ISRO: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋಗೆ ಪ್ರಮುಖ ಯಶಸ್ಸು, SSLV-D2 ಉಡಾವಣೆ ಯಶಸ್ವಿ!

SSLV-D2 ಉಡಾವಣೆ ಯಶಸ್ವಿ!

SSLV-D2 ಉಡಾವಣೆ ಯಶಸ್ವಿ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಹೊಸ ಸಾಹಸದಲ್ಲಿ ಸಣ್ಣ ಉಪಗ್ರಹ ಉಡಾವಣಾ ವಾಹಕದ ಮೂಲಕ ಉಡಾವಣೆಗೊಳಿಸಲಾಗಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಶ್ರೀಹರಿಕೋಟಾ(ಫೆ.10): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಅತ್ಯಂತ ಚಿಕ್ಕ ಉಪಗ್ರಹ SSLV-D2 ಅನ್ನು ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು. ಈ ಉಡಾವಣೆ ಯಶಸ್ವಿಯಾಗಿದೆ. ಕಳೆದ ವರ್ಷ ಆಗಸ್ಟ್ 7 ರಂದು ಈ ಉಡಾವಣೆಯಲ್ಲಿ ಗೊಂದಲ ಉಂಟಾಗಿತ್ತು. ಮೊದಲ ಉಡಾವಣೆಯಲ್ಲಿ ವಿಫಲವಾದ ನಂತರ ಈಗ ಹಲವು ಮಹತ್ವದ ಮಾರ್ಪಾಡುಗಳನ್ನು ಇಸ್ರೋ ಈ ಕಾರ್ಯಾಚರಣೆಯಲ್ಲಿ ಮಾಡಿ ಯಶಸ್ವಿ ಉಡಾವಣೆ ಮಾಡಿದೆ.


ಇದನ್ನೂ ಓದಿ: Joshimath: 12 ದಿನಗಳಲ್ಲಿ 5.4 ಸೆಂ.ಮೀ ಮುಳುಗಿದ ಜೋಶಿಮಠ, ಫೋಟೋ ಬಿಡುಗಡೆ ಮಾಡಿದ ಇಸ್ರೋ


ಇಂದಿನ ಉಡಾವಣೆಯಲ್ಲಿ, ಒಂದು ಪ್ರಾಥಮಿಕ ಉಪಗ್ರಹ ಮತ್ತು ಎರಡು ಸಹ-ಪ್ರಯಾಣಿಕ ಉಪಗ್ರಹ ಹೀಗೆ ಒಟ್ಟು 500 ಕೆ.ಜಿ ತೂಕದ ಭೂಮಿಯ ಕೆಳಹಂತ ಕಕ್ಷೆಗಳಲ್ಲಿ ಸುತ್ತಾಡುವ ಸಾಮರ್ಥ್ಯದ ಸ್ಯಾಟಲೈಟ್‌ಗಳನ್ನು ರಾಕೆಟ್ ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದೆ. ರಾಕೆಟ್ ಭೂ ವೀಕ್ಷಣಾ ಉಪಗ್ರಹ EOS-07 ಜೊತೆಗೆ, ಅಮೆರಿಕಾದ ಸಂಸ್ಥೆಯ ಉಪಗ್ರಹ Janus-1 ಮತ್ತು ಚೆನ್ನೈ ಮೂಲದ ಸ್ಟಾರ್ಟ್ ಅಪ್ SpaceKidz ನ Azaadi SAT-2 ಅನ್ನು ಸಹ ಭೂಮಿಯ ಕಕ್ಷೆಯಲ್ಲಿ ಇರಿಸಲಾಗಿದೆ. ಎಸ್‌ಎಸ್‌ಎಲ್‌ವಿ-ಡಿ2' ಪ್ರಮುಖವಾಗಿ 156.3 ಕೆ.ಜಿ ತೂಕದ ಇಒಎಸ್-07 ಪ್ರಧಾನ ಉಪಗ್ರಹವಾಗಿದೆ.



ಎಸ್‌ಎಸ್‌ಎಲ್‌ವಿಯನ್ನು ಆರ್ಥಿಕವಾಗಿ ಮತ್ತು ಉದ್ಯಮದ ಉತ್ಪಾದನೆಗೆ ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲು. ಯಶಸ್ವಿ ಉಡಾವಣೆಯು ಈಗ 10 ರಿಂದ 500 ಕೆಜಿ ತೂಕದ ಸಣ್ಣ ಉಪಗ್ರಹಗಳಿಗೆ ಬೇಡಿಕೆ ಆಧಾರಿತ ಉಡಾವಣಾ ಸೇವೆಯನ್ನು ಪ್ರಾರಂಭಿಸಲು ಇಸ್ರೋಗೆ ಅವಕಾಶವನ್ನು ನೀಡುತ್ತದೆ.


ಆಜಾದಿ ಸ್ಯಾಟ್ ಹಿರಿಮೆ: ಹೆಣ್ಮಕ್ಕಳ ಸಾಧನೆ


ಆಜಾದಿ ಸ್ಯಾಟ್ ಹವ್ಯಾಸಿ ರೇಡಿಯೊ ಸಂವಹನ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಬಾಹ್ಯಾಕಾಶದಲ್ಲಿ ವಿಕಿರಣ ಮಟ್ಟವನ್ನು ಅಳೆಯುತ್ತದೆ ಮತ್ತು ವಿಸ್ತರಿಸಬಹುದಾದ ಉಪಗ್ರಹ ರಚನೆಯನ್ನು ಪ್ರದರ್ಶಿಸುತ್ತದೆ. ಭಾರತದಾದ್ಯಂತ 75 ಶಾಲೆಗಳ 750 ಬಾಲಕಿಯರು ಈ ಉಪಗ್ರಹವನ್ನು ಅಭಿವೃದ್ಧಿಪಡಿಸಿರುವುದು ವಿಶೇಷ.


ಇದನ್ನೂ ಓದಿ: ISRO Recruitment: 100 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಇಸ್ರೋ


ಉಪಗ್ರಹದೊಳಗೆ ಸ್ಥಾಪಿಸಲಾದ 75 ಪ್ರಯೋಗಗಳಿಂದ ತಾಪಮಾನ ಮತ್ತು ಮರುಹೊಂದಿಕೆ ಎಣಿಕೆಯಂತಹ ಡೇಟಾವನ್ನು ಅಳೆಯುವ ಗುರಿಯನ್ನು 'ಆಜಾದಿಸ್ಯಾಟ್' ಹೊಂದಿದೆ. ರಾಷ್ಟ್ರೀಯ ಕೆಡೆಟ್ ಕೋರ್ (ಎನ್‌ಸಿಸಿ) ಸ್ಥಾಪನೆಯ 75ನೇ ವರ್ಷಾಚರಣೆ ಗೌರವಾರ್ಥವಾಗಿ ಎನ್‌ಸಿಸಿಯ ಹಾಡನ್ನು ಇಸ್ರೋದ ರಾಕೆಟ್ ಉಡಾವಣೆ ವೇಳೆ ನುಡಿಸಲಾಗುತ್ತದೆ ಎಂದು ತಿಳಿದುಬಂದಿದೆ.


.



SSLV-D2 ವಿಶೇಷತೆ ಏನು?


ಇದು 10 ರಿಂದ 500 ಕೆ.ಜಿ ಭಾರದ ವಸ್ತುಗಳನ್ನು ಅಂದರೆ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, * ಕೇವಲ 72 ಗಂಟೆಗಳಲ್ಲಿ ಈ ಉಡಾವಣಾ ವಾಹಕವನ್ನು ಸಿದ್ಧಪಡಿಸಿ ಲಾಂಚ್‌ಪ್ಯಾಂಡ್ (ಉಡಾವಣೆ ಸ್ಥಳ)ನಲ್ಲಿ ಇರಿಸಬಹುದು. ಭೂಮಿಯ ಮೇಲ್ಬಾಗದಲ್ಲಿನ 500 ಕಿ.ಮೀ ಎತ್ತರಕ್ಕೆ ಉಪಗ್ರಹಗಳನ್ನು ಸುರಕ್ಷಿತವಾಗಿ ಒಯ್ದು ಕಕ್ಷೆಗೆ ಸೇರಿಸುವ ಸಾಮರ್ಥ್ಯ ಈ ಸಣ್ಣ ಉಪಗ್ರಹ ಉಡಾವಣಾ ವಾಹಕಕ್ಕೆ ಇದೆ.

Published by:Precilla Olivia Dias
First published: