HOME » NEWS » National-international » ISRO LAUNCHES 19 SATELLITES INCLUDING AMAZONIA 1 OF BRAZIL SNVS

ಅಮೇಜಾನಿಯಾ ಜೊತೆಗೆ ಭಗವದ್ಗೀತೆ, 25 ಸಾವಿರ ಮಂದಿ ಹೆಸರನ್ನೂ ನಭಕ್ಕೆ ಕಳುಹಿಸಿದ ಇಸ್ರೋ

ಬ್ರೆಜಿಲ್​ನ ಅಮೇಜಾನಿಯಾ-1, ಎನ್ಎಸ್ಐಎಲ್​ನ 14 ಹಾಗೂ ಇಸ್ರೋ ಸಹಭಾಗಿತ್ವದ 4 ಸೆಟಿಲೈಟ್​ಗಳನ್ನ ಇಂದು ಶ್ರೀಹರಿಕೋಟಾದಲ್ಲಿ ಪಿಎಸ್ಎಲ್​ವಿ-ಎಸ್51 ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು.

news18
Updated:February 28, 2021, 11:47 AM IST
ಅಮೇಜಾನಿಯಾ ಜೊತೆಗೆ ಭಗವದ್ಗೀತೆ, 25 ಸಾವಿರ ಮಂದಿ ಹೆಸರನ್ನೂ ನಭಕ್ಕೆ ಕಳುಹಿಸಿದ ಇಸ್ರೋ
ಪಿಎಸ್​ಎಲ್​ವಿ ರಾಕೆಟ್
  • News18
  • Last Updated: February 28, 2021, 11:47 AM IST
  • Share this:
ನವದೆಹಲಿ(ಫೆ. 28): ಈ ವರ್ಷದ ತನ್ನ ಮೊದಲ ಉಡಾವಣೆಯಲ್ಲಿ ಇಸ್ರೋ ಸಂಸ್ಥೆ ಬ್ರೆಜಿಲ್​ನ ಅಮೇಜಾನಿಯಾ-1 ಸೇರಿದಂತೆ 19 ಸೆಟಿಲೈಟ್​ಗಳನ್ನ ಆಗಸಕ್ಕೆ ಕಳುಹಿಸಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಭಾನುವಾರ ಬೆಳಗ್ಗೆ 810:24ಕ್ಕೆ ಪಿಎಸ್​ಎಲ್​ವಿ-ಸಿ51 ರಾಕೆಟ್ ಮೂಲಕ ಈ 19 ಉಪಗ್ರಹಗಳನ್ನ ಉಡಾವಣೆ ಮಾಡಲಾಯಿತು.

ಈ 19 ಉಪಗ್ರಹಗಳ ಪೈಕಿ ಬ್ರೆಜಿಲ್ ದೇಶದ ಅಮೇಜಾನಿಯಾ-1 ಉಪಗ್ರಹ ಪ್ರಮುಖವಾದುದು. ಇದು ಭಾರತದಲ್ಲಿ ಉಡಾವಣೆಗೊಂಡ ಮೊದಲ ಬ್ರೆಜಿಲಿಯನ್ ಸೆಟಿಲೈಟ್ ಆಗಿದೆ. 637 ಕಿಲೋ ತೂಕದ ಅಮೇಜಾನಿಯಾ-1 ಉಪಗ್ರಹವು ಅಮೇಜಾನ್ ಪ್ರದೇಶದ ಅಮೂಲ್ಯ ಅರಣ್ಯನಾಶವನ್ನು ಗುರುತಿಸಲು ಹಾಗೂ ಬ್ರೆಜಿಲ್​ನ ವೈವಿಧ್ಯಮಯ ಕೃಷಿಕಾರಿಕೆಯ ವಿಶ್ಲೇಷಣೆ ಮಾಡಲು ಬಳಕೆಯಾಗಲಿದೆ.

ಚೆನ್ನೈನ ಸ್ಪೇಸ್ ಕಿಡ್ಸ್ ಇಂಡಿಯಾದ SD SAT ಸೇರಿದಂತೆ ಇಸ್ರೋ ಸಹಯೋಗದ ನಾಲ್ಕು ಉಪಗ್ರಹ ಹಾಗೂ ಎನ್​ಎಸ್​ಐಎಲ್​ನ 14 ಉಪಗ್ರಹಗಳು ಉಡಾವಣೆಗೊಂಡಿವೆ. ಸ್ಪೇಸ್ ಕಿಡ್ಸ್ ಇಂಡಿಯಾದವರ ಸೆಟಿಲೈಟ್ ಜೊತೆಗೆ ಭಗವದ್ಗೀತೆ ಇರುವ ಎಸ್​ಡಿ ಕಾರ್ಡನ್ನೂ ಕಳುಹಿಸಲಾಗಿದೆ. ಹಾಗೆಯೇ, ಅದರ ಎಸ್​ಡಿ ಸ್ಯಾಟ್ ಮೂಲಕ 25 ಸಾವಿರ ಮಂದಿಯ ಹೆಸರನ್ನೂ ಕಳುಹಿಸಿದೆ.

ಇದನ್ನೂ ಓದಿ: Covid-19 Vaccine: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ, ಖಾಸಗಿ ಆಸ್ಪತ್ರೆಗಳಲ್ಲಿ 250 ರೂಗೆ ಕೋವಿಡ್​ ಲಸಿಕೆ

ಎನ್​ಎಸ್​ಐಎಲ್ (ನ್ಯೂಸ್ ಸ್ಪೇಸ್ ಇಂಡಿಯಾ ಲಿ) ಎಂಬುದು ಇಸ್ರೋದ ಹೊಸ ವಾಣಿಜ್ಯ ವಿಭಾಗವಾಗಿದೆ. ಅಮೆರಿಕದ ಸ್ಪೇಸ್​ಫ್ಲೈಟ್ ಜೊತೆ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಎನ್​ಎಸ್​ಐಎಲ್​ನ ಮೊದಲ ಕಮರ್ಷಿಯಲ್ ಮಿಷನ್ ಇದಾಗಿದೆ.
Published by: Vijayasarthy SN
First published: February 28, 2021, 11:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories