HOME » NEWS » National-international » ISROS GSAT 30 A COMMUNICATION SATELLITE LAUNCHED ABOARD ARIANE ROCKET FROM SOUTH AMERICA GNR

2020ರಲ್ಲಿ ಇಸ್ರೊ ಶುಭಾರಂಭ: ಜಿ-ಸ್ಯಾಟ್ ಸಂಪರ್ಕ ಉಪಗ್ರಹ ಯಶಸ್ವಿ ಉಡಾವಣೆ

ಇನ್ನು ಹೊಸ ವರ್ಷದ ಮೊದಲ ಭಾರತೀಯ ಉಪಗ್ರಹ ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಇಸ್ರೋಗೆ ಅಭಿನಂದನೆ ತಿಳಿಸಿದ್ದಾರೆ. ಇದು 2020ರ ವರ್ಷದ ಶುಭಾರಂಭ ಸುದ್ದಿ ಎಂದು ಸಂತಸ ವ್ಯಕ್ತಪಡಿಸಿದ್ಧಾರೆ.

news18-kannada
Updated:January 17, 2020, 12:24 PM IST
2020ರಲ್ಲಿ ಇಸ್ರೊ ಶುಭಾರಂಭ: ಜಿ-ಸ್ಯಾಟ್ ಸಂಪರ್ಕ ಉಪಗ್ರಹ ಯಶಸ್ವಿ ಉಡಾವಣೆ
2020ರಲ್ಲಿ ಇಸ್ರೊ ಶುಭಾರಂಭ: ಜಿ-ಸ್ಯಾಟ್ ಸಂಪರ್ಕ ಉಪಗ್ರಹ ಯಶಸ್ವಿ ಉಡಾವಣೆ
  • Share this:
ಬೆಂಗಳೂರು(ಜ.17): ಭಾರತ 2020ನೇ ವರ್ಷದ ಮೊದಲ ಉಪಗ್ರಹವನ್ನು ಫ್ರಾನ್ಸ್​​​ನ ಫ್ರೆಂಚ್​​ ಗಯಾನದಿಂದ ನಸುಕಿನಲ್ಲಿ ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಇಂದು ಉಡಾವಣೆಗೊಂಡ ಜಿ-ಸ್ಯಾಟ್ ಸಂಪರ್ಕ ಉಪಗ್ರಹ ನಿಗದಿತ ಕಕ್ಷೆ ಸೇರುವಲ್ಲಿ ಸಫಲವಾಗಲಿದೆ. ಈ ಮೂಲಕ ಭಾರತವೂ ಸಂಪರ್ಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ತಲುಪಿದೆ.ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಜಿ-ಸ್ಯಾಟ್ ಸಂಪರ್ಕ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಐರೋಪ್ಯ ಅಂತರಿಕ್ಷ ಸಂಸ್ಥೆ ನಿರ್ಮಾಣ ಮಾಡಿರುವ ಭಾರೀ ತೂಕದ ಉಡಾವಣಾ ವಾಹನ ಏರಿಯನ್-5(ವಿಎ 251) ಮೂಲಕ 2.35ರ ನಸುಕಿನಲ್ಲಿ ಜಿ-ಸ್ಯಾಟ್​​ ಸಂಪರ್ಕ ಉಪಗ್ರಹ ಯಶಸ್ವಿಯಾಗಿ ನಭಕ್ಕೆ ನೆಗೆದಿದೆ.ಉಡಾವಣೆಗೊಂಡ ಜಿ-ಸ್ಯಾಟ್ 30​​ ಸಂಪರ್ಕ ಉಪಗ್ರಹ 3 ,357 ಕೆಜಿ ತೂಕ ಇದೆ. ಈ ಉಪಗ್ರಹವು ಇನ್‍ಸ್ಯಾಟ್-4ಎ ಗಗನನೌಕೆಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುವಷ್ಟು ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಆಂಧ್ರದಲ್ಲಿ ಬಿಜೆಪಿ-ಜನಸೇನಾ ಮೈತ್ರಿ; ಅಧಿಕೃತ ಘೋಷಣೆ

ಭಾರತ ಸಂಪರ್ಕ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದೆ. ನಮ್ಮ ದೇಶವೂ ದ್ವೀಪಗಳ ಮೂಲಕ ಸಂಪರ್ಕ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಯತ್ನಿಸುತ್ತಿದೆ. ಇದು ಸಿ ಬ್ಯಾಂಡ್​​ ಮೂಲಕ ಏಷ್ಯಾ ಮತ್ತು ಆಸ್ಟ್ರೇಲಿಯಾದಂತಹ ರಾಷ್ಟ್ರಗಳೊಂದಿಗೆ ಸಂಪರ್ಕ ಹೊಂದಲು ಸಹಕಾರಿಯಾಗಲಿದೆ ಎಂದು ಇಸ್ರೋ ಮುಖ್ಯಸ್ಥಕೆ. ಶಿವನ್ ತಿಳಿಸಿದ್ದಾರೆ.

ಇನ್ನು ಹೊಸ ವರ್ಷದ ಮೊದಲ ಭಾರತೀಯ ಉಪಗ್ರಹ ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಇಸ್ರೋಗೆ ಅಭಿನಂದನೆ ತಿಳಿಸಿದ್ದಾರೆ. ಇದು 2020ರ ವರ್ಷದ ಶುಭಾರಂಭ ಸುದ್ದಿ ಎಂದು ಸಂತಸ ವ್ಯಕ್ತಪಡಿಸಿದ್ಧಾರೆ.
First published: January 17, 2020, 12:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories