ಕಮಲನಾಥ್​ ಸೋದರಳಿಯ ರತುಲ್​ ಪುರಿಗೆ ಸೇರಿದ 300 ಕೋಟಿ ಮೌಲ್ಯದ ಬಂಗಲೆ, ವಿದೇಶಿ ಹೂಡಿಕೆ ಜಪ್ತಿ ಮಾಡಿದ ಐಟಿ ಇಲಾಖೆ

ಅಗಸ್ಟಾ ವೆಸ್ಟ್​ಲ್ಯಾಂಡ್​ ವಿವಿಐಪಿ ಚಾಪರ್​ ಪ್ರಕರಣದಲ್ಲಿ ರತುಲ್​ ಪುರಿ ಅಕ್ರಮವಾಗಿ ಹಣ ಸಂಪಾದಿಸಿದ ಆರೋಪ ಸಂಬಂಧ ಐಟಿ ಇಲಾಖೆ ತನಿಖೆ ನಡೆಸುತ್ತಿದೆ. ಇದು ರತುಲ್​ ಪುರಿ ವಿರುದ್ಧ ಆದಾಯ ತೆರಿಗೆ ಇಲಾಖೆ  ನಡೆಸಿರುವ ಎರಡನೇ ದಾಳಿಯಾಗಿದೆ.

HR Ramesh | news18
Updated:August 11, 2019, 9:00 PM IST
ಕಮಲನಾಥ್​ ಸೋದರಳಿಯ ರತುಲ್​ ಪುರಿಗೆ ಸೇರಿದ 300 ಕೋಟಿ ಮೌಲ್ಯದ ಬಂಗಲೆ, ವಿದೇಶಿ ಹೂಡಿಕೆ ಜಪ್ತಿ ಮಾಡಿದ ಐಟಿ ಇಲಾಖೆ
ರತುಲ್​ ಪುರಿ
  • News18
  • Last Updated: August 11, 2019, 9:00 PM IST
  • Share this:
ನವದೆಹಲಿ: ಬೇನಾವಿ ವಿರೋಧಿ ಕಾನೂನಿನಡಿ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರ ಸೋದರಳಿಯ ರತುಲ್​ ಪುರಿ ಅವರಿಗೆ ಸೇರಿದ ದೆಹಲಿಯ 300 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಮತ್ತು 40 ಮಿಲಿಯನ್​ ಡಾಲರ್​ (ಸುಮಾರು 2 ಸಾವಿರ ಕೋಟಿ) ವಿದೇಶಿ ಹೂಡಿಕೆ ಬಂಡವಾಳವನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.

ದೆಹಲಿಯ ಲುಟಿಯನ್ಸ್​ ವಲಯದ ಅಬ್ದುಲ್​ ಕಲಾಂ ರಸ್ತೆಯಲ್ಲಿ ಈ ಭವ್ಯವಾದ ಬಂಗಲೆ ಇದೆ. ಅಷ್ಟೇ ಅಲ್ಲದೇ, ಬೇನಾಮಿ ವಿರೋಧಿ ಕಾನೂನಿನಡಿ 40 ಮಿಲಿಯನ್​ ಡಾಲರ್​ ವಿದೇಶಿ ಹೂಡಿಕೆಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.

ಇದನ್ನು ಓದಿ: ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣ; ಕಪ್ಪುಹಣ ಸಂಗ್ರಹ ಆರೋಪದಲ್ಲಿ ವಕೀಲ ಗೌತಮ್ ಖೇತಾನ್​ ಬಂಧನ

ಅಗಸ್ಟಾ ವೆಸ್ಟ್​ಲ್ಯಾಂಡ್​ ವಿವಿಐಪಿ ಚಾಪರ್​ ಪ್ರಕರಣದಲ್ಲಿ ರತುಲ್​ ಪುರಿ ಅಕ್ರಮವಾಗಿ ಹಣ ಸಂಪಾದಿಸಿದ ಆರೋಪ ಸಂಬಂಧ ಐಟಿ ಇಲಾಖೆ ತನಿಖೆ ನಡೆಸುತ್ತಿದೆ. ಇದು ರತುಲ್​ ಪುರಿ ವಿರುದ್ಧ ಆದಾಯ ತೆರಿಗೆ ಇಲಾಖೆ  ನಡೆಸಿರುವ ಎರಡನೇ ದಾಳಿಯಾಗಿದೆ.

First published:August 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ