• Home
  • »
  • News
  • »
  • national-international
  • »
  • Car Blast: ಕೊಯಮತ್ತೂರು ಬಳಿ ಸ್ಫೋಟಗೊಂಡ ಕಾರಿನ ಹಿಂದೆ ಉಗ್ರರ ಕೈವಾಡ! ಮೃತನ ಮನೆಯಲ್ಲಿ ಸಿಕ್ಕಿದೆ ಸ್ಫೋಟಕ ಸಾಕ್ಷ್ಯ!

Car Blast: ಕೊಯಮತ್ತೂರು ಬಳಿ ಸ್ಫೋಟಗೊಂಡ ಕಾರಿನ ಹಿಂದೆ ಉಗ್ರರ ಕೈವಾಡ! ಮೃತನ ಮನೆಯಲ್ಲಿ ಸಿಕ್ಕಿದೆ ಸ್ಫೋಟಕ ಸಾಕ್ಷ್ಯ!

ಸ್ಫೋಟಗೊಂಡ ಕಾರು

ಸ್ಫೋಟಗೊಂಡ ಕಾರು

ಈಶ್ವರನ್ ದೇಗುಲವನ್ನು ಉಗ್ರರು ಟಾರ್ಗೆಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಮುಖವಾಗಿ  ಈಶ್ವರನ್ ದೇವಸ್ಥಾನಕ್ಕೆ ಬರೋ ಭಕ್ತರನ್ನೇ ಟಾರ್ಗೆಟ್ ಮಾಡಲಾಗಿರೋ ಶಂಕೆ ವ್ಯಕ್ತವಾಗಿದೆ. ಈಗಾಗ್ಲೇ ಎನ್​ಐಎ ತನಿಖೆಗೆ ಮುಬಿನಾ ಒಳಪಟ್ಟಿದ್ದ ಎನ್ನಲಾಗಿದೆ.

  • News18 Kannada
  • Last Updated :
  • Tamil Nadu, India
  • Share this:

ಕೊಯಮತ್ತೂರು, ತಮಿಳುನಾಡು: ನಿನ್ನೆ ಬೆಳಗ್ಗೆ ತಮಿಳುನಾಡಿನ (Tamil Nadu) ಕೊಯಮತ್ತೂರಿನಲ್ಲಿ (Coimbatore) ಕಾರಿನೊಳಗೆ ಬಾಂಬ್ ಸ್ಫೋಟಗೊಂಡು (Car bomb blast), ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು. ಇದೀಗ ಈ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಭಯೋತ್ಪಾದನಾ (Terrorist) ಕೃತ್ಯ ಎಂದು ಎನ್ಐಎ (NIA) ಶಂಕೆ ವ್ಯಕ್ತಪಡಿಸಿದೆ. ನಿನ್ನೆ ಘಟನೆಯಲ್ಲಿ ಮೃತಪಟ್ಟಿದ್ದ ಮುಬಿನಾ ಎಂಬುವರ ಮನೆಯಲ್ಲಿ ಕೆಲ ಸ್ಫೋಟಕ ವಸ್ತುಗಳು (explosive materials) ಸಿಕ್ಕಿದ್ದು, ಅದನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೊಯಮತ್ತೂರು ಬಳಿಯ ಪೊಲ್ಲಾಚಿ ಉಕ್ಕಡಂ ಪ್ರದೇಶದಲ್ಲಿ ನಿನ್ನೆ ಕಾರು ಸ್ಫೋಟದಿಂದ ಉಕ್ಕಡಂನ ಜಿಎಂ ನಗರ ಸಮೀಪದ ಕೊಟ್ಟೈಪುದೂರಿನ 25 ವರ್ಷದ ಜಮೇಶ ಮುಬಿನ್ ಎಂಬಾತ ಮೃತಪಟ್ಟಿದ್ದ. ಇದೀಗ ಘಟನೆಯ ಹಿಂದೆ ಭಯೋತ್ಪಾದಕ ದಾಳಿ ಶಂಕೆ ವ್ಯಕ್ತವಾಗಿದೆ.


ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ದೃಶ್ಯ


ಕೊಯಮತ್ತೂರಿನಲ್ಲಿ ನಿನ್ನೆ ಮುಂಜಾನೆ 4 ಗಂಟೆ ಸುಮಾರಿಗೆ ಕಾರಿನಲ್ಲಿ ಸ್ಫೋಟಗೊಂಡಿತ್ತು. ಉಕ್ಕಡಂ ಪ್ರದೇಶದಲ್ಲಿರೋ ಈಶ್ವರನ್ ದೇಗುಲದ ಬಳಿ ಕಾರಿನಲ್ಲಿದ್ದ LPG ಸಿಲಿಂಡರ್ ಸ್ಫೋಟಗೊಂಡಿತ್ತು.  ಕೊಟ್ಟಾಯಿ ಈಶ್ವರನ್ ದೇಗುಲದ ಬಳಿ ಸ್ಫೋಟಗೊಂಡು, ಜಮೀಶಾ ಮುಬೀನ್​ ಎಂಬಾತ ಮೃತಪಟ್ಟಿದ್ದ. ಬಳಿಕ ಇದೊಂದು ಅಪಘಾತ ಎಂಬ ಭಾವನೆ ಬರುವಂತೆ ಬಿಂಬಿಸಲಾಗಿತ್ತು. ಇದೀಗ ತನಿಖೆ ಬಳಿಕ ಭಯಾನಕ ಮಾಹಿತಿ ಬಹಿರಂಗವಾಗಿದೆ. ಮುಬೀನ್ ಸಿಲಿಂಡರ್ ಲೋಡ್ ಮಾಡ್ತಿರೋ ದೃಶ್ಯ ಲಭ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ


ಸ್ಫೋಟ ನಡೆದ ಸ್ಥಳದಲ್ಲಿ ಅನುಮಾನಾಸ್ಪದ ವಸ್ತು


ನಿನ್ನೆ ಸ್ಫೋಟ ನಡೆದ ಸ್ಥಳದಲ್ಲಿ ಕೆಲವು ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ನೈಟ್ರೇಟ್, ಸಲ್ಫರ್‌, ಬಾಲ್​ ಬೇರಿಂಗ್​ನಂತಹ ವಸ್ತುಗಳು ಸಿಕ್ಕಿವೆ. ಕೊಯಮತ್ತೂರು ಸ್ಫೋಟ ಉಗ್ರ ಕೃತ್ಯ ಫಿದಾಯೀನ್​ಗಳಿಂದ ನಡೆದ ಕೃತ್ಯ ಪೊಟ್ಯಾಷಿಯಂ ನೈಟ್ರೇಟ್, ಸಲ್ಫರ್ ಪತ್ತೆ ಮುಬೀನ್ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ.


ಇದನ್ನೂ ಓದಿ: Madhya Pradesh High Court: ಅತ್ಯಾಚಾರ ಮಾಡಿದ್ದಾನೆ, ಆದರೆ ಕೊಂದಿಲ್ಲ! ಆರೋಪಿಯ ಶಿಕ್ಷೆ ಕಡಿತಗೊಳಿಸಿದ ನ್ಯಾಯಪೀಠ!


ಮಂದಿರವನ್ನು ಟಾರ್ಗೆಟ್ ಮಾಡಲಾಗಿತ್ತಾ?


ಈಶ್ವರನ್ ದೇಗುಲವನ್ನು ಉಗ್ರರು ಟಾರ್ಗೆಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಮುಖವಾಗಿ  ಈಶ್ವರನ್ ದೇವಸ್ಥಾನಕ್ಕೆ ಬರೋ ಭಕ್ತರನ್ನೇ ಟಾರ್ಗೆಟ್ ಮಾಡಲಾಗಿರೋ ಶಂಕೆ ವ್ಯಕ್ತವಾಗಿದೆ. ಈಗಾಗ್ಲೇ ಎನ್​ಐಎ ತನಿಖೆಗೆ ಮುಬಿನಾ ಒಳಪಟ್ಟಿದ್ದ ಎನ್ನಲಾಗಿದೆ.


ಮುಬಿನ್ ಮೊಬೈಲ್‌ನಲ್ಲಿ ಸಿಕ್ಕಿದೆ ಸಾಕ್ಷ್ಯ!


ಇನ್ನು ನಿನ್ನೆ ಮೃತಪಟ್ಟ ಮುಬೀನ್ ಮೊಬೈಲ್​ನಲ್ಲಿ ಅನುಮಾನಾಸ್ಪದ ಮೆಸೇಜ್ ಸಿಕ್ಕಿದೆ. ಇದು ಆತ್ಮಹತ್ಯಾ ದಾಳಿಗೆ ಸಾಕ್ಷ್ಯ ನೀಡುತ್ತಿದೆ. ನಾನು ಮೃತಪಟ್ಟರೆ ನನ್ನ ತಪ್ಪುಗಳನ್ನು ಕ್ಷಮಿಸಿ ನನ್ನ ಅಂತಿಮಯಾತ್ರೆಯಲ್ಲಿ ಪಾಲ್ಗೊಳ್ಳಿ ಅಂತ ಆತ ಮೊಬೈಲ್‌ನಲ್ಲಿ ಬರೆದುಕೊಂಡಿದ್ದ.


ಸ್ಫೋಟ ಸ್ಥಳದಲ್ಲಿ ಏನೇನು ಸಿಕ್ಕಿದೆ


ಸ್ಫೋಟದ ಸ್ಥಳದಲ್ಲಿ 2 ಗ್ಯಾಸ್ ಸಿಲಿಂಡರ್, ಮಾರ್ಬಲ್​ಗಳು, ಮೊಳೆಗಳು, ಬೇರಿಂಗ್ ಬಾಲ್​​ಗಳು, ಓರ್ವನ ಮೃತದೇಹ  ಸಿಕ್ಕಿದೆ. ಇನ್ನು ದೇಗುಲದ ಮುಂಭಾಗ ಸ್ವಲ್ಪ ಹಾನಿಯಾಗಿದ್ದು, ಕಾರಿನಲ್ಲಿದ್ದಾತ ಸಾವನ್ನಪ್ಪಿದ್ದಾನೆ.


ಈ ಮುಬಿನ್ ಯಾರು?


ಈ ಮುಬಿನ್ ಈ ಹಿಂದೆ ಎನ್ಐಎನಿಂದ ತನಿಖೆಗೆಗೆ ಒಳಪಟ್ಟಿದ್ದ. ಮುಬಿನ್ 2019ರ ಶ್ರೀಲಂಕಾ ಚರ್ಚ್ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆದಿತ್ತು. ಆದ್ರೆ ಸಾಕ್ಷ್ಯಾಧಾರ ಕೊರತೆಯಿಂದ ಬಿಡುಗಡೆಯಾಗಿದ್ದ ಈ ಮಾಹಿತಿ ಬಹಿರಂಗವಾಗುತ್ತಲೇ ಆತನ ಮನೆ ಮೇಲೆ ದಾಳಿ ನಡೆದಿತ್ತು. ಪೊಲೀಸರ ದಾಳಿ ವೇಳೆ ಪೊಟ್ಯಾಶಿಯಂ ನೈಟ್ರೇಟ್, ಅಲ್ಯೂಮಿನಿಯಂ ಪೌಡರ್, ಸಲ್ಫರ್​, ಚಾರ್ಕೋಲ್ , ಸ್ಫೋಟಕ್ಕೆ ಬಳಕೆಯಾಗುವ ರಾಸಾಯನಿಕಗಳು ಪತ್ತೆಯಾಗಿವೆ.


ಇದನ್ನೂ ಓದಿ: Mercy Killing: ಮಲಮಗನಿಂದ ಅತ್ಯಾಚಾರ, ಗರ್ಭಿಣಿಯಾದ ಮಲತಾಯಿ! ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಪತ್ರ


 ಇದು ಉಗ್ರರೇ ನಡೆಸಿರುವ ಕೃತ್ಯ?


ಈ ನಡುವೆ ಕಾರು ಸ್ಫೋಟದಲ್ಲಿ ಮೃತಪಟ್ಟ ಯುವಕನಿಗೆ ಐಸಿಸ್ ಸಂಪರ್ಕವಿದೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಹೇಳಿದ್ದಾರೆ. ಕೊಯಮತ್ತೂರಿನ ಕಾರಿನ ಸ್ಫೋಟವು ಸಿಲಿಂಡರ್ ಸ್ಪೋಟದಿಂದ ನಡೆದಿಲ್ಲ. ಇದು ಐಸಿಸ್ ಲಿಂಕ್‌ಗಳೊಂದಿಗೆ ನಡೆದ ಭಯೋತ್ಪಾದಕ ಕೃತ್ಯವಾಗಿದೆ ಎಂದು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ತಿಳಿಸಿದ್ದಾರೆ.

Published by:Annappa Achari
First published: