ಕಚೇರಿಗೆ ಬಂದು ಕೆಲಸ ಮಾಡಿ ಎಂದ ಇನ್ಪೋಸಿಸ್​: ಮತ್ತೆ ಬಾಗಿಲು ತೆರೆಯುತ್ತಿದೆ ಐಟಿ ದೈತ್ಯ

ಬಹಳ ತುರ್ತು ಸಂದರ್ಭ ಬಂದ ಕಾರಣ ಕಂಪೆನಿ ಅನಿವಾರ್ಯವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈಗ ದೇಶದ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಕಂಪೆನಿ ತಿಳಿಸಿದೆ.

ಇನ್ಪೋಸಿಸ್

ಇನ್ಪೋಸಿಸ್

 • Share this:
  ಬೆಂಗಳೂರು: ಭಾರತ ಮೂಲದ ಹೊರಗುತ್ತಿಗೆ ದೈತ್ಯ ಸಂಸ್ಥೆ ಇನ್ಫೋಸಿಸ್ ಲಿಮಿಟೆಡ್ ಕಳೆದ ವಾರ ತನ್ನ ನೌಕರರಿಗೆ ಕಚೇರಿಗೆ ಬಂದು ಕೆಲಸವನ್ನು ಆರಂಭಿಸಬಹುದು ತಿಳಿಸಿರುವುದಾಗಿ ವರದಿಯಾಗಿದೆ.  190 ಬಿಲಿಯನ್ ಡಾಲರ್​ನಷ್ಟು ದೊಡ್ಡ ವ್ಯವಹಾರ ಹೊಂದಿರುವ ತಂತ್ರಜ್ಞಾನ ಸೇವಾ ವಲಯವು ಮತ್ತೆ ತನ್ನ ಗತವೈಭವಕ್ಕೆ ಮರಳಲಿದೆ ಎಂದು ಹೇಳಲಾಗುತ್ತಿದೆ.

  ಬೆಂಗಳೂರು ಮೂಲದ ಹಾಗೂ ದೇಶದ ಇತರೆಡೆ ಇರುವ ಐಟಿ ಕಂಪನಿಗಳು ತಮ್ಮ ಎಲ್ಲಾ ಉದ್ಯೋಗಿಗಳಿಗೆ ಕೊರೋನಾ ಕಾರಣದಿಂದ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದ್ದವು. ಅತಿ ದೊಡ್ಡ ವಲಯವಾದ ಇದರಿಂದ ಹೆಚ್ಚಾಗಿ ಕೊರೋನಾ ಹರಡಬಹುದು ಎಂದು ಈ ಕ್ರಮ ಕೈಗೊಳ್ಳಲಾಗಿತ್ತು.


  ದೇಶದ ಮತ್ತೊಂದು ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ ಈ ತಿಂಗಳ ಆರಂಭದಲ್ಲಿ ತನ್ನ ಎಲ್ಲ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಸೆಪ್ಟೆಂಬರ್ ಹೊತ್ತಿಗೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿದೆ.


   ನಾವು ಸೆಪ್ಟೆಂಬರ್​ ಹೊತ್ತಿಗೆ ನಮ್ಮ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವ ಕುರಿತು ಯೋಚಿಸುವುದಾಗಿ ವಿಪ್ರೊ ಕಂಪೆನಿ ಹೇಳಿದೆ.


  ಮೇ ತಿಂಗಳಲ್ಲಿ ಎರಡನೇ ಅಲೆಗೆ ತತ್ತರಿಸಿ ಹೋಗಿದ್ದ ಭಾರತ ಈಗ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಎರಡನೇ ಅಲೆಯಲ್ಲಿ ಹತ್ತನೇ ಒಂದು ಭಾಗದಷ್ಟು ಜನರು ಸೋಂಕಿಗೆ ತುತ್ತಾಗಿದ್ದರು. ಮಂಗಳವಾರದ ವರದಿಯ ಪ್ರಕಾರ ಇಡೀ ದೇಶದಲ್ಲಿ ನಾಲ್ಕು ತಿಂಗಳ ನಂತರ ಕೊರೋನಾ ಸೋಂಕಿನ ಪ್ರಮಾಣ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ಆರೋಗ್ಯ ತಜ್ಞರು ಮೂರನೇ ಅಲೆ ಬರುವ ಸೂಚನೆ ಇದ್ದು ಅದರ ವಿರುದ್ದ ಈಗಲೇ ಸಜ್ಜಾಗಿ ಎಂದು ರಾಜ್ಯ ಸರ್ಕಾರಗಳು ಮತ್ತು ನಾಗರಿಕರಿಗೆ ಮನವಿ ಮಾಡಿದ್ದಾರೆ. ವರ್ಕ್​ ಫ್ರಮ್​ ಹೋಮ್​ ಇದ್ದ ಕಾರಣ ಅನೇಕ ಐಟಿ ಉದ್ಯೋಗಿಗಳು ಸದ್ಯಕ್ಕೆ ತಮ್ಮ, ತಮ್ಮ ಊರುಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ಈಗ ಅನಿವಾರ್ಯವಾಗಿ ಅವರೆಲ್ಲ ಮರಳಿ ಬರಬೇಕಿದೆ.


  ಇನ್ಪೋಸಿಸ್​ ತನ್ನ ಉದ್ಯೋಗಿಗಳಿಗೆ ನೀಡಿರುವ ಸೂಚನೆಯಲ್ಲಿ ಹೀಗೆ ಹೇಳಿದ್ದು ’’ದೇಶವು ಈಗ ಕೊರೋನಾ ಸೊಂಕಿನಿಂದ ಚೇತರಿಸಿಕೊಳ್ಳುತ್ತಿದ್ದು, ವ್ಯಾಕ್ಸಿನೇಷನ್​ ಕೂಡ ಬಹಳ ವೇಗವಾಗಿ ನಡೆಯುತ್ತಿದೆ’’ ಈ ಮೆಮೋ ಕುರಿತು ರಾಯಿಟರ್ಸ್​ ಸುದ್ದಿ ಸಂಸ್ಥೆ ಇನ್ಫೋಸಿಸ್​ ಸಂಸ್ಥೆಯನ್ನು ಸಂಪರ್ಕಿಸಿದಾಗ ಉತ್ತರಿಸಲು ನಿರಾಕರಿಸಿದರು ಎಂದು ವರದಿ ಮಾಡಿದೆ.

  ಬಹಳ ತುರ್ತು ಸಂದರ್ಭ ಬಂದ ಕಾರಣ ಕಂಪೆನಿ ಅನಿವಾರ್ಯವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈಗ ದೇಶದ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಕಂಪೆನಿ ತಿಳಿಸಿದೆ.

  ನಾವು ನಮ್ಮ ಕಂಪೆನಿಯ ಹಲವಾರು ತಂಡಗಳಿಗೆ ಮತ್ತೆ ನಮ್ಮ ಕ್ಯಾಂಪಸ್​ಗೆ ಬಂದು ಕೆಲಸ ಮಾಡಿ ಎಂದು ಸೂಚಿಸಿದ್ದೇವೆ. ನಮ್ಮ ಒಂದಷ್ಟುಉದ್ಯೋಗಿಗಳು ಸಹ ಕಚೇರಿಗೆ ಬಂದು ಕೆಲಸ ಮಾಡುವುದಕ್ಕೆ ಉತ್ಸುಕರಾಗಿದ್ದು, ಇದು ಸಹ ಅವರ ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು ಎಂದು ವರದಿಯಾಗಿದೆ.

  ಪ್ರಸ್ತುತ ಇನ್ಪೋಸಿಸ್​ ಕಂಪೆನಿಯ ಶೇ 99 ರಷ್ಟು ಜನ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಸಾಕಷ್ಟು ಮಂದಿ ಕಚೇರಿಗೆ ಬಂದು ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎಂದು ಸಂಸ್ಥೆಯ ಎಕ್ಸಿಕ್ಯೂಟಿವ್​ ತಿಳಿಸಿದ್ದಾರೆ.  ಇಡೀ ಪ್ರಪಂಚದ ಅತ್ಯಂತ ದೊಡ್ಡ ಐಟಿ ಜಾಲ ನಮ್ಮ ಭಾರತದಲ್ಲಿ ಇದ್ದು ಕೊರೋನಾ ಮೊದಲ ಅಲೆಯಲ್ಲಿ ಸಾಕಷ್ಟು ಹೊಡೆತ ತಿಂದಿತ್ತು.

  ಇದನ್ನೂ ಓದಿ: DK Shivakumar: ಸಿದ್ದರಾಮಯ್ಯ ಜೊತೆ ಮುನಿಸಿಲ್ಲ; ಬಿಜೆಪಿ ನಾಯಕತ್ವ ಬದಲಾವಣೆ ಆಗಲಿದೆ; ಡಿಕೆ ಶಿವಕುಮಾರ್​

  ವರ್ಕ್​ ಫ್ರಮ್​ ಹೋಮ್​ಗೆ ಹೊಂದಿಕೊಂಡಿರುವ ಐಟಿ ಕೆಲಸಗಾರರು ಈಗ ಮತ್ತೆ ಮರಳಿ ಕಚೇರಿಗೆ ಬಂದರೆ ಹೊಂದಿಕೊಳ್ಳುತ್ತಾರ ಎನ್ನುವ ಆತಂಕ ಮನೆ ಮಾಡಿದೆ ಎಂದು ಹಿರಿಯ ಉದ್ಯೋಗಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


  Published by:HR Ramesh
  First published: