HOME » NEWS » National-international » IT IS A SHAME TO BURN MODIS STATUE JP NADDA CRITISIZE AGAINST CONGRESS LEADERS MAK

ಪ್ರಧಾನಿ ಮೋದಿ ಅವರ ಪ್ರತಿಮೆಯನ್ನು ಸುಡುವುದು ನಾಚಿಕೆಗೇಡಿನ ಕೆಲಸ; ಕಾಂಗ್ರೆಸ್​ ವಿರುದ್ಧ ನಡ್ಡಾ ವಾಗ್ದಾಳಿ

ರಾಹುಲ್ ಗಾಂಧಿ ನಿರ್ದೇಶನದ ಮೇರೆಗೆ ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರ ಪ್ರತಿಮೆಯನ್ನು ಸುಡುವ ನಾಟಕ ನಾಚಿಕೆಗೇಡಿನ ಕೆಲಸ. ಆದರೆ ಇದು ಅನಿರೀಕ್ಷಿತವಲ್ಲ. ನೆಹರೂ-ಗಾಂಧಿ ರಾಜವಂಶವು ಪ್ರಧಾನ ಮಂತ್ರಿಯ ಕಚೇರಿಯನ್ನು ಎಂದಿಗೂ ಗೌರವಿಸಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.

news18-kannada
Updated:October 26, 2020, 12:26 PM IST
ಪ್ರಧಾನಿ ಮೋದಿ ಅವರ ಪ್ರತಿಮೆಯನ್ನು ಸುಡುವುದು ನಾಚಿಕೆಗೇಡಿನ ಕೆಲಸ; ಕಾಂಗ್ರೆಸ್​ ವಿರುದ್ಧ ನಡ್ಡಾ ವಾಗ್ದಾಳಿ
ಜೆಪಿ ನಡ್ಡಾ.
  • Share this:
ನವ ದೆಹಲಿ (ಅಕ್ಟೋಬರ್​​ 26); ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ಸುಡುವುದು ನಾಚಿಕೆಗೇಡಿನ ಕೆಲಸ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಇಂದು ಕಿಡಿಕಾರಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಎಲ್ಲೆಡೆ ಮಹಿಷಾಸುರನ ಪ್ರತಿಕೃತಿಯನ್ನು ಸುಟ್ಟು ಸಂಭ್ರಮಿಸುವುದು ವಾಡಿಕೆಯ ಸಂಪ್ರದಾಯ. ಆದರೆ, ಕೇಂದ್ರದ ಇತ್ತೀಚಿನ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ದೇಶದಾದ್ಯಂತ ಉಗ್ರ ಹೋರಾಟ ನಡೆಸುತ್ತಿರುವ ಹಿನ್ನೆಲೆ, ಪಂಜಾಬ್​ನಲ್ಲಿ ನಿನ್ನೆಯ ದಸರಾ ಹಬ್ಬದ ಆಚರಣೆ ವೇಳೆ ಮಹಿಷಾಸುರನ ಪ್ರತಿಮೆಯ ಬದಲಿಗೆ ಪ್ರಧಾನಿ ಮೋದಿ ಅವರ ಪ್ರತಿಮೆಯನ್ನು ಸುಡಲಾಗಿತ್ತು. ಈ ಘಟನೆ ಇದೀಗ ರಾಷ್ಟ್ರಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಂಜಾಬ್​ನಲ್ಲಿರುವ ಕಾಂಗ್ರೆಸ್​ ಸರ್ಕಾರ ಮುಂಚಿನಿಂದಲೂ ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕರೇ ಮುಂದೆ ನಿಂತು ಈ ಕಾರ್ಯವನ್ನು ಎಸಗಿದ್ದಾರೆ ಎಂಬುದು ಬಿಜೆಪಿ ನಾಯಕರ ಆರೋಪ. ಈ ಸಂಬಂಧ ಇಂದು ಸರಣಿ ಟ್ವೀಟ್ ಮಾಡುವ ಮೂಲಕ ಜೆ.ಪಿ. ನಡ್ಡಾ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ವಿರುದ್ಧ ಕಿಡಿಕಾರಿದ್ದಾರೆ.ಈ ಘಟನೆ ಸಂಬಂಧ ಸರಣಿ ಟ್ವೀಟ್​ ಮೂಲಕ ಕಾಂಗ್ರೆಸ್​ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, "ಪ್ರಜಾಪ್ರಭುತ್ವದಲ್ಲಿ ನಿರಾಶೆ ಮತ್ತು ನಾಚಿಕೆಗೇಡು ತನದ ಸಂಯೋಜನೆ ನಿಜಕ್ಕೂ ಅಪಾಯಕಾರಿ. ಒಂದೆಡೆ ತಾಯಿ ಸಭ್ಯತೆ ಪ್ರಜಾಪ್ರಭುತ್ವದ ಮಹತ್ವ ಎಂದು ಖಾಲಿ ವಾಕ್ಚಾತುರ್ಯ ಪ್ರದರ್ಶಿಸುತ್ತಿದ್ದರೆ, ಮತ್ತೊಂದೆಡೆ ಮಗ ದ್ವೇಷ, ಕೋಪ, ಸುಳ್ಳು, ಮತ್ತು ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ. ಕಾಂಗ್ರೆಸ್​ ಪಕ್ಷದಲ್ಲಿ ಈ ಡಬಲ್​ ಸ್ಟ್ಯಾಂಡರ್ಡ್ಸ್ ಸಮೃದ್ಧವಾಗಿದೆ!" ಎಂದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.ಇದೇ ಸಂದರ್ಭದಲ್ಲಿ ಪಂಜಾಬ್​ನಲ್ಲಿ ನಿನ್ನೆ ಪ್ರಧಾನಿ ಮೋದಿ ಅವರ ಪ್ರತಿಕೃತಿಯನ್ನು ದಹಿಸಿದ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ನಡ್ಡಾ, "ರಾಹುಲ್ ಗಾಂಧಿ ನಿರ್ದೇಶನದ ಮೇರೆಗೆ ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರ ಪ್ರತಿಮೆಯನ್ನು ಸುಡುವ ನಾಟಕ ನಾಚಿಕೆಗೇಡಿನ ಕೆಲಸ. ಆದರೆ ಇದು ಅನಿರೀಕ್ಷಿತವಲ್ಲ. ನೆಹರೂ-ಗಾಂಧಿ ರಾಜವಂಶವು ಪ್ರಧಾನ ಮಂತ್ರಿಯ ಕಚೇರಿಯನ್ನು ಎಂದಿಗೂ ಗೌರವಿಸಿಲ್ಲ. 2004-2014ರ ಯುಪಿಎ ಆಡಳಿತಾವಧಿಯಲ್ಲಿ ಪ್ರಧಾನಮಂತ್ರಿಯ ಅಧಿಕಾರವನ್ನು ಸಾಂಸ್ಥಿಕವಾಗಿ ದುರ್ಬಲಗೊಳಿಸುವುದರಲ್ಲಿ ಇದು ಕಂಡುಬಂದಿದೆ" ಎಂದು ಆರೋಪಿಸಿದ್ದಾರೆ."ವರ್ತನೆಯ ಮೂಲಕ ಅಸಹ್ಯವನ್ನು ತೋರುವ ಒಂದು ಪಕ್ಷ ಇದ್ದರೆ, ಅದು ಕಾಂಗ್ರೆಸ್. ಎಸ್‌ಸಿ / ಎಸ್‌ಟಿ ಸಮುದಾಯಗಳ ವಿರುದ್ಧದ ದೌರ್ಜನ್ಯಗಳು ರಾಜಸ್ಥಾನದಲ್ಲಿ ಸಾರ್ವಕಾಲಿಕ ಹೆಚ್ಚಿವೆ. ರಾಜಸ್ಥಾನ ಮತ್ತು ಪಂಜಾಬ್‌ನಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಪಂಜಾಬ್ ನಲ್ಲಿ ಸಚಿವರು ವಿದ್ಯಾರ್ಥಿವೇತನ ಹಗರಣಗಳಲ್ಲಿ ಸಿಲುಕಿಕೊಂಡಿದ್ದಾರೆ.ವಾಕ್ ಸ್ವಾತಂತ್ರ್ಯದ ಮೇಲೆ ಕಾಂಗ್ರೆಸ್ ಎಂದಿಗೂ ಇತರರಿಗೆ ಸಮರ್ಥನೆ ನೀಡಲು ಸಾಧ್ಯವಿಲ್ಲ. ದಶಕಗಳಿಂದ ಭಿನ್ನಾಭಿಪ್ರಾಯದ ಧ್ವನಿಗಳ ಬಗ್ಗೆ ಅವರಿಗೆ ತಿರಸ್ಕಾರವಿದೆ. ತುರ್ತು ಸಂದರ್ಭದಲ್ಲಿನ ದೇಶದ ವಸ್ತುಸ್ಥಿತಿ ನಮಗೆ ಪರಿಚಯವಿದೆ. ನಂತರ, ರಾಜೀವ್ ಗಾಂಧಿ ಸರ್ಕಾರವು ಪತ್ರಿಕಾ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಒಂದು ಲಜ್ಜೆಗೆಟ್ಟ ಪ್ರಯತ್ನ ಮಾಡಿತ್ತು" ಎಂದು ಸರಣಿ ಆರೋಪಗಳನ್ನು ಮಾಡಿದ್ದಾರೆ.ಟ್ವೀಟ್​ ಮೂಲಕ ಮಹಾರಾಷ್ಟ್ರ ಕಾಂಗ್ರೆಸ್​-ಶೀವಸೇನೆ ಮೈತ್ರಿಯನ್ನೂ ಕೆಣಕಿರುವ ಜೆ.ಪಿ. ನಡ್ಡಾ, "ವಿವೇಚನಾರಹಿತ ರಾಜ್ಯ ಅಧಿಕಾರದ ಬಳಕೆ, ವಿರೋಧಿಗಳನ್ನು ತೊಂದರೆಗೊಳಿಸುವುದು ಕಾಂಗ್ರೆಸ್​ ಪಕ್ಷದ ಟ್ರೇಡ್​ ಮಾರ್ಕ್ ಶೈಲಿ​​. ವಾಕ್ ಸ್ವಾತಂತ್ರ್ಯವನ್ನು ತಡೆಯುವ ಪ್ರಯೋಗಾಲಯವನ್ನು ಯಾರಾದರೂ ನೋಡಲು ಬಯಸಿದರೆ ಕಾಂಗ್ರೆಸ್ ಆಶೀರ್ವದಿಸಿದ ಮಹಾರಾಷ್ಟ್ರ ಸರ್ಕಾರದ ಕಾರ್ಯವನ್ನು ನೋಡಿ. ಆಡಳಿತವನ್ನು ಹೊರತುಪಡಿಸಿ ಅಲ್ಲಿ ಉಳಿದೆಲ್ಲಾ ಕೆಲಸಗಳೂ ನಡೆಯುತ್ತಿವೆ.ಬಡತನದಲ್ಲಿ ಜನಿಸಿದ ಮತ್ತು ಪ್ರಧಾನ ಮಂತ್ರಿಯಾದ ವ್ಯಕ್ತಿಯ ವಿರುದ್ಧ ಈ ರಾಜವಂಶದ ಆಳವಾದ ವೈಯಕ್ತಿಕ ದ್ವೇಷವು ಐತಿಹಾಸಿಕವಾಗಿದೆ. ಭಾರತದ ಜನರು ಪ್ರಧಾನ ಮಂತ್ರಿಯ ಮೇಲೆ ತೋರಿಸಿದ ಪ್ರೀತಿಯೂ ಅಷ್ಟೇ ಐತಿಹಾಸಿಕವಾಗಿದೆ. ಇಂತಹ ಘಟನೆಗಳ ಮೂಲಕ ಕಾಂಗ್ರೆಸ್​ ವಿರುದ್ಧ ಜನರ ದ್ವೇಷ ಹೆಚ್ಚುತ್ತದೆ. ಪ್ರಧಾನಿ ಮೋದಿ ಅವರನ್ನು ಜನ ಮತ್ತಷ್ಟು ಬೆಂಬಲಿಸುತ್ತಾರೆ" ಎಂದು ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.
Published by: MAshok Kumar
First published: October 26, 2020, 12:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories