊಂದಿಗೆ ಮುಂದುವರಿಯುತ್ತದೆ. ರಂಜಾನ್ ಪ್ರಯುಕ್ತ ಮಾರ್ಚ್ 30ರಿಂದ ಮೇ 11ರವರೆಗೆ ಮದರಸಾಗಳನ್ನು ಮುಚ್ಚಲಾಗಿತ್ತು. ಗುರುವಾರ, ಮೇ 12 ರಂದು ಶಾಲೆಗಳು ಪುನರಾರಂಭವಾಗಿದ್ದು, ನಿನ್ನೆಯಿಂದಲೇ ಈ ಆದೇಶವನ್ನು ಜಾರಿಗೊಳಿಸಲಾಗಿದೆ. ಈ ಆದೇಶವು ಎಲ್ಲಾ ಮಾನ್ಯತೆ ಪಡೆದ, ಅನುದಾನಿತ ಮತ್ತು ಅನುದಾನ ರಹಿತ ಮದರಸಾಗಳಿಗೆ ಅನ್ವಯಿಸುತ್ತದೆ.

5 ವರ್ಷಗಳ ಬಳಿಕ ಮತ್ತೊಂದು ಮಹತ್ವದ ನಿರ್ಧಾರ

ಈ ಹಿಂದೆ ಉತ್ತರ ಪ್ರದೇಶ ಮದರಸಾ ಮಂಡಳಿಯು 2017ರಲ್ಲಿ ಸ್ವಾತಂತ್ರ್ಯ ದಿನದಂದು ರಾಷ್ಟ್ರಗೀತೆ ಮತ್ತು ಧ್ವಜಾರೋಹಣವನ್ನು ಕಡ್ಡಾಯಗೊಳಿಸಿದ ಆದೇಶ ನೀಡಿತ್ತು. ಅದಾದ ಸುಮಾರು ಐದು ವರ್ಷಗಳ ನಂತರ ಈ ನಿರ್ಧಾರವು ಹೊರಬಿದ್ದಿದೆ.

ಇದನ್ನೂ ಓದಿ: Taj Mahal: ಎಲ್ಲ ಪ್ರಸಿದ್ಧ ತಾಣಗಳ ಹಿಂದಿಕ್ಕಿ ತಾಜ್ ಮಹಲ್ ನಂಬರ್ 1

ಎಲ್ಲಾ ಮದರಸಾಗಳಿಗೆ ಸೂಚನೆ

ಈ ಕುರಿತು ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯ ರಿಜಿಸ್ಟ್ರಾರ್ ಎಸ್.ಎನ್.ಪಾಂಡೆ ಅವರು ಮೇ 9ರಂದು ಎಲ್ಲ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದು, ಮಾ.24ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪಾಂಡೆ ಆದೇಶದಲ್ಲಿ ತಿಳಿಸಿದ್ದಾರೆ. ಹೊಸ ಶೈಕ್ಷಣಿಕ ಅಧಿವೇಶನದಿಂದ ಎಲ್ಲಾ ಮದರಸಾಗಳಲ್ಲಿ ಪ್ರಾರ್ಥನೆಯ ಸಮಯದಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಲಾಗಿದೆ.

ಮದರಸಾಗಳಿಗೆ ಅಧಿಕಾರಿಗಳು ವಿಸಿಟ್

ಬೆಳಗ್ಗೆ ತರಗತಿ ಆರಂಭವಾಗುವ ಮುನ್ನ ರಾಷ್ಟ್ರಗೀತೆಯನ್ನು ನುಡಿಸಲಾಗುವುದು. ಆದೇಶದ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ.

ಧಾರ್ಮಿಕ ಗೀತೆಗಳ ಜೊತೆಗೆ ರಾಷ್ಟ್ರಗೀತೆ ಕಡ್ಡಾಯ

ಇಲ್ಲಿಯವರೆಗೆ ಮದರಸಾಗಳಲ್ಲಿ ಸಾಮಾನ್ಯವಾಗಿ ಅಲ್ಲಾನಿಗೆ ಹೊಗಳಿಕೆಗಳನ್ನು ತಿಳಿಸುವ ಹಮ್ದ್ ಮತ್ತು ಮುಹಮ್ಮದ್  ಪೈಗಂಬರ್ ಅವರ ಶುಭಾಶಯಗಳನ್ನು ತಿಳಿಸುವ ಸಲಾಂಗಳನ್ನು ತರಗತಿಗಳು ಪ್ರಾರಂಭವಾಗುವ ಮೊದಲು ಓದಲಾಗುತ್ತಿತ್ತು. ಇನ್ನು ಕೆಲವೆಡೆ ರಾಷ್ಟ್ರಗೀತೆಯನ್ನೂ ಹಾಡಲಾಗಿದ್ದರೂ ಕಡ್ಡಾಯವಾಗಿರಲಿಲ್ಲ. ಆದರೆ ಈಗ ಅದನ್ನು ಕಡ್ಡಾಯ ಮಾಡಲಾಗಿದೆ.

ಇದನ್ನೂ ಓದಿ: Ranil Wickremesinghe: ಶ್ರೀಲಂಕಾ ಪ್ರಧಾನಿಯಾಗಿ ರನಿಲ್ ವಿಕ್ರಮ ಸಿಂಘೆ, ಇನ್ನಾದ್ರೂ ಸುಧಾರಿಸುತ್ತಾ ದ್ವೀಪರಾಷ್ಟ್ರದ ಆರ್ಥಿಕತೆ?

ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಧರಂಪಾಲ್ ಸಿಂಗ್ ಅವರು ಕಳೆದ ತಿಂಗಳು ಮದರಸಾಗಳಲ್ಲಿ ರಾಷ್ಟ್ರೀಯತೆಯನ್ನು ಕಲಿಸಲು ಒತ್ತು ನೀಡಿದ್ದರು. ಮದರಸಾದ ವಿದ್ಯಾರ್ಥಿಗಳು ದೇಶಭಕ್ತಿಯ ಮನೋಭಾವದಿಂದ ತುಂಬಬೇಕೆಂದು ಸರ್ಕಾರ ಬಯಸುತ್ತದೆ ಎಂದು ಇಲಾಖೆಯ ಎಂಒಎಸ್ ಡ್ಯಾನಿಶ್ ಆಜಾದ್ ಅನ್ಸಾರಿ ಹೇಳಿದ್ದಾರೆ. ಪ್ರಸ್ತುತ, ಉತ್ತರ ಪ್ರದೇಶದಲ್ಲಿ ಒಟ್ಟು 16,461 ಮದರಸಾಗಳಿದ್ದು, ಅವುಗಳಲ್ಲಿ 560 ಸರ್ಕಾರದಿಂದ ಅನುದಾನವನ್ನು ಪಡೆಯುತ್ತವೆ.
Published by:Annappa Achari
First published: