• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Ahmed Patel: ಮೋದಿ ಸರ್ಕಾರ ಉರುಳಿಸಲು ಪ್ಲಾನ್ ಮಾಡಿದ್ದರಾ ಅಹ್ಮದ್ ಪಟೇಲ್? ಎಸ್‌ಐಟಿ ಅಫಿಡವಿಟ್ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಫೈಟ್

Ahmed Patel: ಮೋದಿ ಸರ್ಕಾರ ಉರುಳಿಸಲು ಪ್ಲಾನ್ ಮಾಡಿದ್ದರಾ ಅಹ್ಮದ್ ಪಟೇಲ್? ಎಸ್‌ಐಟಿ ಅಫಿಡವಿಟ್ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಫೈಟ್

ಕಾಂಗ್ರೆಸ್ ನಾಯಕ ದಿ. ಅಹ್ಮದ್ ಪಟೇಲ್

ಕಾಂಗ್ರೆಸ್ ನಾಯಕ ದಿ. ಅಹ್ಮದ್ ಪಟೇಲ್

ಅಂದಿನ ಮೋದಿ ನೇತೃತ್ವದ ಗುಜರಾತ್ ರಾಜ್ಯ ಬಿಜೆಪಿ ಸರ್ಕಾರ ಉರುಳಿಸಲು ಕಾಂಗ್ರೆಸ್ ನಾಯಕ (Congress Leader), ದಿ. ಅಹ್ಮದ್ ಪಟೇಲ್ (Late Ahmed Patel) ಅವರು ತೀವ್ರ ತಂತ್ರ ರೂಪಿಸಿದ್ದರು ಅಂತ ಎಸ್ಐಟಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರ ಈಗ ಕಾಂಗ್ರೆಸ್ (Congress) ಹಾಗೂ ಬಿಜೆಪಿ ನಾಯಕರ (BJP Leaders) ನಡುವೆ ಘರ್ಷಣೆಗೆ ಕಾರಣವಾಗಿದೆ.

ಮುಂದೆ ಓದಿ ...
  • Share this:

ಗುಜರಾತ್: 200ರ ಗುಜರಾತ್‌ ಗಲಭೆಯ (Gujarat Riots) ಬಳಿಕ ಅಂದು ರಾಜ್ಯದಲ್ಲಿದ್ದ ನರೇಂದ್ರ ಮೋದಿ ಸರ್ಕಾರವನ್ನು (Narendra Modi Government) ಉರುಳಿಸಲು ಕಾಂಗ್ರೆಸ್ (Congress) ತಂತ್ರ (Plan) ರೂಪಿಸಿತ್ತಾ? ಇಂಥದ್ದೊಂದು ಚರ್ಚೆ ಇದೀಗ ದೇಶದ ರಾಜಕೀಯ ವಲಯದಲ್ಲಿ ಶುರುವಾಗಿದೆ. ಅದಕ್ಕೆ ಕಾರಣ ಗುಜರಾತ್‌ ಪೊಲೀಸ್‌ ಇಲಾಖೆಯ (Police Department) ವಿಶೇಷ ತನಿಖಾ ತಂಡವು (SIT) ಸೆಷನ್ಸ್ ನ್ಯಾಯಾಲಯಕ್ಕೆ (Sessions Court) ಸಲ್ಲಿಸಿದ ಪ್ರಮಾಣಪತ್ರ. ಅಂದಿನ ಮೋದಿ ನೇತೃತ್ವದ ರಾಜ್ಯ ಬಿಜೆಪಿ (BJP) ಸರ್ಕಾರ ಉರುಳಿಸಲು ಕಾಂಗ್ರೆಸ್ ನಾಯಕ (Congress Leader), ದಿ. ಅಹ್ಮದ್ ಪಟೇಲ್ (Late Ahmed Patel) ಅವರು ತೀವ್ರ ತಂತ್ರ ರೂಪಿಸಿದ್ದರು ಅಂತ ಅದರಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರ ಈಗ ಕಾಂಗ್ರೆಸ್ (Congress) ಹಾಗೂ ಬಿಜೆಪಿ ನಾಯಕರ (BJP Leaders) ನಡುವೆ ಘರ್ಷಣೆಗೆ ಕಾರಣವಾಗಿದೆ.


ಅಹ್ಮದ್ ಪಟೇಲ್ ಹೆಸರು ಉಲ್ಲೇಖಿಸಿದ ಎಸ್‌ಐಟಿ


2020ರಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟ ಕಾಂಗ್ರೆಸ್ ಹಿರಿಯ ನಾಯಕ, ದಿವಂಗತ ಅಹ್ಮದ್ ಪಟೇಲ್ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. 2002ರ ಗಲಭೆಯ ಬಳಿಕ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರವನ್ನು ಉರುಳಿಸಲು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಅವರು ಪಿತೂರಿ ನಡೆಸಿದ್ದರು. ಕಾಂಗ್ರೆಸ್‌ನ ಮುಖಂಡರಾಗಿದ್ದ ಅಹ್ಮದ್‌ ಪಟೇಲ್‌ ಅವರ ಕುಮ್ಮಕ್ಕು ಈ ಪಿತೂರಿಗೆ ಇತ್ತು ಎಂದು ಗುಜರಾತ್‌ ಪೊಲೀಸ್‌ ಇಲಾಖೆಯ ವಿಶೇಷ ತನಿಖಾ ತಂಡವು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದೆ. ಈಗ ಇದನ್ನು ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯಕ್ಕೆ ಅಫಿಡವಿಟ್ ಆಗಿ ಸಲ್ಲಿಸಲಾಗಿದೆ.


ತೀಸ್ತಾ ಸೆಟಲ್ವಾಡ್‌ಗೆ 30 ಲಕ್ಷ ಕೊಟ್ಟಿದ್ದರಾ ಅಹ್ಮದ್ ಪಟೇಲ್?


ಚುನಾಯಿತ ಸರ್ಕಾರವೊಂದನ್ನು ಉರುಳಿಸುವುದು ಅಥವಾ ಅಸ್ಥಿರಗೊಳಿಸುವುದು ತೀಸ್ತಾ ಸೆಟಲ್‌ವಾಡ್‌ ಅವರ ರಾಜಕೀಯ ಉದ್ದೇಶವಾಗಿತ್ತು ಅಂತ ಎಸ್‌ಐಟಿ ಹೇಳಿದೆ. ಗುಜರಾತ್‌ನ ನಿರಪರಾಧಿ ವ್ಯಕ್ತಿಗಳನ್ನು ಪ್ರಕರಣಗಳಲ್ಲಿ ಸಿಲುಕಿಸುವ ಅವರ ಪ್ರಯತ್ನಕ್ಕೆ ಪ್ರತಿಫಲವಾಗಿ ಪ್ರತಿಸ್ಪರ್ಧಿ ರಾಜಕೀಯ ಪಕ್ಷವು ಹಣಕಾಸು ಮತ್ತು ಇತರ ನೆರವುಗಳನ್ನು ಅಕ್ರಮವಾಗಿ ನೀಡಿತ್ತು. 2002ರ ಗೋಧ್ರಾ ಗಲಭೆಯ ಬಳಿಕ ಅಹ್ಮದ್ ಪಟೇಲ್‌ ಕಡೆಯಿಂದ ತೀಸ್ತಾ ಸೆಟಲ್‌ವಾಡ್‌ ಅವರು 30 ಲಕ್ಷ ರೂಪಾಯಿ ಪಡೆದಿದ್ದರು. ದೆಹಲಿಯಲ್ಲಿ ಆಗ ಅಧಿಕಾರದಲ್ಲಿದ್ದ ಪ್ರಮುಖ ರಾಷ್ಟ್ರೀಯ ಪಕ್ಷದ ಮುಖಂಡರನ್ನು ಸೆಟಲ್‌ವಾಡ್‌ ಭೇಟಿಯಾಗಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.


ಇದನ್ನೂ ಓದಿ: Vice Presidential Election: ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾದ ಜಗದೀಪ್ ಧನಕರ್‌, ವಿಪಕ್ಷಗಳಿಂದ ಹುರಿಯಾಳು ಯಾರು?


ವಿಚಾರಣೆ ನಾಳೆಗೆ ಮುಂದೂಡಿಕೆ


ಗುಜರಾತ್‌ ಗಲಭೆ ಪ್ರಕರಣಗಳಲ್ಲಿ ನಿರಪರಾಧಿಗಳನ್ನು ಸಿಲುಕಿಸಲು ಹುಸಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋಪದ ಮೇಲೆ ತೀಸ್ತಾ ಸೆಟಲ್‌ವಾಡ್‌, ಮಾಜಿ ಐಪಿಎಸ್‌ ಅಧಿಕಾರಿಗಳಾದ ಆರ್‌.ಬಿ.ಶ್ರೀಕುಮಾರ್‌ ಮತ್ತು ಸಂಜೀವ್ ಭಟ್‌ ಅವರನ್ನು ಇತ್ತೀಚೆಗೆ ಬಂಧಿಸಲಾಗಿದೆ. ತೀಸ್ತಾ ಅವರ ಜಾಮೀನು ಅರ್ಜಿಯ ವಿಚಾರಣೆ ನಿನ್ನೆ ನಡೆಯಿತು. ಈ ವೇಳೆ ಜಾಮೀನು ಅರ್ಜಿಯನ್ನು ಎಸ್‌ಐಟಿ ವಿರೋಧಿಸಿದೆ. ಹೀಗಾಗಿ ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.


ಅಹ್ಮದ್ ಪಟೇಲ್ ಕುಟುಂಬಸ್ಥರ ಆಕ್ಷೇಪ


ಎಸ್‌ಐಟಿ ಪ್ರಮಾಣ ಪತ್ರದಲ್ಲಿ ಅಹ್ಮದ್ ಪಟೇಲ್ ಹೆಸರು ಪ್ರಸ್ತಾಪಿಸಿರುವುದುಕ್ಕೆ ಅವರ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಹ್ಮದ್ ಪಟೇಲ್ ಪುತ್ರಿ ಮುಮ್ತಾದ್, ವಿರೋಧ ಪಕ್ಷಗಳಿಗೆ ಮಸಿ ಬಳಿಯುವ ರಾಜಕೀಯ ಷಡ್ಯಂತ್ರಕ್ಕಾಗಿ ನಮ್ಮ ತಂದೆಯ ಹೆಸರು ಬಳಕೆ ಆಗಿರುವುದು ದುರದೃಷ್ಟಕರ ಎಂದಿದ್ದಾರೆ. ಇಷ್ಟು ದೊಡ್ಡ ಪಿತೂರಿ ಮಾಡಿದ್ದಕ್ಕಾಗಿ ನನ್ನ ತಂದೆಯನ್ನು ಕೇಂದ್ರವು 2020ಕ್ಕೆ ಮೊದಲೇ ಏಕೆ ವಿಚಾರಣೆಗೆ ಒಳಪಡಿಸಲಿಲ್ಲ ಅಂತ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Digital Media ಗಳಿಗೂ ಬೀಳುತ್ತೆ ಇನ್ಮುಂದೆ ಮೂಗುದಾರ, ಹೊಸ ಕಾನೂನು ತರಲು ಸಜ್ಜಾದ ಕೇಂದ್ರ ಸರ್ಕಾರ!


 ಕಾಂಗ್ರೆಸ್-ಬಿಜೆಪಿ ಕೆಸರೆರೆಚಾಟ


ಎಸ್ಐಟಿ ಹೇಳಿಕೆ ಈಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಘರ್ಷಣೆಗೆ ಕಾರಣವಾಗಿದೆ. ಇದೊಂದು ಆಧಾರವಿಲ್ಲದ ಆರೋಪ ಅಂತ ಕಾಂಗ್ರೆಸ್ ಟೀಕಿಸಿದೆ. ಸೋನಿಯಾ ಅಣತಿಯಂತೆ ಅಹ್ಮದ್ ಪಟೇಲ್ ಕೆಲಸ ಮಾಡಿದ್ದರು ಅಂತ ಬಿಜೆಪಿ ನಾಯಕರು ಟೀಕಿಸಿದ್ದಾರೆ.

top videos
    First published: