IT Raid: ಡೋಲೋ-650 ಕಂಪನಿ ಮೈಕ್ರೋ ಲ್ಯಾಬ್ಸ್​ಗೆ ಐಟಿ ದಾಳಿ!

Dolo-650: ಕೊರೋನಾ ಸಮಯದಲ್ಲಿ ಅತ್ಯಧಿಕ ಡಿಮ್ಯಾಂಡ್ ಪಡೆದ ಹಾಗೂ ಆ ಸಮಯದಲ್ಲಿ ಸಾಮಾನ್ಯ ಎಲ್ಲಾ ಮನೆಗಳಲ್ಲಿಯೂ ಲಭ್ಯವಿದ್ದ ಡೋಲೋ-650 ಮಾತ್ರೆ ತಯಾರಿಕಾ ಕಂಪನಿಗೆ ಐಟಿ ಅಧಿಕಾರಿಗಳು ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜು.07): ಕೊರೋನಾ ಸಮಯದಲ್ಲಿ ಭಾರತದಲ್ಲಿ (India) ಜನಪ್ರಿಯವಾದ ಟ್ಯಾಬ್ಲೆಟ್ (Tablet) ಡೋಲೋ 650 (Dolo 650) ತಯಾರಿಕ ಕಂಪನಿ ಮೇಲೆ ಐಟಿ ದಾಳಿ (IT Raid) ನಡೆದಿದೆ. ಕೊರೋನಾ ಪತ್ತೆಯಾದಾಗಿನಿಂದ ಡಿಮ್ಯಾಂಡ್ ಗಳಿಸಿದ ಈ ಟ್ಯಾಬ್ಲೆಟ್ ನಂತರದಲ್ಲಿ ಜನರು ತಮ್ಮ ಬ್ಯಾಗ್​ಗಳಲ್ಲಿ ಇಟ್ಟು ಓಡಾಡುವಷ್ಟು ಸಾಮಾನ್ಯವಾಗಿಬಿಟ್ಟಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್​ (Micro Labs LTD) ನಲ್ಲಿ ರೇಡ್ ಮಾಡಿದ್ದಾರೆ. ಡೋಲೋ-650 ಟ್ಯಾಬ್ಲೆಟ್ ತಯಾರಿಸುವ ಔಷಧೀಯ ಕಂಪನಿಯ ಹಲವು ಔಟ್​ಲೆಟ್​ಗಳಲ್ಲಿ ಶೋಧ ನಡೆಸಿದ್ದಾರೆ. ಐಟಿ ಇಲಾಖೆಯು (IT Department) ಕಂಪನಿಯ ಹಣಕಾಸು ದಾಖಲೆಗಳು, ಬ್ಯಾಲೆನ್ಸ್ ಶೀಟ್‌ಗಳು ಮತ್ತು ವ್ಯಾಪಾರ ವಿತರಕರ ಜಾಲಗಳಿಗೆ ಸಂಬಂಧಿಸಿದ ಹುಡುಕಾಟಗಳನ್ನು ನಡೆಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇತರ ಕಂಪನಿಗಳಲ್ಲಿ ಹಾಗೂ ಕಂಪನಿಯ ಇತರ ಲಿಂಕ್ ಇರುವಂತಹ ಸ್ಥಳಗಳಲ್ಲಿನಯೂ ರೇಡ್ ನಡೆಯಲಿದೆ ಎನ್ನಲಾಗಿದೆ. ಕಂಪನಿಯು ಮೌಖಿಕ ಘನವಸ್ತುಗಳು, ಮೌಖಿಕ ದ್ರವಗಳು ಚುಚ್ಚುಮದ್ದುಗಳವರೆಗೆ ವೈವಿಧ್ಯಮಯ ಔಷಧೀಯ ಉತ್ಪನ್ನಗಳನ್ನು ತಯಾರಿಸುತ್ತದೆ.

ಭಾರತದಾದ್ಯಂತ ಒಟ್ಟು 17 ಉತ್ಪಾದನಾ ಘಟಕಗಳು

ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಫಾರ್ಮಾ ಉತ್ಪನ್ನಗಳು ಮತ್ತು API ಗಳ (ಸಕ್ರಿಯ ಔಷಧೀಯ ಪದಾರ್ಥಗಳು) ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಮೈಕ್ರೋಲ್ಯಾಬ್ಸ್ ಭಾರತದಾದ್ಯಂತ 17 ಉತ್ಪಾದನಾ ಘಟಕಗಳನ್ನು ಹೊಂದಿದೆ.

ಪ್ರಮುಖ ಔಷಧೀಯ ಉತ್ಪನ್ನಗಳಿವು:

ಕಂಪನಿಯು ಉತ್ಪಾದಿಸುವ ಮತ್ತು ಮಾರಾಟ ಮಾಡುವ ಪ್ರಮುಖ ಉತ್ಪನ್ನಗಳಲ್ಲಿ ಡೊಲೊ-650, ಅಮ್ಲಾಂಗ್, ಲುಬ್ರೆಕ್ಸ್, ಡಯಾಪ್ರೈಡ್, ವಿಲ್ಡಾಪ್ರೈಡ್, ಓಲ್ಮಾಟ್, ಅವಾಸ್, ಟ್ರಿಪ್ರೈಡ್, ಬ್ಯಾಕ್ಟೋಕ್ಲಾವ್, ಟೆನೆಪ್ರೈಡ್-ಎಂ ಮತ್ತು ಅರ್ಬಿಟೆಲ್ ಸೇರಿವೆ.

ಕೊರೋನಾ ಎರಡನೇ ಅಲೆಯಲ್ಲಿ ಹೈಬ್ಯುಸಿನೆಸ್

ನೋವು ನಿವಾರಕವಾದ ಡೋಲೋ-650 ಟ್ಯಾಬ್ಲೆಟ್ ಅನ್ನು ಹಿಂಪಡೆಯಬೇಕು. ಇದು ಮನೆ ಮನೆಯ ಹೆಸರಾಗಿದೆ. ಕೋವಿಡ್ -19 ರ ವಿಶೇಷವಾಗಿ ಎರಡನೇ ಅಲೆಯ  ಸಮಯದಲ್ಲಿ ಕಡಿಮೆ ಜ್ವರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಮತ್ತು ಮೆಡಿಕಲ್ ಶಾಪ್ ಮಾಲೀಕರು ಈ ಮಾತ್ರೆಗಳನ್ನು ವ್ಯಾಪಕವಾಗಿ ಸೂಚಿಸಿದ್ದಾರೆ.

350 ಕೋಟಿ ಡೋಲೋ-650 ಟ್ಯಾಬ್ಲೆಟ್‌ ಮಾರಾಟ

ವರದಿಗಳ ಪ್ರಕಾರ, ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಕಂಪನಿಯು 350 ಕೋಟಿ ಡೋಲೋ-650 ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡಿದೆ. 400 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ.

ಇದನ್ನೂ ಓದಿ: Dolo 650: ಸಣ್ಣ-ಪುಟ್ಟ ರೋಗಕ್ಕೆಲ್ಲಾ ಡೋಲೋ 650 ಮಾತ್ರೆ ನುಂಗುವ ಮುನ್ನ ಎಚ್ಚರ!

ಮೈಕ್ರೋ ಲ್ಯಾಬ್ಸ್ ಕಂಪನಿಯ ಡೋಲೋ 650 ಮಾತ್ರೆ 2020ರಿಂದ ಈವರೆಗೆ ಅಧಿಕವಾಗಿ ಮಾರಾಟವಾಗಿರೋ ಮಾತ್ರೆಯಾಗಿದೆ. ಹೀಗಾಗಿ ಕಂಪನಿಯೂ 567 ಕೋಟಿ ಲಾಭಗಳಿಸಿದೆ. ಭಾರತದಲ್ಲಿ ಪ್ರಸ್ತುತವಾಗಿ ವಿವಿಧ ಬ್ರಾಂಡ್ ಗಳ 37 ಪ್ಯಾರಸಿಟಮಾಲ್ ಮಾತ್ರೆಗಳು ಮಾರುಕಟ್ಟೆಯಲ್ಲಿವೆ. ಜನವರಿ 2020ರಿಂದ ಈವರೆಗೆ ಪ್ಯಾರಸಿಟಮಾಲ್ ಡೇಟಾ ನೋಡಿದ್ರೆ. ಮಾರಾಟದಲ್ಲಿ ಡೋಲೋ 650 ಅಗ್ರಸ್ಥಾನದಲ್ಲಿದೆ.

ಮನೆ ಮನೆಯಲ್ಲೂ ಡೋಲೋ 650

ಇತ್ತೀಚಿನ ದಿನಗಳಲ್ಲಿ ದೇಶದ ಪ್ರತಿಯೊಬ್ಬರ ಮನೆಯಲ್ಲೂ ಡೋಲೋ 650 ಮಾತ್ರೆ ಇದೇ ಇರುತ್ತೆ. ಕೊರೋನಾ ಸಮಯದಲ್ಲಿ ಇದರ ಮಾರಾಟದ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಪ್ಯಾರಸಿಟಮಾಲ್ ಮಾರಾಟವನ್ನು ನೋಡಿದ್ರೆ ಡೋಲೋ 650 ಮೊದಲ ಸ್ಥಾನದಲ್ಲಿದ್ರೆ ಕ್ಯಾಲ್ಪಾಲ್ (Calpol) ಎರಡನೇ ಸ್ಥಾನದಲ್ಲಿದೆ. ಸುಮೋ ಎನ್ 3ನೇ ಸ್ಥಾನದಲ್ಲಿದೆ. ಡೋಲೋ 650 ಮಾತ್ರೆಯ ಜನಪ್ರಿಯತೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದ್ದು, ವಿವಿಧ ಮಿಮ್ಸ್ ಕೂಡ ಸೃಷ್ಟಿಸಿದೆ.

ಈ ಹಿಂದಿನ ವರದಿ ಪ್ರಕಾರ ಡೋಲೋ 650 ಮಾರಾಟದ ಡೇಟಾ

ಡಿಸೆಂಬರ್ 2021ರಲ್ಲಿ ಡೋಲೋ 650 ಟ್ಯಾಬ್ಲೆಟ್ 28.9 ಕೋಟಿ ರೂಪಾಯಿಯಷ್ಟು ಮಾರಾಟಗೊಂಡಿದೆ. ನವೆಂಬರ್ ತಿಂಗಳಲ್ಲೂ ಇಷ್ಟೇ ಮೌಲ್ಯದ ಮಾತ್ರೆಗಳು ಮಾರಾಟಗೊಂಡಿದೆ. 2021ರಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚಾಗಿದ್ದ ಸಮಯದಲ್ಲಿ ಹೆಚ್ಚಾಗಿ ಮಾರಾಟಗೊಂಡಿದೆ. ಏಪ್ರಿಲ್ ನಲ್ಲಿ 48.9 ಕೋಟಿ ಹಾಗೂ ಮೇ ತಿಂಗಳಲ್ಲಿ 44.2 ಕೋಟಿ ಮೌಲ್ಯದ ಮಾತ್ರೆಗಳು ಮಾರಾಟಗೊಂಡಿದೆ.

ಇದನ್ನೂ ಓದಿ: Explained: ಕೋವಿಡ್ ಸಂದರ್ಭದ ಸಂಜೀವಿನಿ‌ Dolo650 ವಿಶೇಷತೆ ಏನು? ಡೀಟೆಲ್ಸ್

ಇನ್ನು ಕ್ಯಾಲ್ಪೋಲ್ 2021ರ ಡಿಸೆಂಬರ್ ನಲ್ಲಿ 28 ಕೋಟಿ ಮಾರಾಟವಾಗಿದೆ. 2021ರ ಏಪ್ರಿಲ್ ನಲ್ಲಿ ದಾಖಲೆಯ 71.6 ಕೋಟಿಯಷ್ಟು ಮೌಲ್ಯದ ಮಾತ್ರೆಗಳು ಮಾರಾಟವಾಗಿದೆ. ಇವುಗಳ ಹೊರತಾಗಿ ಇತರ ಜನಪ್ರಿಯ ಬ್ರ್ಯಾಂಡ್ ಫೆಪಾನಿಲ್, ಪಿ-250, ಪ್ಯಾಸಿಮೋಲ್ ಮತ್ತು ಕ್ರೋಸಿನ್ ಕೂಡ ಸೇರಿದೆ.
Published by:Divya D
First published: