Boji: Istanbulನ ಸಾರ್ವಜನಿಕ ಸಾರಿಗೆಯ ನಿತ್ಯದ ಪ್ರಯಾಣಿಕ ಈ ಶ್ವಾನ!

ಈ ನಾಯಿ ದಿನಕ್ಕೆ 29 ಮೆಟ್ರೋ ನಿಲ್ದಾಣಗಳಲ್ಲಿ ಚಲಿಸುತ್ತದೆ ಮತ್ತು ಸಮುದ್ರ ಸಾರಿಗೆಯಲ್ಲಿ ಕೂಡ ಇದನ್ನು ಟ್ರ್ಯಾಕ್ ಮಾಡಲಾಗುತ್ತದೆ. ಬೋಜಿ ಸಾರ್ವಜನಿಕ ಸಾರಿಗೆಯ ನಿಯಮಗಳನ್ನು ಗೌರವಿಸುತ್ತದೆ ಮತ್ತು ಇತರ ಪ್ರಯಾಣಿಕರು ಇಳಿದು ಹೋಗುವವರೆಗೆ ಕಾದು, ಬಳಿಕ ತಾನು ಇಳಿಯುತ್ತದೆ.

ಇಸ್ತಾನ್​ಬುಲ್​ನ ಬೀದಿ ನಾಯಿ ಬೋಜಿ

ಇಸ್ತಾನ್​ಬುಲ್​ನ ಬೀದಿ ನಾಯಿ ಬೋಜಿ

  • Share this:
ಯೂರೋಪ್ ಮತ್ತು ಏಷ್ಯಾ ನಡುವೆ ಸಂಚರಿಸುವ ಪ್ರಯಾಣಿಕರಿಂದ ತುಂಬಿಕೊಂಡಿದ್ದ ದೋಣಿಯೊಂದರಲ್ಲಿ ಎಲ್ಲರ ಗಮನ ಕೂಡ ಸೀಟಿನ ಮೇಲೆ ಹಾಯಾಗಿ ಕುಳಿತು ಕಿಟಕಿಯ ಹೊರಗಿನ ದೃಶ್ಯವನ್ನು ಆನಂದಿಸುತ್ತಿದ್ದ ಪ್ರಯಾಣಿಕನೊಬ್ಬನ ಮೇಲಿತ್ತು. ಯಾಕಂತೀರಾ? ಆ ಪ್ರಯಾಣಿಕ ಅಂತಿಂಥವನಲ್ಲ, ನಾಲ್ಕು ಕಾಲಿನ ಪ್ರಯಾಣಿಕ ! ಹೌದು , ಅದು ಬೋಜಿ, ಒಂದು ಬೀದಿ ನಾಯಿ. ದೋಣಿಗಳಲ್ಲಿ , ಬಸ್‍ಗಳಲ್ಲಿ ಹಾಗೂ ಮೆಟ್ರೋ ಗಳಲ್ಲಿ ಬೋಜಿಯ ಪ್ರಯಾಣ ಇಸ್ತಾಂಬುಲ್‍ನಲ್ಲಿ ದಿನನಿತ್ಯದ ದೃಶ್ಯವಂತೆ. ವಾರದ ಸಾಮಾನ್ಯ ದಿನಗಳಲ್ಲಿ ಈ ನಾಯಿ, ಸಾರ್ವಜನಿಕ ಸಾರಿಗೆಗಳಲ್ಲಿ ಸುಮಾರು 30 ಕಿಲೋ ಮೀಟರ್ (20 ಮೈಲಿ) ದೀರ್ಘ ಪ್ರಯಾಣದ ಆನಂದವನ್ನು ಅನುಭವಿಸುತ್ತದೆ.

ಈ ನಾಯಿಗೆ ಒಂದು ಮೈಕ್ರೋಚಿಪ್ ಅಳವಡಿಸಲಾಗಿದ್ದು, ಆ ಮೂಲಕ ಇಸ್ತಾಂಬುಲ್ ಪುರಸಭೆಯ ಅಧಿಕಾರಿಗಳು ಅದರ ಪ್ರಯಾಣವನ್ನು ರೆಕಾರ್ಡ್ ಮಾಡುತ್ತಾರೆ. ಈ ನಾಯಿ ದಿನಕ್ಕೆ 29 ಮೆಟ್ರೋ ನಿಲ್ದಾಣಗಳಲ್ಲಿ ಚಲಿಸುತ್ತದೆ ಮತ್ತು ಸಮುದ್ರ ಸಾರಿಗೆಯಲ್ಲಿ ಕೂಡ ಇದನ್ನು ಟ್ರ್ಯಾಕ್ ಮಾಡಲಾಗುತ್ತದೆ, ವಾರಾಂತ್ಯದಲ್ಲಿ ಇದು ನಗರದ ರಾಜಕುಮಾರರ ದ್ವೀಪಗಳಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ಪುರಸಭೆಯ ಅಧಿಕಾರಿಗಳು. ಗೋಲ್ಡನ್ -ಬ್ರೌನ್ ಕೂದಲುಳ್ಳ , ಕಡುಬಣ್ಣದ ಕಣ್ಣಿನ ಮತ್ತು ಜೋತಾಡುವ ಕಿವಿಗಳ ಬೋಜಿ, ಎಲ್ಲರ ಗಮನ ಸೆಳಲೆಯಲು ಆರಂಭಿಸಿದ್ದು ಎರಡು ತಿಂಗಳ ಹಿಂದೆ.






ನಾಯಿ ನಮ್ಮ ಮೆಟ್ರೋ ಮತ್ತು ಟ್ರೈನ್‍ಗಳನ್ನು ಬಳಸುವುದನ್ನು ನಾವು ಗಮನಿಸಿದೆವು ಮತ್ತು ಅದಕ್ಕೆ ಎಲ್ಲಿ ಹೋಗಬೇಕು ಹಾಗೂ ಎಲ್ಲಿ ಇಳಿಯಬೇಕು ಎಂಬುವುದು ತಿಳಿದಿದೆ, ಅದಕ್ಕೆ ಏನೋ ಉದ್ದೇಶ ಇದ್ದಂತೆ ಕಾಣುತ್ತದೆ” ಎನ್ನುತ್ತಾರೆ ಇಸ್ತಾಂಬುಲ್ ಮೆಟ್ರೋದ ಆಯ್ಲಿನ್ ಎರೋಲ್. ಐತಿಹಾಸಿಕ ಟ್ರಾಮ್ ಲೈನ್‍ಗಳು ಬೋಜಿಗೆ ಅಚ್ಚುಮೆಚ್ಚು ಎಂಬುವುದು ಅದರ ಟ್ರ್ಯಾಕಿಂಗ್ ಸಾಧನದಿಂದ ಸಂಗ್ರಹಿಸಿರುವ ಮಾಹಿತಿಯಿಂದ ತಿಳಿದು ಬರುತ್ತದೆ. ಆದರೆ ಅದು ಪದೇ ಪದೇ ಸಬ್‍ವೇನಲ್ಲೂ ಪ್ರಯಾಣಿಸುತ್ತದೆ.

ಇದನ್ನೂ ಓದಿ: Meghana Raj: ಅಗಲಿದ ಮುದ್ದಿನ ನಾಯಿ ಬ್ರೂನೋಗಾಗಿ ಭಾವುಕರಾಗಿ ಪೋಸ್ಟ್​ ಮಾಡಿದ ಮೇಘನಾ ರಾಜ್​ ..!

ಬೋಜಿ ಸಾರ್ವಾಜನಿಕ ಸಾರಿಗೆಯ ನಿಯಮಗಳನ್ನು ಗೌರವಿಸುತ್ತದೆ. ಜೊತೆಗೆ ಇತರ ಪ್ರಯಾಣಿಕರು ಇಳಿದು ಹೋಗುವವರೆಗೆ ಕಾದು, ಬಳಿಕ ತಾನು ಇಳಿಯುತ್ತದೆ ಎನ್ನುತ್ತಾರೆ ಎರೋಲ್.ಈ ನಾಯಿಗೆ ಸಬ್‍ವೇ ಕ್ಯಾರಿಯೇಜ್‍ನ ಮಧ್ಯಭಾಗದಲ್ಲಿ ಪ್ರಯಾಣಿಸುವುದು ಎಂದರೆ ಬಹಳ ಇಷ್ಟ, ಅದನ್ನು ಟರ್ಕಿಶ್ ಭಾಷೆಯಲ್ಲಿ ಬೋಜಿ ಎಂದು ಕೂಡ ಕರೆಯುತ್ತಾರೆ. ಹಾಗಾಗಿ ಅಧಿಕಾರಿಗಳು ಈ ನಾಯಿಗೆ ಬೋಜಿ ಎಂಬ ಹೆಸರಿಟ್ಟಿದ್ದಾರೆ.

ಇಸ್ತಾಂಬುಲ್‍ನ 1.3 ಮಿಲಿಯನ್ ಪ್ರಯಾಣಿಕರ ಬದುಕಿನಲ್ಲಿ ಬೋಜಿ ಬಣ್ಣವನ್ನು ತುಂಬಿದೆ. ಇಸ್ತಾಂಬುಲ್‍ನ ಜನರು ಬೋಜಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಆ ನಾಯಿಯ ಸ್ವಂತ ಖಾತೆಗೆ 50 ಸಾವಿರಕ್ಕೂ ಹೆಚ್ಚು ಹಿಂಬಾಲಕರು ಇದ್ದಾರೆ.

ಇದನ್ನೂ ಓದಿ: Pet Dog: ಮನೆಯಲ್ಲಿ ನಾಯಿ ಸಾಕುವ ಮುನ್ನ ಈ ಸಂಗತಿಗಳು ತಿಳಿದಿರಲಿ..!

“ನೀವು ರೈಲು ಹತ್ತುತ್ತೀರಿ ಮತ್ತು ತಕ್ಷಣ ಬೋಜಿಯನ್ನು ಕಾಣುತ್ತೀರಿ. ಮತ್ತು ನೋಡಿ. ಅವನು ಹೀಗೆ ಬಿದ್ದುಕೊಂಡಿರುತ್ತಾನೆ. ನೀವು ಸುಮ್ಮನೆ ನಗುತ್ತೀರಿ ಮತ್ತು ಆ ಕ್ಷಣವನ್ನು ಸೆರೆ ಹಿಡಿಯುತ್ತೀರಿ, ನಿಜ. ಇದು ಇಸ್ತಾಂಬುಲ್‍ನ ಜನರಿಗೆ ಬೋಜಿ ನೀಡುವ ಪ್ರಚೋದನೆ, ನಾವೆಷ್ಟೇ ಅವಸರದಲ್ಲಿದ್ದರೂ ಇಸ್ತಾಂಬುಲ್ ಅನ್ನು ಆನಂದಿಸಲು ಸಾಧ್ಯ ಎಂಬುದನ್ನು ಕೂಡ ಅವನು ನಮಗೆ ನೆನಪಿಸುತ್ತಾನೆ” ಎನ್ನುತ್ತಾರೆ ಅವರು.
Published by:Anitha E
First published: