HOME » NEWS » National-international » ISRO SCIENTIST TAPAN MISRA SAYS HE WAS POISONED WITH ARSENIC SNVS

Tapan Misra – ನನ್ನ ಹತ್ಯೆಗೆ ನಡೆದಿತ್ತು ಯತ್ನ: ಇಸ್ರೋ ವಿಜ್ಞಾನಿ ತಪನ್ ಮಿಶ್ರಾ ಹೇಳಿಕೆ

2017ರ ಮೇ ತಿಂಗಳಲ್ಲಿ ತನಗೆ ಊಟದಲ್ಲಿ ಆರ್ಸೆನಿಕ್ ಟ್ರೈ ಆಕ್ಸೈಡ್ ಎಂಬ ವಿಷ ಹಾಕಿ ಕೊಲ್ಲಲು ಯತ್ನಿಸಲಾಗಿತ್ತು. ಏಮ್ಸ್ ಆಸ್ಪತ್ರೆಯ ಪರೀಕ್ಷಾ ವರದಿಯಲ್ಲೂ ತಮ್ಮ ದೇಹದಲ್ಲಿ ಆರ್ಸೆನಿಕ್ ಇರುವುದು ದೃಢಪಟ್ಟಿತ್ತು ಎಂದು ಇಸ್ರೋ ವಿಜ್ಞಾನಿ ತಪನ್ ಮಿಶ್ರಾ ಹೇಳಿದ್ಧಾರೆ.

news18
Updated:January 6, 2021, 10:49 AM IST
Tapan Misra – ನನ್ನ ಹತ್ಯೆಗೆ ನಡೆದಿತ್ತು ಯತ್ನ: ಇಸ್ರೋ ವಿಜ್ಞಾನಿ ತಪನ್ ಮಿಶ್ರಾ ಹೇಳಿಕೆ
ಅಹಮದಾಬಾದ್​ನಲ್ಲಿರುವ ಇಸ್ರೋ ಕೇಂದ್ರ ಕಚೇರಿ.
  • News18
  • Last Updated: January 6, 2021, 10:49 AM IST
  • Share this:
ಬೆಂಗಳೂರು(ಜ. 06): ವಿಜ್ಞಾನಿಗಳನ್ನ ಕೊಲ್ಲುವ ಮತ್ತು ಕಿಡ್ನಾಪ್ ಮಾಡುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರ ಹತ್ಯೆಗೆ ಪ್ರಯತ್ನ ನಡೆದ ಸಂಗತಿ ಬೆಳಕಿಗೆ ಬಂದಿದೆ. ಮೂರು ವರ್ಷಗಳಿಗೂ ಮುನ್ನ ತನ್ನನ್ನು ಕೊಲ್ಲಲು ಪ್ರಯತ್ನ ನಡೆದಿತ್ತು ಎಂದು ಇಸ್ರೋ ವಿಜ್ಞಾನಿ ತಪನ್ ಮಿಶ್ರಾ ಸೋಷಿಯಲ್ ಮೀಡಿಯಾದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಅವರು, ತನಗೆ ಊಟದಲ್ಲಿ ಆರ್ಸೆನಿಕ್ ಟ್ರೈ ಆಕ್ಸೈಡ್ ಎಂಬ ವಿಷವನ್ನು ಕೊಟ್ಟು ಕೊಲ್ಲಲು ಪ್ರಯತ್ನ ನಡೆದಿತ್ತು ಎಂದು ಹೇಳಿಕೊಂಡಿದ್ದಾರೆ. ವಿಷ ಸೇರಿದರೂ ತಾವು ಬದುಕಿ ಉಳಿದದ್ದು, ತಮ್ಮ ದೇಹದಲ್ಲಾದ ಬದಲಾವಣೆಗಳ ಫೋಟೋಗಳನ್ನ ಸಾಕ್ಷಿಯಾಗಿ ಅವರು ಅಪ್​ಲೋಡ್ ಮಾಡಿದ್ದಾರೆ.

ಇಸ್ರೋ ಕಚೇರಿಯಲ್ಲಿ 2017 ಮೇ 23ರಂದು ಪ್ರಚಾರ ಸಂದರ್ಶನದ ವೇಳೆ ತನಗೆ ವಿಷ ಉಳಿಸಲಾಗಿತ್ತು. ಊಟದ ನಂತರ ಕೊಡಲಾದ ದೋಸೆ ಮತ್ತು ಚಟ್ನಿಯಲ್ಲಿ ಆರ್ಸೆನಿಕ್ ವಿಷವನ್ನು ಬೆರೆಸಲಾಗಿದ್ದಿರಬಹುದು. ಜುಲೈ ತಿಂಗಳಲ್ಲಿ ಗೃಹ ವ್ಯವಹಾರಗಳ ಇಲಾಖೆಯ ಭದ್ರತಾ ಸಿಬ್ಬಂದಿ ತನ್ನನ್ನು ಭೇಟಿಯಾಗಿ ಆರ್ಸೆನಿಕ್ ವಿಷದ ವಿಚಾರವನ್ನು ತಿಳಿಸಿ ಎಚ್ಚರಿಸಿದರು. ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಲು ನೆರವಾದರು ಎಂದು ತಪನ್ ಮಿಶ್ರಾ ತಿಳಿಸಿದ್ದಾರೆ.

ವಿಷ ತಿಂದ ದಿನದ ನಂತರ ತಮಗೆ ಉಸಿರಾಟದ ತೊಂದರೆ, ಚರ್ಮ ಸಮಸ್ಯೆ, ಚರ್ಮ ಕಿತ್ತುಬರುವುದು, ಫಂಗಲ್ ಸೋಂಕು ಇತ್ತಾದಿ ತೀವ್ರತರದ ಆರೋಗ್ಯ ಸಮಸ್ಯೆಗಳು ತಮ್ಮನ್ನು ಕಾಡಿದವು ಎಂದು ಹೇಳಿದ ತಪನ್ ಮಿಶ್ರಾ, ದೆಹಲಿಯ ಏಮ್ಸ್ ಆಸ್ಪತ್ರೆಯ ವರದಿಯಲ್ಲಿ ತಮ್ಮ ಆರ್ಸೆನಿಕ್ ವಿಷ ಇರುವುದು ಖಚಿಪಡಿಸಲಾಗಿತ್ತು. ಅಮೆರಿಕ ದೇಶದವರು ಈ ಸಂಚಿನ ಹಿಂದಿರಬಹುದು ಎಂದೂ ತಪನ್ ಮಿಶ್ರಾ ಶಂಕಿಸಿದ್ದಾರೆ.

ಇದನ್ನೂ ಓದಿ: Bird Flu: ಹಕ್ಕಿ ಜ್ವರದಿಂದ ಕೇರಳದಲ್ಲಿ 50 ಸಾವಿರ ಪಕ್ಷಿಗಳ ಹತ್ಯೆಗೆ ನಿರ್ಧಾರ; ಕರ್ನಾಟಕದ ಗಡಿಯಲ್ಲಿ ಕಟ್ಟೆಚ್ಚರ

“ಇದು ಗೂಢಚಾರಿಕೆ ಉದ್ದೇಶದಿಂದ ಮಾಡಿದ ಕೃತ್ಯದಂತೆ ಕಾಣುತ್ತಿದೆ. ಸಿಂಥೆಟಿಕ್ ಅಪರ್ಚರ್ ರಾಡಾರ್ ನಿರ್ಮಾಣದ ನೈಪುಣ್ಯತೆ ಸೇರಿದಂತೆ ಬಹಳ ಮುಖ್ಯ ಮಿಲಿಟರಿ ತಂತ್ರಜ್ಞಾನದಲ್ಲಿ ಸಿದ್ಧಹಸ್ತರಾಗಿರುವ ವಿಜ್ಞಾನಿಯನ್ನ ಸಾಯಿಸುವ ಉದ್ದೇಶ ಇದ್ದಂತಿದೆ… ಈ ಘಟನೆಗಳನ್ನ ಭಾರತ ಸರ್ಕಾರ ತನಿಖೆಗೆ ಒಳಪಡಿಸಬೇಕು” ಎಂದು ತಪನ್ ಮಿಶ್ರಾ ಒತ್ತಾಯಿಸಿದ್ದಾರೆ.

ಮಿಶ್ರಾ ಅವರ ಈ ಆರೋಪದ ಬಗ್ಗೆ ಇಸ್ರೋ ಸಂಸ್ಥೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಇಸ್ರೋದ ಸೀನಿಯರ್ ಅಡ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿರುವ ತಪನ್ ಮಿಶ್ರಾ ಈ ತಿಂಗಳ ಕೊನೆಗೆ ನಿವೃತ್ತಿ ಹೊಂದಲಿದ್ದಾರೆ. ಈ ಮುಂಚೆ ಅವರು ಅಹ್ಮದಾಬಾದ್​ನಲ್ಲಿರುವ ಇಸ್ರೋದ ಸ್ಪೇಸ್ ಅಪ್ಲಿಕೇಶನ್ ಸೆಂಟರ್​ನಲ್ಲಿ ನಿರ್ದೇಶಕರಾಗಿ ಜವಾಬ್ದಾರಿ ನಿಭಾಯಿಸಿದ್ದರು.
Published by: Vijayasarthy SN
First published: January 6, 2021, 10:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories