ಇಸ್ರೋದಿಂದ ಕಾರ್ಟೊಸಾಟ್-3 ಸೇರಿ 14 ಉಪಗ್ರಹಗಳ ಯಶಸ್ವಿ ಉಡಾವಣೆ

1,625 ಕಿಲೋ ತೂಕವಿರುವ ಕಾರ್ಟೊಸ್ಯಾಟ್-3 ಉಪಗ್ರಹವು ಬೃಹತ್ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯವಾಗಲಿದೆ. ನಗರಾಭಿವೃದ್ಧಿ ಯೋಜನೆ, ಕರಾವಳಿ ಭಾಗದ ಭೂ ಬಳಕೆ ಇತ್ಯಾದಿ ವಿಚಾರಗಳಲ್ಲಿ ಈ ಉಪಗ್ರಹ ಉಪಯುಕ್ತವೆನಿಸಲಿದೆ.

Vijayasarthy SN | news18
Updated:November 27, 2019, 10:52 AM IST
ಇಸ್ರೋದಿಂದ ಕಾರ್ಟೊಸಾಟ್-3 ಸೇರಿ 14 ಉಪಗ್ರಹಗಳ ಯಶಸ್ವಿ ಉಡಾವಣೆ
ರಾಕೆಟ್ ಉಡಾವಣೆ
  • News18
  • Last Updated: November 27, 2019, 10:52 AM IST
  • Share this:
ಚೆನ್ನೈ(ನ. 27): ಭೂವೀಕ್ಷಣೆ ಉಪಗ್ರಹವಾದ CARTOSAT-3 ಹಾಗೂ 13 ಇತರ ನ್ಯಾನೋ(ಸಣ್ಣ) ಉಪಗ್ರಹಗಳನ್ನು ಇಸ್ರೋ ಸಂಸ್ಥೆ ಭೂಕಕ್ಷೆಗೆ ಕಳುಹಿಸಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್​ಎಲ್​ವಿ-ಸಿ47 ರಾಕೆಟ್ ಮೂಲಕ ಈ 14 ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸಲಾಗಿದೆ. ಇಂದು ಬೆಳಗ್ಗೆ 9:28ಕ್ಕೆ ಉಪಗ್ರಹಗಳನ್ನು ಹೊತ್ತ ರಾಕೆಟ್ ನಭಕ್ಕೆ ಹಾರಿತು. ಎಲ್ಲಾ ಉಪಗ್ರಹಗಳು ತಮ್ಮ ನಿಗದಿತ ಭೂಕಕ್ಷೆಗೆ ಯಶಸ್ವಿಯಾಗಿ ಸೇರಿಕೊಂಡಿವೆ ಎಂದು ಇಸ್ರೋ ಸಂಸ್ಥೆ ತಿಳಿಸಿದೆ.

ಮೂರನೇ ತಲೆಮಾರಿನ ಉಪಗ್ರಹವಾಗಿರುವ ಕಾರ್ಟೋಸ್ಯಾಟ್-3 ಅರ್ಥ್ ಇಮೇಜಿಂಗ್ ಮತ್ತು ಮ್ಯಾಪಿಂಗ್​ನ ಕಾರ್ಯ ನಿರ್ವಹಿಸುತ್ತದೆ. ಭೂವೀಕ್ಷಣೆಯ ಉಪಗ್ರಹವಾದ ಇದು ಅತ್ಯುನ್ನತ ರೆಸಲ್ಯೂಷನ್​ನ ಫೋಟೋ ತಂತ್ರಜ್ಞಾನ ಹೊಂದಿದೆ. ಅತ್ಯುತ್ತಮ ರೆಸಲ್ಯೂಷನ್ ಹೊಂದಿರುವ ಭೂಮಿಯ ಚಿತ್ರಗಳನ್ನು ಇದು ಕ್ಲಿಕ್ಕಿಸಬಲ್ಲುದು.

ಇದನ್ನೂ ಓದಿ: ಬೆಂಗಳೂರು ಗ್ರಾಹಕರಿಗೆ ಕಹಿಯಾದ ಈರುಳ್ಳಿ; ಕತ್ತರಿಸದಿದ್ದರೂ ಕಣ್ಣೀರಿಡಿಸುತ್ತಿದೆ ಈ ತರಕಾರಿ

“PSLV-C47 ರಾಕೆಟ್ ಕಾರ್ಟೊಸ್ಯಾಟ್-3 ಹಾಗೂ ಇತರ 13 ಉಪಗ್ರಹಗಳನ್ನು ಭೂಕಕ್ಷೆಗೆ ನಿಖರವಾಗಿ ಸೇರಿಸಿದೆ. ಮಾರ್ಚ್ ತಿಂಗಳವರೆಗೂ 13 ಯೋಜನೆಗಳನ್ನು ಜಾರಿಗೊಳಿಸುವ ಗುರಿ ಇದೆ” ಎಂದು ಇಸ್ರೋ ಮುಖ್ಯಸ್ಥ ಡಾ. ಕೆ. ಶಿವನ್ ತಿಳಿಸಿದ್ದಾರೆ.

ಕಾರ್ಟೋಸ್ಯಾಟ್ ಸರಣಿಯ 13 ಉಪಗ್ರಹಗಳನ್ನು ಮಾರ್ಚ್ ತಿಂಗಳಷ್ಟರಲ್ಲಿ ಪೂರ್ಣಗೊಳಿಸುವ ಗುರಿಯನ್ನು ಇಸ್ರೋ ಹೊಂದಿದೆ. ಇವತ್ತು ಕಳುಹಿಸಲಾಗಿರುವ ಕಾರ್ಟೊಸ್ಯಾಟ್-3 ಈ ಸರಣಿಯ 9ನೇ ಉಪಗ್ರಹವಾಗಿದೆ. ಇಂಥ ಇನ್ನೂ 4 ಉಪಗ್ರಹಗಳನ್ನು ಮುಂದಿನ ನೂರು ದಿನದಲ್ಲಿ ಭೂಕಕ್ಷೆಗೆ ಸೇರಿಸಲಾಗುತ್ತದೆ.

ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ ಮುದ್ದಿನ ನಾಯಿ ಈಗ ಇಂಟರ್ನೆಟ್​ನ ಹೊಸ ಸೆಲೆಬ್ರಿಟಿ!

1,625 ಕಿಲೋ ತೂಕವಿರುವ ಕಾರ್ಟೊಸ್ಯಾಟ್-3 ಉಪಗ್ರಹವು ಬೃಹತ್ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯವಾಗಲಿದೆ. ನಗರಾಭಿವೃದ್ಧಿ ಯೋಜನೆ, ಕರಾವಳಿ ಭಾಗದ ಭೂ ಬಳಕೆ ಇತ್ಯಾದಿ ವಿಚಾರಗಳಲ್ಲಿ ಈ ಉಪಗ್ರಹ ಉಪಯುಕ್ತವೆನಿಸಲಿದೆ. ಅದಕ್ಕೆಂದೇ ಈ ಉಪಗ್ರಹವನ್ನು ರೂಪಿಸಿ ಭೂಕಕ್ಷೆಗೆ ಸೇರಿಸಲಾಗಿದೆ. ಈ ಬೃಹತ್ ಉಪಗ್ರಹವು ಐದು ವರ್ಷ ಜೀವಿತಾವಧಿ ಹೊಂದಿದೆ.ಇವತ್ತು ಕಾರ್ಟೊಸ್ಯಾಟ್-3 ಜೊತೆ ರಾಕೆಟ್​ನಲ್ಲಿ ಉಡಾವಣೆಗೊಂಡ 13 ನ್ಯಾನೋ ಸೆಟಿಲೈಟ್​ಗಳು ಅಮೆರಿಕದವಾಗಿವೆ. ಈ ಮಿನಿ ಉಪಗ್ರಹಗಳೂ ಕೂಡ ಭೂವೀಕ್ಷಣೆಯ ಕಾರ್ಯನಿರ್ವಹಿಸುವ ವಿವಿಧ ಗುರಿ ಹೊಂದಿವೆ.

ಇನ್ನು ಈ 14 ಉಪಗ್ರಹಗಳನ್ನು ಆಗಸಕ್ಕೆ ಹೊತ್ತೊಯ್ದ ಪಿಎಸ್​ಎಲ್​ವಿ-ಸಿ47 ರಾಕೆಟ್​ಗೆ ಇದು 49ನೇ ಮಿಷನ್ ಆಗಿದೆ. ಎಲ್ಲಾ ಪ್ರಯತ್ನದಲ್ಲೂ ಅದು ಯಶಸ್ವಿಯಾಗಿದೆ. ಇಸ್ರೋದ ಅತ್ಯಂತ ನಂಬುಗೆಯ ರಾಕೆಟ್​ಗಳಲ್ಲಿ ಇದೂ ಒಂದು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: November 27, 2019, 10:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading