ಚಂದ್ರನ ಮೊದಲ ಚಿತ್ರವನ್ನು ಕಳುಹಿಸಿದ ಚಂದ್ರಯಾನ-2

Chandrayaan2: ಚಂದ್ರನಿಂದ2,650 ಕಿ.ಮೀ ದೂರದಿಂದ ಚಂದ್ರನ ಮೇಲ್ಮೆಯನ್ನು ವಿಕ್ರಮ್​ ಲ್ಯಾಂಡರ್​ ಸೆರೆಹಿಡಿದಿದೆ. ಈ ಚಿತ್ರವನ್ನು ಆಗಸ್ಟ್​ 21ರಂದು ಸೆರೆಹಿಡಿಯಲಾಗಿದೆ ಎಂದು ಇಸ್ರೋ ತಿಳಿಸಿದೆ.

Seema.R | news18-kannada
Updated:August 22, 2019, 9:11 PM IST
ಚಂದ್ರನ ಮೊದಲ ಚಿತ್ರವನ್ನು ಕಳುಹಿಸಿದ ಚಂದ್ರಯಾನ-2
ಚಂದ್ರನ ಚಿತ್ರ ಕಳುಹಿಸಿದ ಚಂದ್ರಯಾನ 2
  • Share this:
ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದ ಚಂದ್ರಯಾನ-2 ಉಪಗ್ರಹ ಮೊದಲ ಬಾರಿ ಚಂದ್ರನ ಚಿತ್ರಣವನ್ನು ಸೆರೆಹಿಡಿದು ಕಳುಹಿಸಿದೆ ಎಂದು ಇಸ್ರೋ ಟ್ವೀಟ್​ ಮಾಡಿದೆ,

ಚಂದ್ರನಿಂದ 2,650 ಕಿ.ಮೀ ದೂರದಿಂದ ಚಂದ್ರನ ಮೇಲ್ಮೆಯನ್ನು  "ವಿಕ್ರಮ್​ ಲ್ಯಾಂಡರ್​" ಸೆರೆಹಿಡಿದಿದೆ. ಈ ಚಿತ್ರವನ್ನು ಆಗಸ್ಟ್​ 21ರಂದು ಸೆರೆಹಿಡಿಯಲಾಗಿದೆ ಎಂದು ಇಸ್ರೋ ತಿಳಿಸಿದೆ.

ಇನ್ನು ಈ ಚಿತ್ರದಲ್ಲಿ ಚಂದ್ರನ ಮೇಲಿರುವ ಅಪೋಲೊ ಕುಳಿ ಹಾಗೂ ಮೆರೆ ಓರಿಯಂಟೆಲ್​ ಜಲಾನಯನ ಪ್ರದೇಶ ಕೂಡ ಕಾಣಬಹುದಾಗಿದೆ.


583 ಅಡಿ ಅಗಲದ ಕುಳಿಯನ್ನು ನಾಸಾದ ಅಪೋಲೋ ಮಿಷನ್​ ಪತ್ತೆ ಹಚ್ಚಿತ್ತು. ಇದು ಚಂದ್ರನ ದಕ್ಷಿಣಾರ್ಧಗೋಳದಲ್ಲಿ ಕಾಣಬಹುದು. ನಾಸಾ ಪ್ರಕಾರ ಅಪೋಲೋ ಕುಳಿಗೊಳಗೆ ಅನೇಕ ಕುಳಿಗಳು ಇವೆ.

ಮತ್ತೊಂದೆಡೆ 950 ಕಿ.ಮೀ ಅಗಲದ ಮೇರೆ ಓರಿಯಂಟೇಲ್​ ಜಲಾನಯನ ಪ್ರದೇಶ ವಿದೆ. 3 ಬಿಲಿಯನ್​ ವರ್ಷಗಳಷ್ಟು ಹಳೆದಾದ ಇದು ಕ್ಷುದ್ರಗ್ರಹ ಆಕಾದ ವಸ್ತುವಿನ ಪ್ರಭಾವದಿಂದ ರೂಪುಗೊಂಡಿದೆ ಎನ್ನಲಾಗಿದೆ. ಇದನ್ನು ಭೂಮಿಯ ಅಂಗಳದಿಂದ ನೋಡಲು ಅಸಾಧ್ಯವಾಗಿದೆ ಎಂದು ಈ ಹಿಂದೆ ನಾಸಾ ತಿಳಿಸಿತು.

ಜುಲೈ 22ರಂದು ನಭಕ್ಕೆ ಜಿಗಿದ  ಚಂದ್ರಯಾನ ಯಶಸ್ವಿಯಾಗಿ ಅತ್ಯಂತ ನಿಖರವಾಗಿ ಚಂದ್ರನ ಕಕ್ಷೆಗೆ ಸೇರಿಸಲಾಗಿದೆ. ಯೋಜನೆಯ ಮಹತ್ವದ ಘಟ್ಟ ಯಶಸ್ವಿಯಾಗಿದೆ ಎಂದು ಕೆ ಶಿವನ್​ ಎರಡುದಿನದ ಹಿಂದೆ ಟ್ವೀಟ್​ ಮಾಡಿದ್ದರು.

First published: August 22, 2019, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading