Tik-Tok: ಅಶ್ಲೀಲತೆಯನ್ನು ಪ್ರಚೋದಿಸುವ ಟಿಕ್​ಟಾಕ್​​ ಆ್ಯಪ್​ಗೆ ನಿಷೇಧ ಹೇರಲು ಸರ್ಕಾರಕ್ಕೆ ಸೂಚಿಸಿದ ಮದ್ರಾಸ್​ ಹೈಕೋರ್ಟ್​

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಮದ್ರಾಸ್​ ಹೈಕೋರ್ಟ್​, ಟಿಕ್​ಟಾಕ್​ ವಿಡಿಯೋ ಆ್ಯಪ್ ಬಳಸುವ ಮಕ್ಕಳು ಲೈಂಗಿಕತೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವ ಸಾಧ್ಯತೆಯಿದೆ ಎಂದಿದೆ.

Sushma Chakre | news18
Updated:April 8, 2019, 11:19 PM IST
Tik-Tok: ಅಶ್ಲೀಲತೆಯನ್ನು ಪ್ರಚೋದಿಸುವ ಟಿಕ್​ಟಾಕ್​​ ಆ್ಯಪ್​ಗೆ ನಿಷೇಧ ಹೇರಲು ಸರ್ಕಾರಕ್ಕೆ ಸೂಚಿಸಿದ ಮದ್ರಾಸ್​ ಹೈಕೋರ್ಟ್​
ಟಿಕ್​ಟಾಕ್- ಸಾಂದರ್ಭಿಕ ಚಿತ್ರ
Sushma Chakre | news18
Updated: April 8, 2019, 11:19 PM IST
ನವದೆಹಲಿ (ಏ. 4): ವಾಟ್ಸಾಪ್​, ಫೇಸ್​ಬುಕ್​ಗಳಂತೆಯೇ ಡಬ್​ಸ್ಮಾಶ್​, ಟಿಕ್​ಟಾಕ್​ ವಿಡಿಯೋ ಆ್ಯಪ್​ಗಳು ಕೂಡ ಈಗ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲಿ ಜಾಗ ಪಡೆಯುತ್ತಿವೆ. ಈ ವಿಡಿಯೋ ಆ್ಯಪ್​ಗಳಿಗೆ ಕೆಲವರು ಅಡಿಕ್ಟ್​ ಆಗಿಬಿಟ್ಟಿರುತ್ತಾರೆ. ಟಿಕ್​ಟಾಕ್​ ಆ್ಯಪ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಚೈನೀಸ್ ಆ್ಯಪ್ ಅಶ್ಲೀಲತೆಯನ್ನು ಪ್ರಚೋದಿಸುವುದರಿಂದ ಟಿಕ್​ಟಾಕ್​ ಆ್ಯಪ್​ ಅನ್ನು ಬ್ಯಾನ್​ ಮಾಡಲು ಮದ್ರಾಸ್​ ಹೈಕೋರ್ಟ್​ ಸರ್ಕಾರಕ್ಕೆ ಸೂಚನೆ ನೀಡಿದೆ.

ಟಿಕ್​ಟಾಕ್​ ಆ್ಯಪ್​ನಲ್ಲಿ ವಿಭಿನ್ನ ಎಫೆಕ್ಟ್​ಗಳೊಂದಿಗೆ ವಿಡಿಯೋ ಚಿತ್ರೀಕರಿಸಬಹುದು ಮತ್ತು ಶಾರ್ಟ್​ ವಿಡಿಯೋಗಳನ್ನು ಶೇರ್​ ಮಾಡಬಹುದು. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿರುವ ಟಿಕ್​ಟಾಕ್​ ಟೈಂಪಾಸ್​ಗೆ ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಭಾರತದ 130 ಕೋಟಿ ಜನರು ಟಿಕ್​ಟಾಕ್​ ಬಳಸುತ್ತಿದ್ದಾರೆ.

ಧೈರ್ಯವಿದ್ದರೆ ಮೋದಿ ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ; ಪ್ರಧಾನಿಗೆ ಮಮತಾ ಬ್ಯಾನರ್ಜಿ ಸವಾಲು

ಈ ಬಗ್ಗೆ ಹೇಳಿಕೆ ನೀಡಿರುವ ತಮಿಳುನಾಡು ಐಟಿ ಸಚಿವ, ಟಿಕ್​ಟಾಕ್​ನ ಕೆಲವು ವಿಡಿಯೋಗಳು ಮತ್ತು ಕಂಟೆಂಟ್​ಗಳು ಅಶ್ಲೀಲತೆಯಿಂದ ಕೂಡಿವೆ. ಅವುಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಹಾಗೇ, ಬಲಪಂಥೀಯರು ಕೂಡ ಈ ಆ್ಯಪ್​ ಅನ್ನು ಬ್ಯಾನ್​ ಮಾಡಬೇಕೆಂದು ಈ ಮೊದಲೇ ಆಗ್ರಹಿಸಿದ್ದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಮದ್ರಾಸ್​ ಹೈಕೋರ್ಟ್​, ಟಿಕ್​ಟಾಕ್​ ವಿಡಿಯೋ ಆ್ಯಪ್ ಬಳಸುವ ಮಕ್ಕಳು ಲೈಂಗಿಕತೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವ ಸಾಧ್ಯತೆಯಿದೆ. ಇದರಲ್ಲಿ ಯಾವುದೇ ಫಿಲ್ಟರ್​ ಇಲ್ಲದ ಕಾರಣ ಯಾವ ರೀತಿಯ ವಿಡಿಯೋ ಬೇಕಾದರೂ ಎಫೆಕ್ಟ್​ಗಳೊಂದಿಗೆ ಚಿತ್ರೀಕರಿಸಬಹುದು. ಅಪರಿಚಿತರ ಜೊತೆಗೆ ಮಕ್ಕಳು ಬಹುಬೇಗ ಪರಿಚಯ ಮಾಡಿಕೊಳ್ಳಲು ಈ ಆ್ಯಪ್​ನಲ್ಲಿ ಅವಕಾಶವಿದೆ. ಇದರಿಂದ ಮುಂದೆ ಮಕ್ಕಳಿಗೆ ತೊಂದರೆಯಾಗಬಹುದು, ಅವರ ಮೇಲೆ ಅಪರಿಚಿತರು ದೌರ್ಜನ್ಯ ನಡೆಸಬಹುದು ಎಂದು ಹೇಳಿದೆ.

ಟಿಕ್​ಟಾಕ್​ ವಿಡಿಯೋಗಳನ್ನು ಮಾಧ್ಯಮಗಳು ಪ್ರಕಟಿಸಬಾರದು. ಈ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿಕೊಳ್ಳುವ ಮೊದಲು ಒಂದಷ್ಟು ನಿಬಂಧನೆಗಳನ್ನು ಹಾಕಬೇಕು. ಫೇಸ್​ಬುಕ್, ಟ್ವಿಟ್ಟರ್​ಗಳಿಗಿಂತ ಸುಲಭವಾಗಿ ಇವುಗಳನ್ನು ಡೌನ್​ಲೋಡ್​ ಮಾಡಿಕೊಂಡು ಬಳಸಲು ಅವಕಾಶ ಇರುವುದರಿಂದ ಬ್ಯಾನ್​ ಮಾಡಬೇಕೆಂದು ಕೋರ್ಟ್​ ಹೇಳಿದೆ. 

First published:April 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ